Untitled Document
Sign Up | Login    
Dynamic website and Portals
  
January 2, 2016

ನಂದಿನಿ ಹಾಲಿನ ದರ ಹೆಚ್ಚಳ, ರಾಜ್ಯದ ಜನತೆಗೆ ಹೊಸ ವರ್ಷದ ಶಾಕ್ !

ನಂದಿನಿ ಹಾಲಿನ ದರ ಹೆಚ್ಚಳ, ರಾಜ್ಯದ ಜನತೆಗೆ ಹೊಸ ವರ್ಷದ ಶಾಕ್ !

ಬೆಂಗಳೂರು : ಸರ್ಕಾರ ರಾಜ್ಯದ ಜನತೆಗೆ ಹೊಸ ವರ್ಷದ ಶಾಕ್ ನೀಡಿದೆ. ಜನವರಿ 5 ರಿಂದ ಜಾರಿಗೆ ಬರುವಂತೆ ನಂದಿನಿ ಹಾಲಿನ ದರವನ್ನು 4 ರೂ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಕೆಎಂಎಫ್ ಹಾಲಿನ ದರವನ್ನು 5 ರೂ ಹೆಚ್ಚಿಸಬೇಕೆಂದು ಬೇಡಿಕೆ ಇಟ್ಟಿತ್ತು. ಬೇಡಿಕೆಯನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4 ರೂ ಹೆಚ್ಚಿಸಲು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಹಾಲಿನ ದರವನ್ನು 4 ರೂ ಏರಿಸಿ, 3 ರೂ ವನ್ನು ರೈತರಿಗೆ ಕೊಡಲು ಸರ್ಕಾರ ನಿರ್ಧರಿಸಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಈ ಏರಿಕೆ ಮಾಡಲಾಗಿದೆ ಎನ್ನಲಾಗಿದೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶುಸಂಗೋಪನೆ ಸಚಿವ ಎ.ಮಂಜು, ಹಾಲಿನ ದರ ಏರಿಸಬೇಕು ಎಂಬ ಹಾಲು ಒಕ್ಕೂಟಗಳ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಮುಖ್ಯಮಂತ್ರಿಯವರ ಜತೆಯೂ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಹಾಲು ದರ ಲೀಟರ್‌ಗೆ 5 ರೂ. ಹೆಚ್ಚಾದರೂ ಬೆಲೆ 34 ರೂ. ಆಗಲಿದ್ದು, ಇಡೀ ದೇಶದಲ್ಲಿ ಅಷ್ಟು ಕಡಿಮೆ ದರದಲ್ಲಿ ಹಾಲು ಎಲ್ಲಿಯೂ ಕೊಡುತ್ತಿಲ್ಲ ಎಂದು ಸಮರ್ಥಿಸಿಕೊಡಿದ್ದರು. ಜತೆಗೆ ವೈಯಕ್ತಿಕವಾಗಿ ಹೇಳುವುದಾದರದರ ಹೆಚ್ಚಿಸಬೇಕು ಎಂಬುದು ತಮ್ಮ ಇಂಗಿತ ಎಂದೂ ಹೇಳಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited