Untitled Document
Sign Up | Login    
Dynamic website and Portals
  
January 5, 2015

ಪಾಕ್ ಬೋಟ್ ಪತ್ತೆ ಹಿನ್ನಲೆ: ಸಮುದ್ರ ತೀರದಲ್ಲಿ ಕಟ್ಟೆಚ್ಚರ

ನವದೆಹಲಿ : ಅರಬ್ಬೀಸಮುದ್ರದಲ್ಲಿ ಪಾಕ್ ಬೋಟ್ ಗಳು ಪತ್ತೆ ಪ್ರಕರಣ ಹಿನ್ನಲೆಯಲ್ಲಿ ಸಮುದ್ರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ಕರಾವಳಿ ಕಾವಲು ಪಡೆಗೆ ಕೇಂದ್ರ ಆದೇಶ ನೀಡಿದೆ.

ಈ ನಿಟ್ಟಿನಲ್ಲಿ ಗುಜರಾತ್ ಸಮುದ್ರ ತೀರದಲ್ಲಿ 173 ಮೆರಿನ್ ಕಮಾಂಡೋಗಳನ್ನು ನೌಕಾಪಡೆ ನಿಯೋಜಿಸಿದೆ . ಸಮುದ್ರದಲ್ಲಿ ಸಂಚರಿಸುವ ಬೋಟ್ ಗಳ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.

ಗುಜರಾತ್ ನ ಎಲ್ಲಾ ಸಮುದ್ರ ತೀರದಲ್ಲಿ ಭಾರೀ ಭದ್ರತೆಕೈಗೊಳ್ಳಲಾಗಿದ್ದು, ಸಮುದ್ರ ತೀರದಲ್ಲಿ ಭದ್ರತಾ ದೃಷ್ಠಿಯಿಂದ ಠಾಣೆ ಸ್ಥಾಪನೆ ಮಾಡಲಾಗಿದೆ.

ಗುಜರಾತ್ ನ ಪೋರಬಂದರ್ ಕರಾವಳಿ ಸಮೀಪ ಜ.1ರಂದು ಮೂರು ಬೋಟ್ ಗಳು ಪತ್ತೆಯಾಗಿದ್ದವು. ಒಂದು ಬೋಟ್ ನಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ತುಂಬಲಾಗಿತ್ತು. ನೌಕಾಪಡೆ ಈ ಬೋಟ್ ಹಿಂಬಾಲಿಸಿದಾಗ ಬೋಟ್ ಸ್ಫೋಟಗೊಂಡಿತ್ತು. ಸಿಕ್ಕಿಹಾಕಿಕೊಳ್ಳುವ ಭೀತಿಯಿಂದ ದೋಣಿಯಲ್ಲಿದ್ದವರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿರುವ ಶಂಕೆ ವ್ಯಕ್ತವಾಗಿತ್ತಲ್ಲದೇ ಈ ಬೋಟ್ ಪಾಕಿಸ್ತಾನದ ಕರಾಚಿಯಿಂದ ಉಗ್ರರನ್ನು ಹೊತ್ತುತರುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited