Untitled Document
Sign Up | Login    
ಜನಸಾಮಾನ್ಯರಿಗಾಗಿ ಪೆಂಟಾ ಭಾರತ್ ಫೋನ್


ಬಿ.ಎಸ್.ಎನ್.ಎಲ್ ನ ಪೆಂಟಾ ಭಾರತ್ ಫೋನ್ ಮಾರುಕಟ್ಟೆಗೆ ಪರಿಚಯವಾಗಿದೆ. ಪ್ಯಾಂಟೆಲ್ ಟೆಕ್ನಾಲಜಿ ಲಿಮಿಟೆಡ್ ಕೈಗೆಟುಕುವ ದರದಲ್ಲಿ ಟ್ಯಾಬ್ಲೆಟ್ ಪಿಸಿಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು, ಮುಂದಿನ ಪೀಳಿಗೆಯ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಂಡಿರುವ ಡ್ಯೂಯಲ್ ಸಿಮ್ ,3 ಇಂಚುಗಳ ವಿಶಾಲ ಸ್ಕ್ರೀನ್ ಮತ್ತು ಅಂತರ್ಜಾಲ ಸೌಲಭ್ಯಹೊಂದಿರುವ ಸ್ಕಾಟ್ ಡಿಸೈನ್ ಭಾರತ್ ಫೋನ್ ನನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಯಿತು.

ಭಾರತ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಅಗಾಧ ಬದಲಾವಣೆಗೆ ಕಾರಣವಾಗುವ ನಿರೀಕ್ಷೆಯಿದೆ. ಕಾರಣ ಕೇವಲ 1099 ರೂ.ಗಳಿಗೆ ದೊರೆಯಲಿರುವ ಈ ಫೋನ್ ಸಾಮಾನ್ಯ ಜನರೂ ಅಂತರ್ಜಾಲ ಉಪಯೋಗಿಸಲು ಅನುಕೂಲವಾಗುವಂತಿದೆ.

ದೊಡ್ಡ ಸ್ಕ್ರೀನ್ ಮತ್ತು ಜಾವಾ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಫೋನ್ ಮೊಬೈಲ್ ಬ್ಯಾಂಕಿಂಗ್, ಟೆಲಿ ಮೆಡಿಕಲ್ ಕೇರ್ ಮತ್ತು ಡಾಟಾ ಸ್ಟ್ರೀಮಿಂಗ್ ಡೆಲಿವರಿಯಂತಹ ಸೌಲಭ್ಯಗಳ ಜತೆಗೆ ಧ್ವನಿ ಸೇವೆಗಳನ್ನು ಇದರಿಂದ ಪಡೆಯಬಹುದಾಗಿದೆ. ಇದರೊಂದಿಗೆ ಭಾರತೀಯ ಸಂಚಾರ ನಿಗಮ ಲಿಮಿಟೆಡ್ ವತಿಯಿಂದ ಅತ್ಯಾಕರ್ಷಕ ಧ್ವನಿ ಸೇವೆಯ ಪ್ಯಾಕೇಜ್ ಕೂಡ ದೊರೆಯಲಿದೆ.

ಪಿಎಸ್ 501 ಮತ್ತು ಪಿಎಸ್ 650 ಸ್ಮಾರ್ಟ್ ಡಿಸೈನ್ ವಿಭಾಗದ ಮಾಸ್ಟರ್ ಪೀಸ್ ಗಳಾಗಿವೆ. ಈ ಮೊಬೈಲ್, ಸ್ಮಾರ್ಟ್, ಸ್ಟೈಲಿಶ್, ಸ್ಪೋರ್ಟಿ, ಎಲಿಗೆಂಟ್, ಗೇಮರ್, ಮ್ಯೂಸಿಕ್ ಲವರ್, ಸಿನಿಮಾ ಪ್ರಿಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ. ಇದು ಆಮ್ ಆದ್ಮಿಗೋಸ್ಕರ ಹೇಳಿ ಮಾಡಿಸಿದ ಹ್ಯಾಂಡ್ ಸೆಟ್ ಗಳಾಗಿವೆ ಎಂದು ಪ್ಯಾಂಟೇಲ್ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕ ವಿಜೆಂದರ್ ಸಿಂಗ್ ಹೇಳುತ್ತಾರೆ.

ಪೆಂಟಾ ಭಾರತ್ ಫೋನ್ ಕ್ರಾಂತಿಕಾರಿ ಜಾವಾ 3 ಆವೃತ್ತಿಯ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಅಂತರ್ಜಾಲ ಸೌಲಭ್ಯಗಳಾದ ಇ-ಮೇಲ್, ಫೇಸ್ ಬುಕ್ ನ್ನು ಬಳಸಬಹುದು. ಈ ಫೋನ್ ನಲ್ಲಿ 13 ಮೆಗಾ ಫಿಕ್ಸಲ್ ಕ್ಯಾಮರಾ ಕೂಡ ಇದೆ. 1800 ಎಮ್ ಎ ಹೆಚ್ ಲಿಥಿಯಮ್ ಬ್ಯಾಟರಿ ಹೊಂದಿದ್ದು, 64 ಎಂಬಿ ರ್ಯಾಮ್ ಮತ್ತು 64 ಎಂಬಿ ಆಂತರಿಕ ಸ್ಟೊರೇಜ್ ಇರಲಿದೆ. ಎಸ್.ಎಂ.ಎಸ್ ಶೆಡ್ಯೂಲರ್, ರಿಚ್ ಮಲ್ಟಿಮಿಡಿಯಾ ಗೇಮಿಂಗ್ ಅನುಭೂತಿ ಮತ್ತು ಮೊಬೈಲ್ ಟ್ರಾಕರ್ ಕೂಡ ಈ ಫೋನ್ ನಲ್ಲಿದೆ.

ಸ್ಲಿಮ್ ಆಗಿರುವ ಈ ಫೋನ್ ನಿಂದ ಆಟೋ ವಾಯ್ಸ್ ಕಾಲ್ ರೆಕಾರ್ಡಿಂಗ್ ಮಾಡಬಹುದಾಗಿದೆ. 1200 ನಿಮಿಷಗಳ ಉಚಿತ ಟಾಕಟೈಮ್ ಕೂಡ ಬಿ.ಎಸ್.ಎನ್.ಎಲ್ ನಿಂದ ದೊರೆಯಲಿದೆ.

 

Author : ಚಂದ್ರಲೇಖಾ ರಾಕೇಶ್

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited