Untitled Document
Sign Up | Login    
Dynamic website and Portals
  
February 25, 2015

ತೆರೇಸಾ ಕುರಿತು ಭಾಗವತ್ ಹೇಳಿಕೆಗೆ ಶಿವಸೇನೆ ಸಮರ್ಥನೆ

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ

ಮುಂಬೈ : ನೊಬಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್ ತೆರೇಸಾ ಸೇವೆಯ ಹಿಂದೆ ಮತಾಂತರ ಹುನ್ನಾರವಿತ್ತು ಎಂಬ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರ ವಿವಾದಾತ್ಮಕ ಹೇಳಿಕೆಯನ್ನು ಶಿವಸೇನೆ ಸಮರ್ಥಿಸಿಕೊಂಡಿದೆ.

ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ, ಭಾರತಕ್ಕೆ ಬಂದ ಎಲ್ಲಾ ಮಿಷನರಿಗಳ ಉದ್ದೇಶ ಮತಾಂತರವೇ ಆಗಿತ್ತು. ಹೀಗಾಗಿ ಮೋಹನ್ ಭಾಗವತ್ ಅವರ ರ ಹೇಳಿಕೆ ಸರಿಯಾಗಿದೆ ಎಂದು ಹೇಳಿಕೊಂಡಿದೆ.

ರಾಜಸ್ಥಾನದ ಭರತ್‌ ಪುರ್ ದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಮದರ್ ತೆರೇಸಾ ಅವರ ಸೇವೆ ನಿಸ್ವಾರ್ಥವಾಗಿತ್ತು. ಆದರೆ ಆ ಸೇವೆಯ ಹಿಂದಿನ ಉದ್ದೇಶ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದೇ ಆಗಿತ್ತು ಎಂದು ಹೇಳಿದ್ದರು. ಈ ಹೇಳಿಕೆ ದೇಶದೆಲ್ಲಡೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಸೇರಿದಂತೆ ಪ್ರತಿಪಕ್ಷಗಳು ಭಾಗವತ್ ವಿರುದ್ಧ ಹಾರಿಹಾಯ್ದಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited