Untitled Document
Sign Up | Login    
Dynamic website and Portals
  
March 18, 2015

2ಕ್ಕಿಂತ ಹೆಚ್ಚು ಮಕ್ಕಳಿದ್ದವರಿಗೆ ಮತದಾನದ ಹಕ್ಕು ನೀಡಬಾರದು: ಸಾಧ್ವಿ ಪ್ರಾಚಿ

ಬಹರೈಚ್ : ಈ ಹಿಂದೆ 'ಅನ್ಯ ಕೋಮಿನವರು 40 ಮಕ್ಕಳನ್ನು ಹೆರುತ್ತಾರೆಂದರೆ, ಹಿಂದುಗಳು 4 ಮಕ್ಕಳನ್ನು ಹೆರುವುದರಲ್ಲಿ ತಪ್ಪಿಲ್ಲ' ಎಂದು ಹೇಳಿ ವಿವಾದ ಸೃಷ್ಟಿಸಿದ್ದ ವಿಶ್ವ ಹಿಂದು ಪರಿಷತ್‌ ನಾಯಕಿ ಸಾಧ್ವಿ ಪ್ರಾಚಿ, ಈಗ ಇನ್ನೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಈ ಹಿಂದಿನ ತಮ್ಮ ನಿಲುವು ಬದಲಿಸಿರುವ ಅವರು, '2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಮತದಾನದ ಹಕ್ಕನ್ನು ನಿರಾಕರಿಸಬೇಕು' ಎಂದು ಹೇಳಿದ್ದಾರೆ.

ಉತ್ತರಪ್ರದೇಶದ ಬಹರೈಚ್ ನಲ್ಲಿ ಹಿಂದು ಸಮ್ಮೇಳನವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಧರ್ಮದ ತಾರತಮ್ಯವಿಲ್ಲದೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರ ಮತದಾನದ ಹಕ್ಕನ್ನು ನಿರಾಕರಿಸಬೇಕು. ಭಾರತ್‌ ಮಾತಾಕಿ ಜೈ, ವಂದೇ ಮಾತರಂ ಎಂದು ಹೇಳದವರು, ರಾಷ್ಟ್ರಧ್ವಜವನ್ನು ಅವಮಾನಿಸುವವರು, ಗೋ ಹತ್ಯೆ ಮಾಡುವರಿಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲ ಎಂದು ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited