Untitled Document
Sign Up | Login    
ಶಿಕ್ಷಕಿಯಲ್ಲಿದೆ ದೇಶ ವಿದೇಶಗಳ ಅಂಚೆಚೀಟಿ, ನಾಣ್ಯಗಳು

ಯೋಗಿತಾ - ಶಿಕ್ಷಕಿ

ಕರಾವಳಿ ಜಿಲ್ಲೆಯೇ ಹಾಗೆ.... ಒಂದಿಲ್ಲೋಂದು ವಿಶೇಷತೆಯ ನೆಲೆವೀಡು. ಅಪರೂಪದ ಪ್ರತಿಭೆಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೋಂಡಿರುವ ನಾಡು ಅದು.

ಈ ಜಿಲ್ಲೆಯಲ್ಲಿ ಅನೇಕ ಮಹಿಳಾ ಸಾಧಕಿಯರಿದ್ದಾರೆ.ಉನ್ನತ ಹುದ್ದೆಯಲ್ಲೂ ಈ ಪ್ರದೇಶದ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಅಪೂರ್ವವಾದ ಬೇರೆ ಬೇರೆ ಹವ್ಯಾಸದಲ್ಲೂ ತಮ್ಮನ್ನು ಮೈಗೂಡಿಸಿಕೊಂಡಿದ್ದಾರೆ .

ಇಂದು ಮಹಿಳೆ ಕಚೇರಿಯ ಕೆಲಸದ ಒತ್ತಡದ ನಡುವೆಯೂ ಮನೆ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಅಲ್ಲದೇ ತನ್ನ ಅಭಿರುಚಿಗೆ ತಕ್ಕಂತ ಹವ್ಯಾಸವನ್ನೂ ಮುಂದುವರೆಸಿಕೊಂಡು ಹೋಗುವ ನೈಪುಣ್ಯತೆ ಅವಳದ್ದು.ಅಂತಹ ಅಪರೂಪದ ಹವ್ಯಾಸವನ್ನು ಮೈಗೂಡಿಸಿಕೊಂಡಿರುವ ಶಿಕ್ಷಕಿಯೊಬ್ಬರು ಇಲ್ಲಿದ್ದಾರೆ.

ವಿದ್ಯಾರಶ್ಮಿ ವಿದ್ಯಾಲಯದ ಶಿಕ್ಷಕಿಯಾಗಿರುವ ಯೋಗಿತ ಪ್ರಪಂಚದ ಪುರಾತನ ನಾಣ್ಯ ಹಾಗೂ ಅಂಚೆಚೀಟಿ ಸಂಗ್ರಹಿಸುವ ಹವ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಬಳಿ ದೇಶ ವಿದೇಶಗಳ ವೈಶಿಷ್ಟ್ಯ ಪೂರ್ಣವಾದ ಸಾವಿರಾರು ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹವಿದೆ.

ವಿವಿಧ ದೇಶಗಳ ನಾಣ್ಯಗಳು
ಅಷ್ಟೇ ಅಲ್ಲದೆ ಇವರು ರಾಷ್ಟ್ರೀಯ ಯೋಗ ಪಟು ಕೂಡಾ ಹೌದು. ವಿಶ್ವವಿದ್ಯಾನಿಲಯ,ರಾಜ್ಯ ಮಟ್ಟದಲ್ಲಿ ಅನೇಕ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ.

ಬಾಲ್ಯದಿಂದಲೇ ಅಂದರೆ ಏಳನೇ ತರಗತಿಯಲ್ಲಿರುವಾಗಲೇ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹದ ಬಗ್ಗೆ ಅಭಿರುಚಿ ಮೂಡಿತಂತೆ. ಅಲ್ಲದೇ ಶಾಲಾ, ಕಾಲೇಜು ಜೀವನದಲ್ಲಿ ಅವರಿಗೆ ಮನೆಯವರು ಮತ್ತು ಸ್ನೇಹಿತರು ಈ ಹವ್ಯಾಸಕ್ಕೆ ಪೋತ್ಸಾಹ ನೀಡಿದರಂತೆ.

4ವರ್ಷಗಳ ಹಿಂದೆ ಬೆಳ್ತಂಗಡಿ ತಾಲ್ಲೂಕಿನ ಗಿರಿ ನಿವಾಸಿ ಪ್ರದೀಪ್ ಎಂಬ ಶಿಕ್ಷಕರನ್ನು ವಿವಾಹವಾಗಿರುವ ಯೋಗಿತಾ, ಎಲ್ಲಾ ಕೆಲಸಗಳಲ್ಲೂ ಪತಿ ಸಹಕಾರ ನೀಡುತ್ತಿದ್ದು, ತಮ್ಮ ಹವ್ಯಾಸವನ್ನು ಇಂದಿಗೂ ಮುಂದುವರೆಸಿಕೊಂಡು ಬರಲು ಸಹಾಯವಾಯಿತು ಎಂದು ಸಂತಸ ಹಂಚಿಕೊಳ್ಳುತ್ತಾರೆ.
ವಿವಿಧ ಅಂಚೆಚೀಟಿಗಳು
ಯು.ಎಸ್.ಎ, ಯು.ಎ.ಇ, ಕುವೈಟ್, ಪೋರ್ಚುಗಲ್, ಥೈಲಾಂಡ್, ಶ್ರೀಲಂಕಾ, ಭೂತಾನ್, ಸ್ವೀಸರ್‌ಲ್ಯಾಂಡ್, ಭಾರತ , ಆಸ್ಟ್ರೇಲಿಯಾ, ಇಂಗ್ಲೇಂಡ್, ಮಲೇಶಿಯ, ಇಂಡೊನೇಶಿಯಾ, ಕೀನ್ಯ, ಡೆನ್ಮಾರ್ಕ್, ಪಾಕಿಸ್ಥಾನ, ನೇಪಾಳ, ಚಿಲಿ ಹೀಗೆ ಅನೇಕ ದೇಶಗಳ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಹೀಗೆ ಪ್ರಪಂಚದ ಎಲ್ಲಾ ದೇಶಗಳ ವಿವಿಧ ಅಂಚೆ ಚೀಟಿಗಳನ್ನು ಯೋಗಿತಾರ ಸಂಗ್ರಹದಲ್ಲಿ ಕಾಣಬಹುದು.

ಎಲೆಮರೆಯ ಕಾಯಿಯಂತಿರುವ ಶಿಕ್ಷಕಿ ಯೋಗಿತಾ ಹೀಗೆ ಇನ್ನಷ್ಟು ಪುರಾತನವಾದ ದೇಶ, ವಿದೇಶಿ ನಾಣ್ಯ ಹಾಗೂ ಅಂಚೆಚೀಟಿಗಳನ್ನು ಸಂಗ್ರಹಿಸಿ, ಅವರ ಯೋಗ ಪ್ರತಿಭೆಯನ್ನು ಎಲ್ಲರೂ ಗುರುತಿಸುವಂತಾಗಲಿ ಎಂಬುದೇ ನಮ್ಮ ಆಶಯ.

 

Author : ತೇಜೇಶ್ ಎಸ್.

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited