Untitled Document
Sign Up | Login    
ಸ್ಟೇರಿಂಗ್, ಬ್ರೇಕ್ ಇಲ್ಲದ ಕಾರು: ಗೂಗಲ್ ಕಂಪನಿ ಹೊಸ ಅವಿಷ್ಕಾರ


ಸ್ಟೇರಿಂಗ್, ಬ್ರೇಕ್ ಇಲ್ಲದ ಕಾರಲ್ಲಿ ಕೂತು ರೋಡಲ್ಲಿ ಹೋಗ್ತಾ ಇದ್ರೆ ಹೇಗಿರತ್ತೆ? ಹಾಗೇ ಕಲ್ಪನೆ ಮಾಡ್ಕೊಳಿ. ಇದು ಬರೀ ಕಲ್ಪನೆಗೆ ಮಾತ್ರ ಸೀಮಿತವಲ್ಲ, ಕಾರ್ಯರೂಪಕ್ಕೂ ತರ್ಬಹುದು. ಇದೇನಿದು ವಿಚಿತ್ರ ಅನ್ಸತ್ತೆ ಅಲ್ವಾ? ಈ ಸ್ಟೋರಿ ನೋಡಿ..

5 ವರ್ಷಗಳಿಂದ ಡ್ರೈವರ್ ಇಲ್ಲದ ಕಾರಿನ ಬಗ್ಗೆ ಹೊಸ ಹೊಸ ಅವಿಷ್ಕಾರ ಮಾಡುತ್ತಿರುವ ಗೂಗಲ್ ಕಂಪನಿ ಈಗ ಹೊಸ ಮಾದರಿಯ ಚಾಲಕ ರಹಿತ ಕಾರಿನ ಫೋಟೊ ಬಿಡುಗಡೆ ಮಾಡಿದೆ.

ಈ ಹಿಂದೆಲ್ಲ ಬಿಡುಗಡೆ ಮಾಡಿದ ಕಾರಿನಲ್ಲಿ ಚಾಲಕನ ಸ್ಥಳದಲ್ಲಿ ಕುಳಿತ ವ್ಯಕ್ತಿಗಳು ಕೆಲವು ನಿರ್ದೇಶನಗಳನ್ನು ನೀಡಬೇಕಿತ್ತು. ಆದರೆ ಹೊಸ ಕಾರಿನಲ್ಲಿ ಸ್ಟೇರಿಂಗ್ ವೀಲ್ ಆಗಲೀ, ಬ್ರೇಕ್ ಆಗಲಿ ಅಥವಾ ಆಕ್ಸಲೇಟರ್ ಆಗಲೀ ಇಲ್ಲ. ಈ ಎಲ್ಲಾ ಕೆಲಸವನ್ನು ಕಾರಿನಲ್ಲಿ ಅಳವಡಿಸಲಾಗಿರುವ ವಿಶೇಷ ಉಪಕರಣವೇ ನಿರ್ವಹಿಸುತ್ತದೆ.

ಕಾರಿನ ಒಳಗೆ ಸ್ಟಾರ್ಟ್ ಮತ್ತು ಆಫ್ ಬಟನ್ ಮಾತ್ರ ಇದೆ. ಜತೆಗೆ ಇಬ್ಬರು ಕೂರಲು ಅನುವಾಗುವಂತೆ ಎರಡು ಸೀಟ್ ಗಳು ಇರುತ್ತವೆ. ಈ ಕಾರು ಸದ್ಯ ಗಂಟೆಗೆ ಗರಿಷ್ಠ 40ಕಿ.ಮೀ ವೇಗದಲ್ಲಿ ಚಲಿಸಬಲ್ಲದಾಗಿದೆ.

ಕಾರಿನ ಮೇಲ್ಭಾಗದಲ್ಲಿ ಅಳವಡಿಸಿರುವ ಸೆನ್ಸರ್ ಗಳು ಕಾರಿನ ಸುತ್ತಮುತ್ತಲೂ 2 ಫುಟ್ಬಾಲ್ ಮೈದಾನದ ಜಾಗದಲ್ಲಿನ ಎಲ್ಲ ಚಲನವಲನಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ಕಾರನ್ನು ಓಡಿಸಲು ನೆರವಾಗುತ್ತದೆ.

 

Author : ಲೇಖಾ ಆರ್ .

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited