Untitled Document
Sign Up | Login    
Dynamic website and Portals
  
November 23, 2014

814 ಫಿರಂಗಿ ಖರೀದಿಗೆ ಸಮ್ಮತಿ

ನವದೆಹಲಿ : 1986ರಲ್ಲಿ ಬೋಫೋರ್ಸ್ ಫಿರಂಗಿ ಖರೀದಿ ಹಗರಣ ಬೆಳಕಿಗೆ ಬಂದ ಬಳಿಕ ಒಂದೇ ಒಂದು ಫಿರಂಗಿಯನ್ನೂ ಖರೀದಿಸದಿದ್ದ ಭಾರತ, 28 ವರ್ಷಗಳ ಬಳಿಕ ಮತ್ತೆ ಆ ರೀತಿಯ ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗಿದೆ.

ರಕ್ಷಣಾ ಸಚಿವ ಮನೋಹರ್‌ ಪರಿಕರ್‌ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ ಸಭೆಯಲ್ಲಿ 15,750 ಕೋಟಿ ರೂ. ವೆಚ್ಚದಲ್ಲಿ 155 ಎಂಎಂ/52 ಮಾದರಿಯ 814 ಫಿರಂಗಿಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.

ಈ ಕುರಿತು ಶೀಘ್ರವೇ ಜಾಗತಿಕ ಟೆಂಡರ್‌ ಆಹ್ವಾನಿಸಲಾಗುವುದು. ಒಂದು ವೇಳೆ ವಿದೇಶಿ ಕಂಪನಿ ಗುತ್ತಿಗೆ ಪಡೆದರೆ ಅದು ತನ್ನ ದೇಶದಲ್ಲಿ ತಯಾರಿಸಿದ 100 ಫಿರಂಗಿಗಳನ್ನು ಆದಷ್ಟು ಶೀಘ್ರ ಭಾರತಕ್ಕೆ ಹಸ್ತಾಂತರಿಸಬೇಕು, ಉಳಿದ ಫಿರಂಗಿಗಳನ್ನು ಭಾರತದ ಯಾವುದಾದರೂ ಒಂದು ಕಂಪನಿಯ ಜೊತೆಗೆ ಸಹಯೋಗ ಮಾಡಿಕೊಂಡು, ಭಾರತದಲ್ಲೇ ತಯಾರಿಸಬೇಕು ಎಂದು ನಿರ್ಧರಿಸಲಾಗಿದೆ.

ಇನ್ನು ಭಾರತದ ಎಲ್‌ ಆ್ಯಂಡ್‌ ಟಿ, ಟಾಟಾ, ಭಾರತ್‌ ಫೋರ್ಜ್‌ ಕೂಡಾ ಈ ಟೆಂಡರ್‌ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಬೋಫೋರ್ಸ್‌ ಹಗರಣ ಬೆಳಕಿಗೆ ಬಂದ ನಂತರ ಭಾರತ ಒಂದೂ ಫಿರಂಗಿ ಖರೀದಿಸಿರಲಿಲ್ಲ. ನಂತರ ನಡೆದ ಅನೇಕ ಖರೀದಿ ಯತ್ನಗಳು ವಿಫ‌ಲವಾಗಿದ್ದವು.

ಇದೇ ವೇಳೆ 56 ಸರಕು ಸಾಗಣೆ ವಿಮಾನಗಳನ್ನು ಪೂರೈಸುವ ಕುರಿತು ಟಾಟಾ ಸನ್ಸ್‌ ಮತ್ತು ಯುರೋಪ್‌ನ ಏರ್‌ಬಸ್‌ ಸಲ್ಲಿಸಿದ್ದ ಪ್ರಸ್ತಾವನೆಯ ಕುರಿತು ಮಂಡಳಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕೆಲವೊಂದು ವಿಷಯಗಳ ಕುರಿತು ಸ್ಪಷ್ಟನೆ ಬೇಕಾಗಿರುವುದರಿಂದ, ವಿಮಾನ ಖರೀದಿ ನಿರ್ಧಾರ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಇದೇ ರೀತಿ 8,200 ಕೋಟಿ ರೂ. ವೆಚ್ಚದಲ್ಲಿ ಸ್ವಿಜರ್ಲೆಂಡ್‌ನಿಂದ 106 ತರಬೇತಿ ವಿಮಾನ ಖರೀದಿ ಪ್ರಕ್ರಿಯೆಯನ್ನೂ ಮುಂದೂಡಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited