Untitled Document
Sign Up | Login    
ಬೆಂಗಳೂರಿಗೂ ಬರಲಿ "ಪಿಸ್ಸಿಂಗ್ ಟ್ಯಾಂಕರ್''!

ಪಿಸ್ಸಿಂಗ್ ಟ್ಯಾಂಕರ್

ಅರೆ ಏನಿದು "ಪಿಸ್ಸಿಂಗ್ ಟ್ಯಾಂಕರ್'' ! ಎಂದು ಹುಬ್ಬೇರಿಸಬೇಡಿ.. ಬೆಂಗಳೂರಿನ ಮುಖ್ಯರಸ್ತೆ, ಗಲ್ಲಿ ಎಲ್ಲೇ ಹೋಗಲಿ.. ಪುರುಷರು ಗೋಡೆ ಬದಿ ನಿಂತು ಮೂತ್ರ ವಿಸರ್ಜಿಸುವ ದೃಶ್ಯ ಸಾಮಾನ್ಯ. ಇದಕ್ಕೆ ಪರಿಹಾರ ನೀಡುವುದಕ್ಕೆಂದೇ ಬಳಕೆಗೆ ಬಂದಿದೆ ಈ ಪಿಸ್ಸಿಂಗ್ ಟ್ಯಾಂಕರ್ !

ಮುಂಬಯಿ ನಗರದಲ್ಲಿ ಪಿಸ್ಸಿಂಗ್ ಟ್ಯಾಂಕರ್ ಕಾರ್ಯಾಚರಣೆ ಆರಂಭಿಸಿದ ಸುದ್ದಿ ಕಳೆದ ವಾರ ಟಿವಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ, "ಮೋದಿ ಹವಾ'' ಜೋರಾಗಿ ಬೀಸಿದ್ದರಿಂದ ಈ ಸುದ್ದಿ ಕಳೆದು ಹೋಗಿತ್ತು. ಸ್ವಚ್ಛ ಭಾರತದ ಪರಿಕಲ್ಪನೆಯೊಂದಿಗೆ "ದ ಕ್ಲೀನ್ ಇಂಡಿಯಾ'' ಎಂಬ ಸಾಮಾಜಿಕ ಸಂಘಟನೆಯೊಂದು ಇಂಥದ್ದೊಂದು ಪರಿಹಾರ ನೀಡಿದೆ.

ಈ ಪಿಸ್ಸಿಂಗ್ ಟ್ಯಾಂಕರ್ ಕಾರ್ಯಾಚರಣೆಯೇ ವಿಶಿಷ್ಟವಾದುದು. ಈ ಟ್ಯಾಂಕರ್ ನಗರ ತುಂಬಾ ಸುತ್ತಾಡುತ್ತಿರುತ್ತದೆ. ಯಾರಾದರೂ ಗೋಡೆ ಬದಿ ನಿಂತು "ಪಿಸ್'' ಮಾಡುವುದು ಕಂಡರೆ ತಕ್ಷಣವೇ ಟ್ಯಾಂಕರ್ ನಲ್ಲಿರುವ ಸಿಬ್ಬಂದಿ ಕೂಡಾ "ಪಿಸ್ಸಿಂಗ್'' ಕಾರ್ಯಾಚರಣೆಗೆ ಮುಂದಾಗುತ್ತಾರೆ. ಟ್ಯಾಂಕರ್ ಗೆ ಅಳವಡಿಸಲಾದ ಪೈಪ್ ಮೂಲಕ ನೀರನ್ನು "ಪಿಸ್'' ಮಾಡುವವರ ಮೇಲೆ ಚಿಮುಕಿಸಲಾಗುತ್ತದೆ. ಒದ್ದೆಯಾಗಿ ಪಡಿಪಾಟಿಲಿಗೀಡಾಗುವ ಅಥವಾ ಸಾರ್ವಜನಿಕವಾಗಿ ಮುಜುಗರಕ್ಕೀಡಾಗುವ ಬದಲು ಮೂತ್ರ ವಿಸರ್ಜನೆಗೆ ಎಲ್ಲಿ ಬಂತೋ ಅಲ್ಲಿ ಎನ್ನದೇ ಶೌಚಾಲಯವೇ ಬೆಸ್ಟ್ ಅನ್ನತೊಡಗಿದ್ದಾರೆ ಜನ.

ಇಂತಹ ಅನಿರೀಕ್ಷಿತ "ಪಿಸ್ಸಿಂಗ್'' ಕಾರ್ಯಾಚರಣೆಗೆ ಬಹಳ ಜನ ಗೋಡೆ ಬದಿ ನಿಲ್ಲುವುದು ಬಿಟ್ಟು ಸಾರ್ವಜನಿಕ ಶೌಚಾಲಯ ಹುಡುಕಲಾರಂಭಿಸಿದ್ದಾರಂತೆ.. ಅಂದ ಹಾಗೆ ಈ ಟ್ಯಾಂಕರ್ ಮೇಲಿನ ಸಿಬ್ಬಂದಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಇದು ಅನಿವಾರ್ಯ ಎಂಬುದು ಸಂಘಟನೆ ಹೇಳಿಕೆ. ಸ್ವಚ್ಛತೆ ಅರಿವು ಮೂಡಿಸುವುದಕ್ಕೆ ಇದರ ಹೊರತು ಬೇರೆ ದಾರಿ ಉಳಿದಿಲ್ಲ. ಎಷ್ಟೇ ಶಿಕ್ಷಿತರಾದರೂ ಈ ವಿಷಯದಲ್ಲಿ ಅರಿವುದು ಮೂಡಿಸುವುದಕ್ಕೆ ಇದ್ದುದು ಇದೊಂದೇ ದಾರಿ. ಹೀಗಾಗಿ ಈ ಕಾರ್ಯಾಚರಣೆಯ ಘೋಷ ವಾಕ್ಯ "ನೀವು ನಿಲ್ಲಿಸಿ, ನಾವು ನಿಲ್ಲಿಸುತ್ತೇವೆ'' ಎಂಬುದು. ರಸ್ತೆ ಬದಿ, ಗೋಡಿ ಬದಿ ನಿಂತು "ಪಿಸ್'' ಮಾಡುವ ಮುನ್ನ ಒಮ್ಮೆ ಶೌಚಾಲಯಕ್ಕೆ ಹೋಗುವುದು ಒಳ್ಳೆಯದಲ್ಲವೇ ಎಂದು ಯೋಚಿಸಿ ಕಾರ್ಯಪ್ರವೃತ್ತರಾಗವುದು ಉತ್ತಮ.

ಪಿಸ್ಸಿಂಗ್ ಟ್ಯಾಂಕರ್ ಕಾರ್ಯಾಚರಣೆ ಹೇಗಿದೆ ನೋಡಬೇಕೆನಿಸುತ್ತಿದೆಯೇ... ಹಾಗಿದ್ದರೆ ಈ ಲಿಂಕ್ (http://youtu.be/aaEqZQXmx5M)ನಲ್ಲಿ ನೋಡಬಹುದು.

 

Author : ಅರವಿಂದ್ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited