Untitled Document
Sign Up | Login    
ರಾಜಧಾನಿ ದೆಹಲಿಗೆ ಅಣ್ವಸ್ತ್ರ ಕ್ಷಿಪಣಿ ದಾಳಿ ವಿರುದ್ಧ ರಕ್ಷಣಾ ಕವಚ

ಸಾಂದರ್ಭಿಕ ಚಿತ್ರ

ರಾಷ್ಟ್ರ ರಾಜಧಾನಿ ದೆಹಲಿಗೆ ಕ್ಷಿಪಣಿ ದಾಳಿಗಳಿಂದ ರಕ್ಷಣೆ ಒದಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಅಣ್ವಸ್ತ್ರ ಕ್ಷಿಪಣಿ ದಾಳಿಯನ್ನೂ ತಡೆಯಬಲ್ಲ ರಕ್ಷಣಾ ಕವಚ ವ್ಯವಸ್ಥೆ ಅಳವಡಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.

2016ರೊಳಗೆ ಈ ಕೆಲಸ ಮುಗಿಯಲಿದ್ದು, ಬರೋಬ್ಬರಿ 5000 ಕಿ.ಮೀ. ದೂರದಿಂದಲೂ ಯಾವುದೇ ಕ್ಷಿಪಣಿ ಉಡಾವಣೆ ಮಾಡಿದರೂ ಅದನ್ನು ಛೇದಿಸಿ, ದೆಹಲಿಗೆ ರಕ್ಷಣೆ ಒದಗಿಸಬಹುದಾಗಿದೆ. ತನ್ಮೂಲಕ ಇಂತಹ ಸೌಲಭ್ಯ ಹೊಂದಿರುವ ವಾಷಿಂಗ್ಟನ್‌, ಬೀಜಿಂಗ್‌, ಪ್ಯಾರಿಸ್‌, ಲಂಡನ್‌ ಹಾಗೂ ಟೆಲ್‌ ಅವೀವ್‌ ನಗರಗಳ ಸಾಲಿಗೆ ದೆಹಲಿ ಕೂಡ ಸೇರ್ಪಡೆಯಾಗಲಿದೆ.

ಇಸ್ರೇಲ್‌ ಸಹಾಯದೊಂದಿಗೆ ಅಭಿವೃದ್ಧಿಪಡಿಸಲಾಗಿರುವ "ಸೊರ್ಡ್‌ಫಿಶ್‌' ಎಂಬ ಎರಡು ರಾಡಾರ್‌ಗಳನ್ನು ಈಗಾಗಲೇ ದೆಹಲಿಯಲ್ಲಿ ಅಳವಡಿಸಲಾಗಿದೆ. ದೆಹಲಿ ಮೇಲೆ ದಾಳಿ ನಡೆಸುವ ದುರುದ್ದೇಶದಿಂದ 800 ಕಿ.ಮೀ. ದೂರದಲ್ಲಿ ಹಾರಿಬಿಡುವ ಕ್ಷಿಪಣಿಗಳನ್ನೂ ಪತ್ತೆ ಹಚ್ಚುವ ಸಾಮರ್ಥ್ಯ ಈ ರಾಡಾರ್‌ಗಳಿಗಿದೆ. ಮುಂಬರುವ ದಿನಗಳಲ್ಲಿ ಕ್ಷಿಪಣಿ ಛೇದಿಸುವ ವ್ಯವಸ್ಥೆಯನ್ನು ಕಾರ್ಯಾರಂಭಗೊಳಿಸಲಾಗುತ್ತದೆ. ಇದು 2016ಕ್ಕೆ ಪೂರ್ಣಗೊಳ್ಳಲಿದೆ. ಆಗ 5000 ಕಿ.ಮೀ. ದೂರದಿಂದ ಉಡಾವಣೆ ಮಾಡುವ ಅಣ್ವಸ್ತ್ರ ಕ್ಷಿಪಣಿ ದಾಳಿಗಳಿಂದಲೂ ದೆಹಲಿಗೆ ರಕ್ಷಣೆ ಲಭಿಸಲಿದೆ ಎಂದು ವಾಣಿಜ್ಯ ಪತ್ರಿಕೆಯೊಂದು ವರದಿ ಮಾಡಿದೆ.

ಕ್ಷಿಪಣಿ ದಾಳಿಗಳಿಂದ ದೆಹಲಿಗೆ ರಕ್ಷಣೆ ಒದಗಿಸುವ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ, ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ಇದೇ ವ್ಯವಸ್ಥೆ ಅಳವಡಿಸಲಾಗುತ್ತದೆ.

 

Author : ಸಂಗ್ರಹಃ ರಮೇಶ್ ಕೆ.

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited