Untitled Document
Sign Up | Login    
Dynamic website and Portals
  
March 9, 2015

ಭಾರತೀಯ ವಿದ್ಯಾರ್ಥಿಗೆ ಜರ್ಮನ್ ವಿವಿಯಲ್ಲಿ ಪ್ರವೇಶ ನಿರಾಕರಣೆ!

ಭಾರತೀಯ ವಿದ್ಯಾರ್ಥಿಗೆ ಜರ್ಮನ್ ವಿವಿಯಲ್ಲಿ ಪ್ರವೇಶ ನಿರಾಕರಣೆ!

ನವದೆಹಲಿ : ಭಾರತದ ರೇಪ್ ಕಲ್ಚರ್ ನ್ನೇ ಕಾರಣವಾಗಿಟ್ಟುಕೊಂಡು ಜರ್ಮನಿಯ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ ಮಾಡಲಾಗಿದೆ.

ಲೈಪ್ಜಿಗ್ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯಲು ಭಾರತೀಯ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ವಿಶ್ವವಿದ್ಯಾನಿಲಯದ ಮುಖ್ಯಸ್ಥರು, ಭಾರತದಲ್ಲಿರುವ ಅತ್ಯಾಚಾರ ಸಂಸ್ಕೃತಿಯ ಕಾರಣ ನೀಡಿ ವಜಾಗೊಳಿಸಿದ್ದಾರೆ.

ತಮ್ಮ ಬಳಿ ಅನೇಕ ವಿದ್ಯಾರ್ಥಿನಿಯರು ಕಲಿಯುತ್ತಿದ್ದು, ಅತ್ಯಾಚಾರ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಭಾರತದ ಯಾವುದೇ ವಿದ್ಯಾರ್ಥಿಗೆ ಲೈಪ್ಜಿಗ್ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ವಿಶ್ವವಿದ್ಯಾನಿಲಯದ ಬಯೋ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

ಭಾರತದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲು ನೀಡಿರುವ ಕಾರಣ ಸಾರ್ವತ್ರೀಕರಣವಾದದ್ದು, ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯ ಅನ್ವಯವಾಗುವುದಿಲ್ಲ ಎಂಬ ವಿದ್ಯಾರ್ಥಿಯ ವಾದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವವಿದ್ಯಾನಿಲಯದ ಮುಖ್ಯಸ್ಥರು, ತಮ್ಮ ಅಭಿಪ್ರಾಯವನ್ನು ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ಅನ್ವಯಿಸುವುದು ತಪ್ಪು ಆದರೆ ಅತ್ಯಾಚಾರದಂತಹ ಸೂಕ್ಷ್ಮ ವಿಷಯಗಳನ್ನು ತಡೆಗಟ್ಟಲು ಭಾರತಕ್ಕೆ ಸಾಧ್ಯವಾಗಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ಆ ಸಮಾಜದಲ್ಲಿ ಹೆಣ್ಣಿನ ಬಗ್ಗೆ ಇರಬಹುದಾದ ಭಾವನೆಗಳನ್ನು ತೋರುತ್ತದೆ ಎಂದಿರುವ ವಿಶ್ವವಿದ್ಯಾನಿಲಯ, ಯಾವುದೇ ಭಾರತೀಯ ವಿದ್ಯಾರ್ಥಿಗೂ ಪ್ರವೇಶ ನೀಡದೇ ಇರಲು ತೀರ್ಮಾನಿಸಿದೆ. ಇದಕ್ಕೆ ಯೂರೋಪಿಯನ್ ಫೀಮೇಲ್ ಅಸೋಸಿಯೇಷನ್ ಸಹ ಬೆಂಬಲ ವ್ಯಕ್ತಪಡಿಸಿದೆ. ಭಾರತವನ್ನು ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ನಮ್ಮ ಸುರಕ್ಷತೆಗೆ ಕ್ರಮಕೈಗೊಳ್ಳುವುದಕ್ಕೆ ಸಾಧ್ಯವಿದೆ ಎಂದು ವಿಶ್ವವಿದ್ಯಾನಿಲಯ ತಿಳಿಸಿದೆ.

ಭಾರತೀಯ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿರುವುದರ ಕುರಿತ ಈ-ಮೇಲ್ ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited