Untitled Document
Sign Up | Login    
ವೆಲಂಟೈನ್ಸ್ ಡೇ ಗೆ ಗುಲಾಬಿ ರಫ್ತಿಗೆ ಉದ್ಯಾನ ನಗರಿ ಸಿದ್ದ

ಗುಲಾಬಿ ಬೆಳೆ (ಫೈಲ್ ಪೊಟೊ)

ಇನ್ನೇನು ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಅಂತಯೇ ಉದ್ಯಾನನಗರಿ ಬೆಂಗಳೂರು ರಂಗು ರಂಗಿನ ಗುಲಾಬಿ ಹೂಗಳನ್ನು ರಫ್ತು ಮಾಡಲು ಸಿದ್ದವಾಗಿದೆ.

ಹೌದು. ಪ್ರೇಮಿಗಳ ದಿನಾಚರಣೆ ಹಿನ್ನಲೆಯಲ್ಲಿ ಬೆಂಗಳೂರಿನಿಂದ 40 ಲಕ್ಷಕ್ಕೂ ಹೆಚ್ಚು ಗುಲಾಬಿಗಳು ವಿವಿಧ ದೇಶಗಳಿಗೆ ರಫ್ತಾಗುತ್ತವೆ. ಆಸ್ಟ್ರೇಲಿಯಾ, ಯುರೋಪ್, ಲಂಡನ್, ಸಿಂಗಾಪುರಾ, ಮಲೇಷಿಯಾ ರಾಷ್ಟ್ರಗಳಿಗೆ ಇಲ್ಲಿಂದಲೆ ರಫ್ತಾಗುತ್ತದೆ. ಅದರಲ್ಲೂ ಪಾಲೀ ಹೌಸ್ ಗಳಲ್ಲಿ ಬೆಳೆಸುವ ಡಚ್ ಗುಲಾಬಿಗೆ ಹೆಚ್ಚಿನ ಬೇಡಿಕೆಯಿದೆ.
ಕೆಂಪು ಬಣ್ಣದ ಗ್ರ್ಯಾಂಡ್ ಗಾಲಾ, ಡಚ್ ಗುಲಾಬಿ, ತಾಜ್ ಮಹಲ್, ಫ್ಯಾಷನ್ ಬೊರ್ಡೋ, ಫಸ್ಟ್ ರೆಡ್ ಮುಂತಾದ ವಿಧದ ರೋಜಾ ಹುಗಳು ಪ್ರೇಮಿಗಳ ದಿನಾಚರಣೆ ಹಿನ್ನಲೆಯಲ್ಲಿ ವಿದೇಶಕ್ಕೆ ತೆರಳಲಿದೆ.

ಡಚ್ ಗುಲಾಬಿ ಬೆಳೆಯಲ್ಲಿ ರಾಜ್ಯ ದೇಶದಲ್ಲೇ ಪ್ರಥಮಸ್ಥಾನದಲ್ಲಿದ್ದು, ಹೆಬ್ಬಾಳದ ಅಂತರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ದೇಶದಲ್ಲೇ ಮೊದಲ ಸ್ಥಾನದಲ್ಲಿರುವುದು ವಿಶೇಷ.

 

Author : ಲೇಖಾ ಆರ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited