Untitled Document
Sign Up | Login    
ಅಭಿವೃದ್ಧಿ ಸೂಚ್ಯಂಕದಲ್ಲಿ ಬೆಂಗಳೂರು ನಂ.1


ಅಭಿವೃದ್ಧಿ ನೀತಿಗಳಲ್ಲಿ ಸಂಶೋಧನೆ ಮತ್ತು ಚರ್ಚಾ ಕೇಂದ್ರ (ಸಿಆರ್‌ಡಿಡಿಪಿ) ಸಿದ್ದಪಡಿಸಿರುವ ಅಧ್ಯಯನ ವರದಿಯಲ್ಲಿ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಗ್ರಿಗಳ ಲಭ್ಯತೆ ಕ್ಷೇತ್ರ ಸೇರಿದಂತೆ ಒಟ್ಟಾರೆ ಅಭಿವೃದ್ಧಿ ಸೂಚ್ಯಂಕದಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ರಾಯಚೂರು ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಅಮೆರಿಕ-ಭಾರತ ನೀತಿ ಸಂಸ್ಥೆಯ ಮುಖ್ಯ ತಜ್ಞರೂ ಆಗಿರುವ ಸಿಆರ್‌ಡಿಡಿಪಿ ಅಧ್ಯಕ್ಷ ಅಬುಸಾಲೆ ಶರೀಫ್ ಅಧ್ಯಯನ ಈ ವರದಿ ಸಿದ್ದಪಡಿಸಿದ್ದಾರೆ.

ಅದೇ ರೀತಿ ಆರ್ಥಿಕ ಸೂಚ್ಯಂಕದಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ಚಿತ್ರದುರ್ಗ ಜಿಲ್ಲೆ ಕೊನೆ ಸ್ಥಾನದಲ್ಲಿದೆ. ಕುಡಿಯುವ ನೀರು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಕೋಲಾರ ಜಿಲ್ಲೆ ಆರ್ಥಿಕ ಸೂಚ್ಯಂಕದ ಮೊದಲ ಉತ್ತಮ ಐದು ಜಿಲ್ಲೆಗಳ ಪೈಕಿ ಐದನೇ ಜಿಲ್ಲೆ ಆಗಿದೆ.

ಶಿಕ್ಷಣ ಸೂಚ್ಯಂಕದಲ್ಲಿ ಬೆಂಗಳೂರು ಮೊದಲ ಮತ್ತು ರಾಯಚೂರು ಕೊನೆಯ ಸ್ಥಾನದಲ್ಲಿದೆ. ಆರೋಗ್ಯ ಸೂಚ್ಯಂಕದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೆ, ಕೊಪ್ಪಳ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಸಾಮಗ್ರಿಗಳ ಯಥೇಚ್ಛ ಲಭ್ಯತೆ ಸೂಚ್ಯಂಕದಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಹಾವೇರಿ ಕೊನೆಯ ಸ್ಥಾನದಲ್ಲಿದೆ.

- ಒಟ್ಟಾರೆ ಅಭಿವೃದ್ಧಿ ಸೂಚ್ಯಂಕ:
ಬೆಂಗಳೂರು, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಬೆಂಗಳೂರು ಗ್ರಾಮಾಂತರ. ಮೊದಲ 5 ಜಿಲ್ಲೆಗಳಾಗಿವೆ. ಬಾಗಲಕೋಟೆ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ಕೊನೆಯ 5 ಜಿಲ್ಲೆಗಳಾಗಿವೆ.

ಆರ್ಥಿಕ ಸೂಚ್ಯಂಕ:
ಬೆಂಗಳೂರು, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಕೊಡಗು, ಕೋಲಾರ ಮೊದಲ 5 ಜಿಲ್ಲೆಗಳಾಗಿದ್ದರೆ, ಕಲಬುರಗಿ, ಬಾಗಲಕೋಟೆ, ಕೊಪ್ಪಳ, ಹಾವೇರಿ, ಚಿತ್ರದುರ್ಗ ಕೊನೆಯ 5 ಜಿಲ್ಲೆಗಳಾಗಿವೆ.

ಶೈಕ್ಷಣಿಕ ಸೂಚ್ಯಂಕ:
ಬೆಂಗಳೂರು, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಮೊದಲ 5 ಜಿಲ್ಲೆಗಳಾಗಿದ್ದರೆ, ಬಾಗಲಕೋಟೆ, ಕೊಪ್ಪಳ, ಚಾಮರಾಜನಗರ, ರಾಯಚೂರು, ಕಲಬುರಗಿ ಕೊನೆಯ 5 ಜಿಲ್ಲೆಗಳಾಗಿವೆ

ಆರೋಗ್ಯ ಸೂಚ್ಯಂಕ:
ಉಡುಪಿ, ದಕ್ಷಿಣ ಕನ್ನಡ. ಬೆಂಗಳೂರು, ಚಿಕ್ಕಮಗಳೂರು, ಉತ್ತರಕನ್ನಡ ಮೊದಲ 5 ಜಿಲ್ಲೆಗಳಾಗಿವೆ. ಇನ್ನು ಬೀದರ್‌, ವಿಜಯಪುರ, ರಾಯಚೂರು, ಕಲಬುರಗಿ, ಕೊಪ್ಪಳ ಕೊನೆಯ 5 ಜಿಲ್ಲೆಗಳಾಗಿವೆ.

ವಸ್ತುಗಳ ಲಭ್ಯತೆ ಸೂಚ್ಯಂಕ:
ಬೆಂಗಳೂರು, ಕೊಡಗು, ಮೈಸೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ ಮೊದಲ 5 ಜಿಲ್ಲೆಗಳಾಗಿದ್ದರೆ, ಗದಗ, ಕೊಪ್ಪಳ, ವಿಜಯಪುರ, ರಾಯಚೂರು, ಹಾವೇರಿ ಕೊನೆಯ 5 ಜಿಲ್ಲೆಗಳಾಗಿವೆ.

 

Author : . .

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited