Untitled Document
Sign Up | Login    
`ಸ್ವಾತಂತ್ರ್ಯವೀರ'ನ ನೆನಪು

.

`ಸ್ವಾತಂತ್ರ್ಯವೀರ' ಎಂದೇ ಜನಜನಿತವಾದ ಸಾವರಕರ್, 27 ವರ್ಷ ಸೆರೆಮನೆವಾಸ, ಅದರಲ್ಲೂ 14 ವರ್ಷಗಳ ಕಾಲ ಅಂಡಮಾನ್ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ ಅಪ್ರತಿಮ ದೇಶಭಕ್ತ. ಮೇ 28 ಅವರ 132ನೇ ಜನ್ಮದಿನ.

1947ರ ನಂತರ ಸ್ವಾತಂತ್ರ್ಯವೀರ ಸಾವರಕರ್‍ರ ಮತ್ತು ಅವರ ಪರಿವಾರವನ್ನು ನಡೆಸಿಕೊಂಡ ರೀತಿ ಮಾತ್ರ ಕೃತಘ್ನತೆಯ ಎಲ್ಲೆಯನ್ನೂ ಮೀರುವಂತಿತ್ತು. ಗಾಂಧಿಹತ್ಯೆಯ ನಂತರ ಗೋಡ್ಸೆ ಹಿಂದೂ ಮಹಾಸಭಾದ ಸದಸ್ಯನಾಗಿದ್ದ ಎಂಬ ಒಂದೇ ಕಾರಣಕ್ಕೆ ಅವರನ್ನು ಅನೇಕ ಮಿಥ್ಯಾರೋಪ ಹೊರಿಸಿ, ಬಂಧಿಸಿ ವಿಚಾರಣೆಗೊಳಪಡಿಸಲಾಯಿತು.

ಕಾಂಗ್ರೆಸ್ಸಿನ ಗೂಂಡಾಗಳು ಮುಂಬಯಿಯಲ್ಲಿದ್ದ ಅವರ ಮನೆಯ ಮೇಲೆ ಕಲ್ಲು ತೂರಿದರು, ದಂತವೈದ್ಯರಾಗಿದ್ದ ಬಾಳಾರಾವ್ ಸಾವರಕರ್‍ರ ಮೇಲೆ ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು 1949ರಲ್ಲಿ ಕೊನೆಯುಸಿರೆಳೆದರು. ಗಾಂಧಿ ಹತ್ಯೆಯ ಮಿಥ್ಯಾರೋಪದಿಂದ ದೋಷಮುಕ್ತರಾದ ಸಾವರಕರ್‍ರನ್ನು `ಉಗ್ರ ಹಿಂದು ವಾದದ ಭಾಷಣಗಳನ್ನು' ಮಾಡಿದ ಆರೋಪ ಹೊರಿಸಿ ಕಾಂಗ್ರೆಸ್ ಸರ್ಕಾರ ಮತ್ತೆ ಬಂಧಿಸಿತು. ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳ ಬಾರದೆಂಬ ಷರತ್ತಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ಸಾವರಕರ್‍ರ ರಾಜಕೀಯ ಹಕ್ಕನ್ನೇ ಕಿತ್ತುಕೊಂಡಿತು. ಇಷ್ಟೇ ಅಲ್ಲದೇ 2003ರಲ್ಲಿ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಸ್ವಾತಂತ್ರ್ಯ ವೀರ ಸಾವರಕರ್‍ರ ಭಾವಚಿತ್ರ ಅನಾವರಣಗೊಳಿಸುವುದನ್ನೂ ಕಾಂಗ್ರೆಸ್, ಎಡಪಂಥೀಯ ರಾಜಕೀಯ ಪಕ್ಷಗಳು ವಿರೋಧಿಸಿದವು, ಅಲ್ಲದೇ ರಾಷ್ಟ್ರಪತಿಗಳು ಪಾಲ್ಗೊಂಡ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಬಹಿಷ್ಕರಿಸಿದರು. ಈವರೆಗೂ ಪ್ರತಿ ವರ್ಷ ಸಾವರಕರ್ ಜನ್ಮದಿನದಂದು ಸಂಸತ್ತಿನಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ, ಸ್ವಯಂಪ್ರಧಾನಿಯಾದಿಯಾಗಿ ಯಾವ ಕಾಂಗ್ರೆಸ್ ಅಥವಾ ಅದರ ಮಿತ್ರ ಪಕ್ಷಗಳ ಸದಸ್ಯರು ಒಮ್ಮೆಯೂ ಪಾಲ್ಗೊಳ್ಳುವ ಸೌಜನ್ಯವನ್ನೂ ತೋರಲಿಲ್ಲ.

1883-1966ರ ನಡುವೆ ಜೀವಿಸಿ, ಯುವಕರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿ, ಸ್ವಾತಂತ್ರ್ಯಯಜ್ಞ ಜ್ವಾˉÉಯನ್ನು ಧಗಧಗಿಸುವಂತೆ ಮಾಡಿದ ಸಾವರಕರ್ ಅವರ ಜೀವನ ಭಾರತದ ಸ್ವಾತಂತ್ರ್ಯ ಸಮರದ ರೋಮಾಂಚಕಾರಿ ಅಧ್ಯಾಯ. ಹುಟ್ಟಿನಿಂದ ಸಾವಿನವರೆಗೆ ಎಳ್ಳಷ್ಟೂ ಕಡಿಮೆಯಾಗದ ಪ್ರಖರ ರಾಷ್ಟ್ರಭಕ್ತಿ ಸಾವರಕರ್‍ರ ವಿಶೇಷತೆ. ಸಾವರಕರ್ ಒಬ್ಬ ಅಸದೃಶ ಕ್ರಾಂತಿ ಪುರುಷ, ರಾಷ್ಟ್ರೀಯತೆಯ ಅಪ್ರತಿಮ ಪ್ರತಿಪಾದಕ, ಸಮಾಜ ಸುಧಾರಕ, ಬರಹಗಾರ, ಖ್ಯಾತ ನಾಟಕಕಾರ, ಕವಿ, ಇತಿಹಾಸಕಾರ, ರಾಜಕೀಯ ನಾಯಕ ಮತ್ತು ತತ್ವಜ್ಞಾನಿ. ಬಾಲ್ಯದಲ್ಲಿ `ಕವಿತೆ'ಗಳಿಂದ, ಕಾಲೇಜು ದಿನಗಳಲ್ಲಿ `ಮಿತ್ರಮಂಡಳಿ'ಯಿಂದ, ತಾರುಣ್ಯದಲ್ಲಿ `ಅಭಿನವ ಭಾರತ'ದಿಂದ, ಲಂಡನ್‍ನಲ್ಲಿ `ಭಾರತ ಭವನ'ದ ಮೂಲಕ, ನಂತರ `ಹಿಂದು ಮಹಾ ಸಭಾ'ದ ಮೂಲಕ ಅವರು ಅರ್ಚಿಸಿದ್ದು, ಸ್ತುತಿಸಿದ್ದು ಭಾರತಮಾತೆಯನ್ನೇ; ಬಯಸಿದ್ದು ಸಶಕ್ತ ಭಾರತದ ನಿರ್ಮಾಣವನ್ನೇ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಇಡೀ ಸಾವರಕರ್ ಪರಿವಾರ ತನ್ನನ್ನು ತಾನು ತೇಯ್ದುಕೊಂಡಿತು. ಸಾವರಕರ್ ಸಹೋದರರಲ್ಲಿ ಹಿರಿಯಣ್ಣ ಗಣೇಶ ಅಥವಾ ಬಾಬಾರಾವ್, ವಿನಾಯಕ ಅಥವಾ ತಾತ್ಯಾರಾವ್ ಕಿರಿಯ ಸಹೋದರ ನಾರಾಯಣ ಅಥವಾ ಬಾಳಾರಾವ್ ಇವರಲ್ಲದೇ ಕಿರಿಯ ಸಹೋದರ ಮೈನಾ, ವಿನಾಯಕ ಸಾವರಕರ್‍ರ ಅತ್ತಿಗೆ ಯಶೋಧಾ, ಪತ್ನಿ ಯುಮಾನಾಬಾಯಿ ಇವರೆಲ್ಲರ ತ್ಯಾಗ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಹಿರಿಯಣ್ಣ ಬಾಬಾರಾವ್ ಸಾವರಕರ್ ಅಪ್ರತಿಮ ದೇಶಭಕ್ತರಾಗಿದ್ದರು. ತಂದೆಯ ಮರಣಾನಂತರ ಕುಟುಂಬದ ಜವಾಬ್ದಾರಿ ಹೊತ್ತ ಬಾಬಾರಾವ್ ವಿನಾಯಕ ಸಾವರಕರ್‍ರ ಬೆಳವಣಿಗೆಯಲ್ಲಿ ಗಣನೀಯ ಪಾತ್ರ ನಿರ್ವಹಿಸಿದರು. ವಿನಾಯಕ ಸಾವರಕರ್‍ಗಿಂತ ಮೊದಲೇ ಬಾಬಾರಾವ್ ಕರಿನೀರಿನ ಶಿಕ್ಷಗೆ ಗುರಿಯಾಗಿ ಅಂಡಮಾನಿನ ಜೈಲಿನಲ್ಲಿ ಬಂಧಿಯಾಗಿದ್ದರು. ಬಾಳಾರಾವ್ ಸಾವರಕರ್ ಅಣ್ಣಂದಿರ ಅನುಪಸ್ಥಿತಿಯಲ್ಲಿ ಹೋರಾಟವನ್ನು ಜೀವಂತವಾಗಿಸಿದ್ದಲ್ಲದೇ ಸಾವರಕರ್‍ರ ಕೃತಿಗಳನ್ನು ಅಚ್ಚು ಹಾಕಿಸಿ ಪ್ರಚುರಪಡಿಸಿದರು.

ಅಸ್ಪøಶ್ಯತೆಯ ವಿರುದ್ಧ ಜಾಗೃತಿ ಮೂಡಿಸಿದಾಗ, ಪತಿತಪಾವನ ಮಂದಿರ ಸ್ಥಾಪನೆ ಮಾಡಿದಾಗ, ವಿದೇಶಿ ವಸ್ತುಗಳನ್ನು ಬಹಿರಂಗವಾಗಿ ಸುಟ್ಟಾಗ, ಭಾರತೀಯ ಭಾಷೆಗಳ ಬಳಕೆಗೆ ಆಗ್ರಹಪಡಿಸಿದಾಗ ಅವರ ದೃಷ್ಟಿಯಿದ್ದುದು ಹಿಂದೂ ಸಮಾಜದ ಏಳಿಗೆಯಲ್ಲಿಯೇ. `ಸ್ವಾತಂತ್ರ್ಯವೀರ' ಎಂದೇ ಜನಜನಿತವಾದ ಸಾವರಕರ್, 27 ವರ್ಷ ಸೆರೆಮನೆವಾಸ, ಅದರಲ್ಲೂ 14 ವರ್ಷಗಳ ಕಾಲ ಅಂಡಮಾನ್ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ ಅಪ್ರತಿಮ ದೇಶಭಕ್ತ. ಮೇ 28 ಅವರ 132ನೇ ಜನ್ಮದಿನ. ಹಲವು ಕ್ಷೇತ್ರಗಳಲ್ಲಿ ಕಾರ್ಯಶೀಲರಾಗಿರುವ ಸಾವರಕರ್‍ರ ಕುರಿತು ಒಂದು ಲೇಖನ ಅಥವಾ ಕೆಲವು ಪುಟಗಳಲ್ಲಿ ವಿವರಿಸುವುದು ಅಸಾಧ್ಯವಾದರೂ ಕೆಲವು ಕುತೂಹಲಕಾರಿ ವಿಚಾರಗಳನ್ನು ಸ್ಮರಿಸೋಣ.

• 1898ರಲ್ಲಿ ಕುಟುಂಬ ದೇವತೆಯ ಸಮ್ಮುಖದಲ್ಲಿ, ಬ್ರಿಟಿಷ್ ಆಡಳಿತದ ವಿರುದ್ಧ ಸಶಸ್ತ್ರ ಕ್ರಾಂತಿ ನಡೆಸುವ ಪಣ ತೊಟ್ಟರು.

• ಜನವರಿ 01, 1900ರಲ್ಲಿ `ಮಿತ್ರ ಮಂಡಳಿ' ಎಂಬ ರಹಸ್ಯ ಕ್ರಾಂತಿಕಾರಿ ಸಮಾಜ ಹಾಗೂ ಮೇ 1904ರಲ್ಲಿ `ಅಭಿನವ ಭಾರತ್' ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಸ್ಥಾಪಿಸಿದರು.

• `ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ' ಎಂದು ಘೋಷಿಸಿದ ದೇಶದ ಮೊದಲ ರಾಜಕೀಯ ನಾಯಕ (1900ರಲ್ಲಿ).

• ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿ, ಸ್ವದೇಶೀ ಕ್ರಾಂತಿಯನ್ನು ಹುಟ್ಟುಹಾಕಿದ ದೇಶದ ಮೊದಲ ಸ್ವದೇಶಾಭಿಮಾನಿ (1905ರಲ್ಲಿ).

• ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವ ಸಲುವಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚಳವಳಿಯನ್ನು ಹುಟ್ಟುಹಾಕಿದ ಮೊದಲ ಭಾರತೀಯ (1906ರಲ್ಲಿ).

• ಇಂಗ್ಲೇಂಡ್‍ನಲ್ಲಿ ಕಾನೂನು ಶಿಕ್ಷಣಮುಗಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಬೇಕಾದ ಎಲ್ಲಾ ಅರ್ಹತೆಗಳನ್ನು ಪಡೆದ ನಂತರವೂ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ್ದಾನೆಂಬ ಕಾರಣಕ್ಕಾಗಿ `ಇಂಗ್ಲೀಷ್ ಬಾರ್ ಕೌನ್ಸಿಲ್ ಗೆ ಆಹ್ವಾನಿತರಾಗದ ಭಾರತದ ಮೊದಲ ಕಾನೂನು ವಿದ್ಯಾರ್ಥಿ (1909ರಲ್ಲಿ).

• ಲಂಡನ್‍ನಲ್ಲಿ ಬಂಧಿಸಿದಾಗ, ವಿಚಾರಣೆ ನಡೆಸುವ ಹಾಗೂ ಶಿಕ್ಷಿಸುವ ವಿಚಾರದಲ್ಲಿ ಬ್ರಿಟಿಷ್ ನ್ಯಾಯಾಲಯಗಳಲ್ಲಿ ಕಾನೂನಿನ ತೊಡಕುಗಳಾದವು. ಈ ಮೊಕದ್ದಮೆಯ ಉಲ್ಲೇಖವನ್ನು ಇಂದಿಗೂ ನ್ಯಾಯಾಲಯದಲ್ಲಿ ಬಳಸಲಾಗುತ್ತಿದೆ.

• ಇವರು ಬರೆದ ಕೃತಿ `1857-ಭಾರತದ ಮೊದಲ ಸ್ವಾತಂತ್ರ್ಯ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ವಿನಾಯಕ ಸಾವರಕರ್ ಸಂಗ್ರಾಮ' ಪ್ರಕಟಣೆಗೊಳ್ಳುವುದಕ್ಕೂ ಮೊದಲೇ ನಿಷೇಧಕ್ಕೊಳಗಾಯಿತು (1909ರಲ್ಲಿ).

• ಇಂಗ್ಲೆಂಡಿನಲ್ಲಿ ಬಂಧಿಸಿ ಹಡಗಿನ ಮೂಲಕ ಭಾರತಕ್ಕೆ ಕರೆತರುತ್ತಿದ್ದ ಸಂದರ್ಭದಲ್ಲಿ ಧೈರ್ಯಶಾಲಿಯಾಗಿ ಹಡಗಿನಿಂದ ಸಮುದ್ರಕ್ಕೆ ಜಿಗಿದು ಪಾರಾಗಿ, ಮತ್ತೆ ಫ್ರೆಂಚ್ ನೆಲದಲ್ಲಿ ಬಂಧನಕ್ಕೊಳಗಾದ ಸಂಪೂರ್ಣ ಘಟನೆ ಹೇಗ್‍ನ ಅಂತರರಾಷ್ಟ್ರೀಯ ನ್ಯಾಯಾಲಯ ದಲ್ಲಿ ಒಂದು ರೀತಿಯ ವಿವಾದವನ್ನೇ ಸೃಷ್ಟಿಸಿತ್ತು. ಆ ದಿನಗಳಲ್ಲಿ (1910ರಲ್ಲಿ) ಹಲವು ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ, ಈ ಘಟನೆಯನ್ನು ಉಲ್ಲೇಖಿಸಲಾಗುತ್ತಿತ್ತು.

• ದಾಸ್ಯರಕ್ಕಸರ ಎದೆಮೆಟ್ಟಲು ಪ್ರಯತ್ನಪಟ್ಟಿರುವುದಕ್ಕಾಗಿ ತಾನು ಗಳಿಸಿದ ಬಿ.ಎ. ಪದವಿಯನ್ನು ಕಳೆದುಕೊಂಡ ಮೊದಲ ಭಾರತೀಯ ಪಧವಿಧರ (1911).

• ಬ್ರಿಟಿಷ್ ಸಾಮ್ರಾಜ್ಯದ ಇತಿಹಾಸದಲ್ಲೇ ಅತಿ ಘನಘೋರವಾಗಿದ್ದ ಕರಿನೀರ ಶಿಕ್ಷೆಗೆ ಎರಡು ಅವಧಿಗೆ (25ಘಿ 2, ಒಟ್ಟು ಐವತ್ತು ವರ್ಷಗಳ ಕರಿನೀರಿನ ಶಿಕ್ಷೆ) ಗುರಿಯಾದ ಮೊದಲ ರಾಜಕೀಯ ಖೈದಿ.

• ಸ್ವಾತಂತ್ರ್ಯಗಳಿಕೆಗಾಗಿ ಪ್ರಾಣಾರ್ಪಣೆಗೂ ಯುವಕರನ್ನು ಪ್ರೇರೇಪಿಸಿದ ಅವರು ಸ್ವಾತಂತ್ರ್ಯ ಉಳಿಕೆಗಾಗಿ, ಬ್ರಿಟಿಷ್ ಸೈನ್ಯದಲ್ಲಿ ಸೇರ್ಪಡೆಯಾಗುವಂತೆ ತರುಣರಿಗೆ ಕರೆ ನೀಡಿದ ವಾಸ್ತವವಾದಿ.

• ಬರವಣಿಗೆಗೆ ಅಗತ್ಯವಾದ ಸಾಮಗ್ರಿ (ಪೆನ್ನು ಕಾಗದ)ಗಳಾಗಲೀ, ಸೌಲಭ್ಯಗಳಾಗಲೀ ಇಲ್ಲದಿದ್ದರೂ ಅಂಡಮಾನ್‍ನ ಜೈಲುಖಾನೆಯ ಗೋಡೆಗಳ ಮೇಲೆ ಮೊಳೆಯಿಂದಂದಲೇ ಹತ್ತು ಸಹಸ್ರ ಸಾಲುಗಳಷ್ಟು ಕಾವ್ಯ ರಚಿಸಿ, ಬಾಯಿಪಾಠ ಮಾಡಿ, 14 ವರ್ಷಗಳ ಸೆರೆವಾಸದ ನಂತರ ಅದನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಒಪ್ಪಿಸಿದ ಪ್ರಪಂಚದ ಏಕೈಕ ಕವಿ. ಇಂತಹ ಉತ್ಕøಷ್ಟ ಕವನಗಳುಳ್ಳ ಸಂಕಲನ `ಕಮಲ' ಅವರ ಶ್ರೇಷ್ಠ ಕೃತಿಗಳಲ್ಲೊಂದು.

• ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿ ವ್ಯಾಪಕವಾಗಿದ್ದ ಅಸ್ಪøಶ್ಯತೆ ಯನ್ನು 10 ವರ್ಷಕ್ಕಿಂತ ಕಡಿಮೆ ಅವಧಿಯ ಸತತ ಪ್ರಯತ್ನದಲ್ಲಿ ತೊಲಗಿಸಿದ ಸಮಾಜ ಸುಧಾರಕ ಸಾವರ್ಕರ್.

• ಗಣೇಶೋತ್ಸವಗಳ ಆಚರಣೆಯನ್ನು ಪ್ರಾರಂಭಿಸಿ, ಅದರಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಎಲ್ಲಾ ಜಾತಿಯವರು ಒಟ್ಟಾಗಿ ಪಾಲ್ಗೊಳ್ಳುವಂತೆ ಮಾಡಿ ಸಮಾಜದಲ್ಲಿ ಸಾಮರಸ್ಯ ಬೆಳೆಯುವಂತೆ ಮಾಡಿದ ದೃಷ್ಟಾರ.

• ಬ್ರಿಟಿಷರಿಂದ ಬಂಧನಕ್ಕೊಳಗಾಗಿದ್ದು ಮಾತ್ರವಲ್ಲದೇ ಸ್ವಾತಂತ್ರ್ಯಾನಂತರ ಗಾಂಧಿ ಹತ್ಯೆಯ ಮಿಥ್ಯಾರೋಪ (1948) ಹಾಗೂ ಪಾಕಿಸ್ತಾನದ ನಾಯಕ ಲಿಯಾಖತ್ ಅಲಿ ಭಾರತಕ್ಕೆ ಬಂದಾಗ ಕಾನೂನು ಸುವ್ಯವಸ್ಥೆಗೆ ಭಂಗ ಬಂದೀತು ಎಂಬ ಕುಂಟು ನೆಪದಲ್ಲಿ ಸಾವರಕರ್‍ರನ್ನು ಬಂಧಿಸಿತು (1950 ಏಪ್ರಿಲ್ 4). ಇದು ಭಾರತ ಸರಕಾರ, ಸ್ವಾತಂತ್ರ್ಯ ಹೋರಾಟಗಾರ ಸಾವರಕರ್‍ರಿಗೆ ನೀಡಿದ ಗೌರವ !

• ಮೇ 1952ಲ್ಲಿ ನಡೆದ ಸಾಮಾಜಿಕ ಸಭೆಯಲ್ಲಿ `ಅಭಿನವ್ ಭಾರತ್' ಕ್ರಾಂತಿಕಾರಿ ಸಂಘಟನೆಯನ್ನು ವಿಸರ್ಜಿಸುವ ಘೋಷಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕ್‍ರಾಗಿದ್ದ ಶ್ರೀ ಮಾಧವ ಸದಾಶಿವರಾವ್ ಗೋಳವಲ್ಕರ್ (ಶ್ರೀ ಗೋಲ್ವಾಲ್ಕರ್ ಗುರೂಜಿ) ಉಪಸ್ಥಿತರಿದ್ದರು.

• ಆತ್ಮಸಮರ್ಪಣ ಯೋಗದ ಮೂಲಕ ಸ್ವಯಂಪ್ರೇರಣೆಯಿಂದ ಸಾವನ್ನು ಅಪ್ಪಿ ಕೊಂಡ ಮೊದಲ ರಾಜಕೀಯ ನಾಯಕ. ಪ್ರಾಯೋಪವೇಶ ವ್ರತವನ್ನಾಚರಿಸಿದ ಸಾವರಕರ್ ತಮ್ಮ 83ನೇ ವಯಸ್ಸಿನಲ್ಲಿ, 1966ರ ಫೆಬ್ರುವರಿ 26ರಂದು ದೇಹತ್ಯಾಗ ಮಾಡಿದರು.

• ಫೆಬ್ರುವರಿ 27, 1966ರಲ್ಲಿ ನಡೆದ ಇವರ ಅಂತ್ಯಸಂಸ್ಕಾರದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ 2500 ಮಂದಿ ಸಮವಸ್ತ್ರದಾರಿ ಸ್ವಯಂಸೇವಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಹಾಜರಿದ್ದರು.

• ಸಾವರಕರ್‍ರವರು ಒಬ್ಬ ಬರಹಗಾರ ಹಾಗೂ ಇತಿಹಾಸಕಾರರಾಗಿದ್ದರು. ಅಖಂಡ ಭಾರತ ವಿಶ್ವಮಾತೆಯಾಗಿ ಮೆರೆಯಬೇಕೆಂಬ ಕನಸನ್ನು
ಹೊಂದಿದ್ದ ಅವರು ಇಂಗ್ಲೀಷ್ ಹಾಗೂ ಮರಾಠಿಯಲ್ಲಿ ಅನೇಕ ಉತ್ಕøಷ್ಟ ಗ್ರಂಥಗಳನ್ನು ರಚಿಸಿದ್ದಾರೆ, ಅವುಗಳಲ್ಲಿ ಕೆಲವು ಹೀಗಿವೆ: ಸಿಕ್ಸ್ ಗ್ಲೋರಿಯಸ್ ಎಪೊಕ್ಸ ಆಫ್ ಇಂಡಿಯನ್ ಹಿಸ್ಟರಿ, 1857-ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ, ಹಿಂದುಪದಪಥಶಾಹಿ, ಹಿಂದುತ್ವ, ಹಿಂದೂರಾಷ್ಟ್ರ ದರ್ಶನ್, ಕಾˉÁ ಪಾನಿ, ಜೊಸೆಫ್ ಮ್ಯಾಝಿನಿ, ಮೈ ಲೈಫ್ ಇಂಪ್ರಿಸನ್‍ಮೆಂಟ್, ಕಮಲ, ಗೋಮಾಂತಕ.

(ಕೃಪೆ - ಪುಂಗವ)

 

Author : ಪುಂಗವ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited