Untitled Document
Sign Up | Login    
ಬಗೆ ಬಗೆಯ ಚಾಯ್

ಬಗೆಬಗೆಯ ಚಹಾ, ಕೇಕ್ ಇನ್ನಿತರ ಅಹಾರ ವಸ್ತುಗಳು.

ಚಹಾ ಪ್ರಪಂಚದ ಯಾವ ನೆಲದಲ್ಲಿ ಬೆಲೆದಿದ್ದರೂ ಅದು ಒಂದೇ ಆಗಿರುತ್ತದೆ. ಆದರೆ ಅದರಲ್ಲಿ ವೈಶಿಷ್ಟ ಬರುವುದು ಆ ಎಲೆಯನ್ನು ಯಾವ ಕಾಲದಲ್ಲಿ ಮತ್ತು ಗಿಡದ ಯಾವ ಭಾಗದಿಂದ ಕಿತ್ತದ್ದರೆ ಎಂಬ ಅಂಶ ಯಾರಿಗೂ ತಿಳಿಯದು.

ಬ್ರಿಟಿಷ್ ಕಾಲದಿಂದಲೂ ಚಹಾದ ಸ್ವಾದವಿರುವುದು ಎಲೆ ಮತ್ತು ಚಿಗುರಿನಲ್ಲಿ. ಎಲೆಯನ್ನು ಪುಡಿಮಾಡಿದ ನಂತರ ಉಳಿದ ಧೂಳನ್ನು ಭಾರತೀಯರು ಅನಾದಿ ಕಾಲದಿಂದಲೂ ಉಪಯೋಗಿಸಿಕೊಂಡು ಬಂದಿದ್ದಾರೆ. ಸ್ವಾದ ಮತ್ತು ಶಕ್ತಿ ಭರಿತ ಎಲೆಯಿಂದ ಚಹಾದ ತಾಜಾತನವನ್ನು ಸವಿಯಬಹುದು. ಬಹುತೇಕರು ಚಹಾ ಎಂದರೆ ಒಂದು ಬಗೆಯ ಪುಡಿಯೆಂದೇ ಇಂದಿಗೂ ನಂಬಿದ್ದಾರೆ.

ಇತ್ತಿಚಿನ ದಿನಮಾನಗಳಲ್ಲಿ ಕಡಿಮೆ ಕೊಬ್ಬಿನಾಂಶ ಇರುವ ಪರಿಶುದ್ಧ ಎಣ್ಣೆ ಬಳಸಿ ತಯಾರಿಸಿದ ಪೌಷ್ಟಿಕ ಆಹಾರ ಪದಾರ್ಥಗಳ ಸೇವನೆಗೆ ಗ್ರಾಹಕರು ಉತ್ಸುಕರಾಗಿದ್ದಾರೆ. ತಾಜಾ ತರಕಾರಿ ಮಿಕ್ಸ್, ಗ್ರೀನ್ ಸಲಾಡ್, ಸ್ಯಾಂಡ್ ವಿಚ್, ಬರ್ಗರ್, ಹಣ್ಣಿನ ರಸ, ಔಷಧೀಯ ಗುಣಗಳ ಪಾನೀಯ ಮತ್ತು ಮಿತಾಹಾರಗಳಿಗೆ ಹೆಚ್ಚಿನ ಬೇಡುಕೆ . ಕಾಫಿ, ಟೀ ಸೇವನೆಯಲ್ಲಿಯೂ ಗ್ರಹರು ವೈವಿಧ್ಯತೆ ಮೆರೆಯುತ್ತಾರೆ. ಹಿತಮಿತ ಬಳಕೆಯೊಂದಿಗೆ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸುತ್ತರೆ. ಜನರ ಲೈಫ್ ಸ್ಟೈಲ್ ಮತ್ತು ಆಹಾರ ಸೇವನೆ ಶೈಲಿಯೂ ದಿನೇ ದಿನೇ ಬದಲಾಗುತ್ತಿದೆ.ಹೊಸ ಪರಿಸರದತ್ತ ನೋಟ ಹರಿಸುತ್ತಿದ್ದಾರೆ.

ಚಾಯ್ ಬಾರ್...
ಗ್ರೀನ್ ಟೀ, ಬ್ಲ್ಯಾಕ್ ಟೀ, ಊಲಾಂಗ್ ಟೀ, ಕುಡಿಂಗ್ ಟೀ, ಬರ್ನ್ಟ್ ಟೀ.... ಜೊತೆಗೆ ಆಯುರ್ವೇದ ಮತ್ತು ಗಿಡಮೂಲಿಕೆ (ಹರ್ಬಲ್ ಇನ್ ಫೂಶನ್ಸ್) ಸೇರಿದಂತೆ ಏಕಕಾಲಕ್ಕೆ ನೂಎಉ ಬಗೆಯ ಟೀ ಇಲ್ಲಿ ಲಭ್ಯ. ಬಹುಶಃ ಈ ಬಗೆಯ ಟೀ ಬಾರ್ ಅನ್ನು ಮತ್ತೆಲ್ಲೂ ಕಾನಲು ಸಾಧ್ಯವಿಲ್ಲ.

ಸಾಮಾನ್ಯವಾಗಿ ಹಾಲು, ಸಕ್ಕರೆ ಬಳಸಿ ಟೀ ಮಾಡುತ್ತಾರೆ. ಆದರೆ ಇಲ್ಲಿ ಹಾಲು ಸಕ್ಕರೆ ಬಳಸದೆಯೂ ಬಗೆಬಗೆಯ ತಾಜಾ ಚಹಾ ಮತ್ತು ತುಲಸಿ, ಮಲ್ಲಿಗೆ, ನಿಂಬೆ ಮುಂತಾದ ಫ್ಲೇವರ್ ಬರಿತ ಗಮಗಮಿಸುವ ಟೀ ಸಿದ್ಧವಾಗುತ್ತದೆ. ಬಿಸಿ, ತಣ್ಣನೆ ಮತ್ತು ಮಾಕ್ ಟೇಲನ್ನು ಟೀ ಬಾರ್ ನಲ್ಲಿ ಕುಳಿತು ಸವಿಯಬಹುದಾಗಿದೆ. ಜೊತೆಗೆ ಅತ್ಯಾಕರ್ಷಕ ವಿನ್ಯಾಸದ ಟೀ ಕ್ರಾಕರೀಎಸ್(ಆಕ್ಸೆಸರೀಸ್) ಮತ್ತು ಟೀ ಮಾಹಿತಿಯ ಪುಸ್ತಕಗಳನ್ನೂ ಇಲ್ಲಿ ಮಾರಾಟಕ್ಕೆ ಇಡಲಾಗಿದೆ.

ಬೆಂಗಳೂರಿನ ಜಯನಗರದ 3ನೇ ಬ್ಲಾಕ್, ಕಾಸ್ಮೋಪೊಲಿಟನ್ ಕ್ಲಬ್ ಸಮೀಪ, ದೀಪಂ ಸಿಲ್ಕ್ಸ್ ಎದುರು (ಎಸ್.ಎಂ.ಟವರ್ಸ್, ಮೊದಲನೇ ಮಹಡಿ, 11ನೇ ಮುಖ್ಯ ರಸ್ತೆ) ಟೇ ರೆಸ್ಟೊರೆಂಟ್ ಗ್ರಾಹಕರ ಗಮನಸೆಳೆದಿದೆ.. ಟೇ ಎಂಬುದು ಬ್ರ್ಯಾಂಡ್ ಹೆಸರು.
ಏಕಕಾಲಕ್ಕೆ ಸುಮಾರು 125 ಗ್ರಾಹಕರು ಸುಸಜ್ಜಿತ ಆಸನಗಳಲ್ಲಿ ಕುಳಿತು ಆರಾಮವಾಗಿ ಟೀ ಸೇವಿಸುವ ಟೀ ವೈನ್ ಡೈನ್ ಮಲ್ಟಿ ಕ್ಯುಸೈನ್ ರೆಸ್ಟೋ ಲಾಂಜ್ ಇಲ್ಲಿದೆ ಸುಮಾರು 20ರಿಂದ 25 ಗ್ರಾಹಕರು ಒಂದೆಡೆ ಕುಳಿತು ಹುಟ್ಟುಹಬ್ಬ, ಕಿಟ್ಟಿಪಾರ್ಟಿ, ಪುಸ್ತಕ ಬಿಡುಗಡೆ ಅಥವಾ ಕಾರ್ಪೋರೇಷನ್ ಸಭೆನದೆಸಲು ವೈ-ಫೆ, ಪ್ರೊಜೆಕ್ಟರ್ ನೊಂದಿಗೆ ಸುಸಜ್ಜಿತ ಹವಾ ನಿಯಂತ್ರಿತ ಕಾನ್ ಫರೆನ್ಸ್ ಹಾಲ್, ಸೌಲಭ್ಯವಿದೆ. ಬಫೆಟ್, ಲಂಚ್, ಡಿನ್ನರ್, ಭಾರತೀಯ ಮತ್ತು ಪಾಶ್ಚಾತ್ಯ ಕ್ಯುಸೈ, ಹೈ ಟೀ ಮತ್ತು ಬೇಕರಿ ಪದಾರ್ಥಗಳೂ ಲಭ್ಯ.

ಭಾರತ (ಅಸ್ಸಾಂ, ಡಾರ್ಜಿಲಿಂಗ್, ಸಿಕ್ಕಿಂ, ಬಿಹಾರ್) ನೇಪಾಳ, ಚೈನಾ, ಜಪಾನ್, ಆಫ್ರಿಕಾ ಮುಂತಾದ ದೇಶಗಳ ಬಗೆಬಗೆಯ ಸ್ವಾದಿಷ್ಟ ಟೀಸೊಪ್ಪುಗಳು ಇಲ್ಲಿ ಲಭ್ಯ. ಹ್ಯಾಂಡ್ ಕ್ರಾಫ್ಟೆಡ್, ಹರ್ಬಲ್ ಮತ್ತು ಆಯುರ್ವೇದಿಕ್ ಟೀಯನ್ನು ಇಲ್ಲಿ ಸವಿಯ ಬಹುದಾಗಿದೆ. ಸ್ವಾದಿಷ್ಟ ಟೀ ಜೊತೆಗೆ ಪೌಷ್ಟಿಕ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳೂ ಲಭ್ಯ. ವಿವಿಧ ಬಗೆಯ ಇಟಾಲಿಯನ್ ಸಲಾಡ್, ಇಟಾಲಿಯನ್ ಪಾಸ್ತಾ, ಗಾರ್ಲಿಕ್ ಬ್ರೆಡ್, ರೋಟಿ, ಪುಲ್ಕಾ, ಸೂಪ್ ಮತ್ತು ವೈನನ್ನು ಕೂಡಾ ಸರ್ವ್ ಮಾಡಲಾಗುತ್ತದೆ.

ಶುಚಿರುಚಿಯಾದ ಡೆಸರ್ಟ್ ಗಳು (ಐಸ್ ಕ್ರೀಮ್, ಚಾಕೊಲೆಟ್, ಕೇಕ್, ಇಟಾಲಿಯನ್ ಮತ್ತು ಯುರೋಪಿಯನ್ ಸಿಹಿ ತಿಂಡಿಗಳು) ಲಭ್ಯ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹುಟ್ಟುಹಬ್ಬ, ವೀಕೆಂಡ್, ಕಿಸ್ ಮಸ್, ವ್ಯಾಲೆಂಟೈನ್ ಮುಂತಾದ ವಿಶೇಷ ಸಂದರ್ಭಗಳಲ್ಲಿ ಅತ್ಯಾಕರ್ಷಕ ಕೇಕ್ಗಳನ್ನು ತಯಾರಿಸಲಾಗುತ್ತದೆ. ಸೀಗಡಿ, ಸ್ಕ್ವಿಡ್ಸ್, ಮೀನಿನ ಖಾದ್ಯಗಳನ್ನೂ ಪೂರೈಸಲಾಗಿತ್ತದೆ. ಗ್ರಾಹಕರಿಗೆ ಆಹ್ಲಾದಕರ ಪರಿಸರದಲ್ಲಿ ಉತ್ತಮ ಸೇವೆಯೊಂದಿಗೆ ಆರೋಗ್ಯಪೂರ್ಣ ತಾಜಾ ಟೀ ಮತ್ತು ಸ್ವಾದಿಷ್ಟ ಆಹಾರ ಪೂರೈಸುವುದು ಟೇ ರೆಸ್ಟೋರೆಂಟಿನ ಧ್ಯೇಯವಾಗಿದೆ.
ದೇಶ-ವಿದೇಶಗಳಲ್ಲಿ 20ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಹೆಸರಾಂತ ಶೆಫ್ ಜಿ. ಸುಂದರ್ ಇಲ್ಲಿನ ಖಾದ್ಯಗಳ ತಯಾರಿಯ ಮೇಲ್ವಿಚಾರಕರು, ಬಫೆ ಇಲ್ಲಿನ ವಿಶೇಷ, ಹೋಂ ಡೆಲಿವರಿ, ಜೊತೆಗೆ ನಿಮ್ಮ ಸ್ಥಲಕ್ಕೆ ನಮ್ಮ ಬಾಣಸಿಗರ ತಂಡ ಆಗಮಿಸಿ ಟೀ ಮತ್ತು ಆಹಾರವನ್ನು ವಿನೂತನ ಬಗೆಯಲ್ಲಿ ಸಿದ್ಧಪಡಿಸಿ, ಸರ್ವ ಮಾಡುತ್ತದೆ. ನಂತರ ಸ್ವಚ್ಚಗೊಳಿಸುವ ಕೆಲಸವೂ ಅವರದೇ ಆಗಿದೆ.

 

Author : seema s bhat

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited