Untitled Document
Sign Up | Login    
ಬೆಂಗಳೂರಿನಲ್ಲಿ ಮೆದುಳು ಸಂಶೋಧನಾ ಕೇಂದ್ರ


ಉದ್ಯಾನನಗರಿ ಬೆಂಗಳೂರಿಗೆ ಇನ್ನೊಂದು ಹೆಮ್ಮೆ. ಸಿಲಿಕನ್ ಸಿಟಿ, ಐಟಿ ಸಿಟಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಸಧ್ಯದಲ್ಲಿಯೇ ಜಾಗತಿಕ ಮಟ್ಟದ ಮೆದುಳು ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ.

ಸುಮಾರು 225 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸಂಶೋಧನಾ ಕೇಂದ್ರ ಮೆದುಳಿನ ಅಧ್ಯಯನ, ಕೆಲವು ನಿರ್ದಿಷ್ಟ ಸಮಸ್ಯೆಗಳ ಅರಿಯುವ ಕೆಲಸ ಮಾಡಲಿದೆ.

ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಜೊತೆಗೆ ನ್ಯೂರೋಡಿ ಜನರೇಟಿವ್ (ನರಕೋಶ ವ್ಯವಸ್ಥೆಗೆ ಉಂಟಾಗುವ ಹಾನಿ) ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಸಂಶೋಧನಾ ಕೇಂದ್ರ ಮಾಡಲಿದೆ. ಮೆದುಳಿನ ಬಗ್ಗೆ ಹೊಸದಾಗಿ ಕಂಡುಕೊಳ್ಳುವ ಅಂಶಗಳನ್ನು ಪರಿಶೀಲಿಸಿ ಅಧ್ಯಯನವನ್ನೂ ಮಾಡಲಿದೆ.

ಇನ್ಫೋಸಿಸ್ ಕಾರ್ಯನಿರ್ವಾಹಕ ಉಪಾಧ್ಯಕ್ಶ ಕ್ರಿಸ್ ಗೋಪಾಲಕೃಷ್ಣನ್ ನೇತೃತ್ವದ ಪ್ರತೀಕ್ಷಾ ಟ್ರಸ್ಟ್ ಮತ್ತು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ ಸಿ) ಜಂಟಿಯಾಗಿ ಈ ಸಂಶೋಧನಾ ಕೇಂದ್ರ ಆರಂಭಿಸಲು ನಿರ್ಧರಿಸಿವೆ.

ಸಂಶೋಧನಾ ಕೇಂದ್ರಕ್ಕೆ ನೆರವು ನೀಡಲು ನೊಬೆಲ್ ಪ್ರಶಸ್ತಿ ವಿಜೇತ ವಿಜ್ನಾನಿ ಪ್ರೊ.ಟೋರ್ ಸ್ಟೆನ್ ವಿಸೆಲ್ ಅಧ್ಯಕ್ಷತೆಯ ಅಂತರಾಷ್ಟ್ರೀಯ ಮಟ್ಟದ ಸಲಹಾ ಮಂಡಳಿಯನ್ನು ಸ್ಥಾಪಿಸಲಾಗಿದೆ. ಕೊಲಂಬಿಯಾ ವಿವಿ ಪ್ರೊ.ಸ್ಟ್ಯಾನ್ಲಿ ಫಾನ್, ಷಿಕಾಗೋ ವಿವಿಯ ಸಂಗ್ರಾಮ್ ಸಿಸೋಡಿಯಾ , ವಾಷಿಂಗ್ಟನ್ ವಿವಿಯ ಜಾನ್ ಮೋರಿಸ್, ಜಿನೆವಾ ವಿವಿಯ ಸೆ.ಲೂಯಿಸ್ ಮತ್ತು ಜಿಯೋವಾನ್ನಿ ಫ್ರಿಸೋನಿ ಮತ್ತಿತರರು ಸಮಿತಿ ಸದಸ್ಯರು.

 

Author : ಲೇಖಾ ಆರ್ .

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited