Untitled Document
Sign Up | Login    
Dynamic website and Portals
  
January 7, 2015

ಹಡಗು ಸ್ಫೋಟದ ಹಿಂದೆ ಲಷ್ಕರ್ ಕೈವಾಡ: ಗುಪ್ತಚರ ಇಲಾಖೆ ಶಂಕೆ

ನವದೆಹಲಿ : ಪೋರಬಂದರ್ ಕರಾವಳಿಯಲ್ಲಿ ಪಾಕಿಸ್ತಾನದ ಬೋಟ್ ಸ್ಫೋಟಗೊಂಡಿರುವುದರ ಹಿಂದೆ ಲಷ್ಕರ್-ಇ-ತೋಯ್ಬಾ ಕೈವಾಡವಿರಬಹುದು ಎಂದು ಗುಪ್ತಚರ ಇಲಾಖೆ ಶಂಕಿಸಿದೆ ಎಂದು ತಿಳಿದು ಬಂದಿದೆ.

ಡಿಸೆಂಬರ್ 31ರಂದು ತಡರಾತ್ರಿ ಗುಜರಾತ್‌ನ ಪೋರಬಂದರ್‌ನಲ್ಲಿ ಸ್ಫೋಟಕಗಳನ್ನು ತುಂಬಿಕೊಂಡಿದ್ದ ಪಾಕಿಸ್ತಾನದ ಹಡಗು ಸ್ಫೋಟಗೊಂಡಿತ್ತು. ಇದನ್ನು ಪಾಕ್ ಮೂಲದ ಉಗ್ರರು ಸ್ಫೋಟಿಸಿದ್ದಾರೆ ಎಂದು ಹೇಳಲಾಗುತಿತ್ತು. ತದ ನಂತರ ಈ ಹಡಗು ಪಾಕಿಸ್ತಾನಕ್ಕೆ ಸೇರಿದ್ದು ಎಂಬ ಮಾಹಿತಿ ಹೊರಬಿತ್ತು. ಆದರೆ, ಭಾರತದ ವರದಿಯನ್ನು ಪಾಕ್ ಸರ್ಕಾರ ತಳ್ಳಿ ಹಾಕಿತ್ತು.

ಇದೀಗ ಈ ಹಡಗು ಸ್ಫೋಟದ ಹಿಂದೆ ಲಷ್ಕರ್-ಇ-ತೋಯ್ಬಾಕೈವಾಡವಿದೆ ಎಂದು ಗುಪ್ತಚರ ಇಲಾಖೆ ಶಂಕಿಸಿದೆ. ಮೂಲಗಳ ಪ್ರಕಾರ ನೌಕಾಪಡೆಯನ್ನು ಗುರಿಯಾಗಿಸಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಜನವರಿ 12ರಂದು ನರೇಂದ್ರ ಮೋದಿ ಪೋರಬಂದರ್‌ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಈ ಸಂಚು ರೂಪಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ನೌಕಾ ಪಡೆ ಕರಾವಳಿ ತೀರದಲ್ಲಿ ಕಟ್ಟೆಚ್ಚರ ವಹಿಸಿತ್ತು. ಈ ವೇಳೆ ಉಗ್ರರಿದ್ದ ಹಡಗು ನೌಕಾ ಪಡೆಗೆ ಕಾಣಿಸಿಕೊಂಡಿದೆ. ತಪಾಸಣೆಗಾಗಿ ಹಡಗನ್ನು ತಡೆಯುತ್ತಿದ್ದ ವೇಳೆ ತಪ್ಪಿಸಿಕೊಂಡು ಹೊರಟ ಹಡಗು ಸ್ವಲ್ಪ ದೂರದಲ್ಲೇ ಸ್ಫೋಟಗೊಂಡಿದೆ. ಈ ಹಡಗಿನಲ್ಲಿದ್ದವರು ಪಾಕಿಸ್ತಾನದ ಕಡಲ ಏಜೆನ್ಸಿ ಮತ್ತು ಪಾಕ್ ಸೇನೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited