Untitled Document
Sign Up | Login    
Dynamic website and Portals
  
April 10, 2015

ಯಮೆನ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಅಂತ್ಯ :ವಿ.ಕೆ.ಸಿಂಗ್ ಗೆ ಅದ್ದೂರಿ ಸ್ವಾಗತ

ಯಮೆನ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಅಂತ್ಯ :ವಿ.ಕೆ.ಸಿಂಗ್ ಗೆ ಅದ್ದೂರಿ ಸ್ವಾಗತ

ನವದೆಹಲಿ : ಯುದ್ಧ ಪೀಡಿತ ಯಮೆನ್‌ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ನಾಗರಿಕರನ್ನು ರಕ್ಷಿಸಿ ಅವರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಭಾರತ ಸರ್ಕಾರ ಆರಂಭಿಸಿದ್ದ "ಆಪರೇಷನ್‌ ರಾಹತ್‌' ಅಂತ್ಯಗೊಂಡಿದೆ.


ಆಪರೇಷನ್‌ ರಾಹತ್‌ ಹೆಸರಿನಲ್ಲಿ ಆರಂಭಗೊಂಡಿದ್ದ ಬೃಹತ್‌ ರಕ್ಷಣಾ ಕಾರ್ಯಾಚರಣೆಯಲ್ಲಿ ಸುಮಾರು 5,600 ಜನರನ್ನು ಸಂಘರ್ಷ ಪೀಡಿತ ಯಮೆನ್‌ ರಾಷ್ಟ್ರದ ವಿವಿಧ ಭಾಗಗಳಿಂದ ರಕ್ಷಿಸಲಾಗಿದ್ದು, ಇವರಲ್ಲಿ 4,640 ಜನರು ಭಾರತೀಯರಾಗಿದ್ದರೆ 960 ಜನ ವಿದೇಶಿಯರಾಗಿದ್ದಾರೆ. ಸುಮಾರು 41 ದೇಶಗಳಿಗೆ ಸೇರಿದ ವಿದೇಶಿ ನಾಗರಿಕರನ್ನು ಭಾರತೀಯ ಸೇನೆ ರಕ್ಷಿಸಿದೆ.


ತೀವ್ರ ಸ್ವರೂಪದ ಯುದ್ಧ ಸನ್ನಿವೇಶದ ನಡುವೆಯೂ ಕಠಿಣ ಪರಿಸ್ಥಿತಿಯಲ್ಲಿ ಆಪರೇಷನ್‌ ರಾಹತ್‌ ಅನ್ನು ಯಶಸ್ವಿಗೊಳಿಸಿ ಭಾರತೀಯರೂ ಸೇರಿದಂತೆ ವಿದೇಶಿ ನಾಗರಿಕರ ಪ್ರಾಣ ರಕ್ಷಣೆ ಮಾಡಿರುವ ಭಾರತೀಯ ಸೇನೆಯ ಮೂರು ದಳಗಳ ಸಾಧನೆಯನ್ನು ಭಾರತೀಯ ವಿದೇಶಾಂಗ ಖಾತೆಯ ರಾಜ್ಯ ಸಚಿವ ಜ| ವಿ.ಕೆ.ಸಿಂಗ್‌ ಅವರು ವಿಶೇಷವಾಗಿ ಅಭಿನಂದಿಸಿದ್ದಾರೆ.

'ಯೆಮನ್‌ ರಾಜಧಾನಿ ಸನಾದಲ್ಲಿ ವಾಯುದಾಳಿ ನಡೆಯುತ್ತಿತ್ತು, ಅಲ್ಲಿಂದ ನಮ್ಮನ್ನು ತೆರಳುವಂತೆ ಸೂಚಿಸಲಾಗಿತ್ತು ಆದರೆ ನಾವು ಅದ್ಹೇಗೋ ಒಪ್ಪಿಗೆಯನ್ನು ಪಡೆದುಕೊಂಡು ಸಂಕಷ್ಟದಲ್ಲಿದ್ದ ನಮ್ಮವರನು ರಕ್ಷಿಸಲು ಪಣತೊಟ್ಟೆವು. ಹೀಗೆ ರಾಹತ್‌ ಕಾರ್ಯಾಚರಣೆಯುದ್ದಕ್ಕೂ ನಮಗೆ ಹಲವು ಸವಾಲುಗಳು ಎದುರಾದವು ಎಂಬುದನ್ನು ಸಚಿವ ವಿ.ಕೆ. ಸಿಂಗ್‌ ನೆನಪಿಸಿಕೊಂಡರು.

ರಾಹತ್‌ ಕಾರ್ಯಾಚರಣೆ ಅಂತ್ಯಗೊಳಿಸಿ ಕೊನೆಯ ತಂಡದೊಡನೆ ಸಚಿವ ವಿ.ಕೆ.ಸಿಂಗ್‌ ಅವರು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರನ್ನು ಸ್ವಾಗತಿಸಲು ಹಲವರು ಅಲ್ಲಿ ನೆರೆದಿದ್ದಿದ್ದು ವಿಶೇಷವಾಗಿತ್ತು.

ವೆಂಟಿಲೇಟರ್‌ ವ್ಯವಸ್ಥೆಗೊಳಪಟ್ಟಿದ್ದ ನವಜಾತ ಶಿಶುವೊಂದನ್ನೂ ಸಹ ಈ ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿದೆ.

ಅಪರೇಷನ್‌ ರಾಹತ್‌ ಅಂತ್ಯಗೊಂಡಿದೆ ಮಾತ್ರವಲ್ಲದೆ ಸನಾದಲ್ಲಿರುವ ಭಾರತೀಯ ದೂತಾವಾಸ ಕಛೇರಿಯನ್ನೂ ಸಹ ಮುಚ್ಚಲಾಗಿದೆ ಎಂಬುದಾಗಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಟ್ಟಿಟರ್ ನಲ್ಲಿ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited