ನವದೆಹಲಿ : ರೈಲ್ವೆ ಸಚಿವ ಸುರೇಶ್ ಪ್ರಭು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಸತ್ಯನಾರಾಯಣ ಚೌಧರಿ ಅವಿರೋಧವಾಗಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಪಿ.ಚಿದಂಬರಂ ಮಹಾರಾಷ್ಟ್ರ ರಾಜ್ಯದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಸಚಿವ ಪ್ರಫುಲ್ ಪಟೇಲ್, ಬಿಜೆಪಿಯ ವಿನಯ್ ಸಹಸ್ರಬುದ್ದೆ ಮತ್ತು ವಿಕಾಸ್ ಮಹಾತ್ಮೆ ಮತ್ತು ಶಿವಸೇನೆಯ ಸಂಜಯ್ ರಾವತ್ ಸಹ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಬಿಹಾರದಿಂದ ಜೆಡಿಯು ಶರದ್ ಯಾದವ್, ಖ್ಯಾತ ವಕೀಲ ರಾಮ್ ಜೇಠ್ಮಲಾನಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸ ಭಾರ್ತಿ, ಬಿಜೆಪಿಯ ಗೋಪಾಲ್ ನಾರಾಯಣ್ ಸಿಂಗ್ ಕೂಡ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.