Untitled Document
Sign Up | Login    
Dynamic website and Portals
  
May 22, 2016

ಬಿಸಿಸಿಐ ನೂತನ ಅಧ್ಯಕ್ಷರಾಗಿ ಅನುರಾಗ್ ಠಾಕೂರ್ ಆಯ್ಕೆ

ಅನುರಾಗ್ ಠಾಕೂರ್ ಅನುರಾಗ್ ಠಾಕೂರ್

ಮುಂಬೈ : ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನೂತನ ಅಧ್ಯಕ್ಷರಾಗಿ ಅನುರಾಗ್ ಠಾಕೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಳಗ್ಗೆ ನಡೆದ ಬಿಸಿಸಿಐ ವಿಶೇಷ ಮಹಾಸಭೆಯಲ್ಲಿ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ 1963ರ ಬಳಿಕ ಬಿಸಿಸಿಐ ಅಧ್ಯಕ್ಷ ಹುದ್ದೆಗೇರುತ್ತಿರುವ ಅತಿ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಸ್ವತಂತ್ರ ಚೇರ್ಮನ್ ಆಗಿ ಶಶಾಂಕ್ ಮನೋಹರ್ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಹುದ್ದೆ ತೆರವುಕೊಂಡಿತ್ತು. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಅನುರಾಗ್ ಠಾಕೂರ್ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಸಿಎಬಿ, ಅಸ್ಸಾಂ, ತ್ರಿಪುರ, ಎನ್​ಸಿಸಿ ಹಾಗೂ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಗಳು ಠಾಕೂರ್ ಅವರನ್ನು ಬೆಂಬಲಿಸಿದ್ದವು. ಇನ್ನು ಅನುರಾಗ್ ಠಾಕೂರ್ ರಾಜೀನಾಮೆಯಿಂದ ತೆರವಾಗಿರುವ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಜಯ್ ಶಿರ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Sports

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
 • ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
 • ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದೆ.
 • ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳು ಅಗತ್ಯ : ರಾಮಲಿಂಗಾರೆಡ್ಡಿ
 • ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited