Untitled Document
Sign Up | Login    
ವಿಶ್ವ ಬಾಯಿ ಆರೋಗ್ಯ ದಿನ


ಮಾರ್ಚ್ 20 ರಂದು ವಿಶ್ವ ಬಾಯಿಯ ಆರೋಗ್ಯ ದಿನವೆಂದು ವರ್ಲ್ಡ್ ಡೆಂಟಲ್ ಫ಼ೆಡರೇಷೇನ್(ಈಆI) ಸಂಸ್ಥೆ ಪರಿಗಣಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬಾಯಿಯ ಆರೋಗ್ಯದ ಕುರಿತಾಗಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಜಾಗತಿಕ ಮಟ್ಟದಲ್ಲಿ ಬಾಯಿಯ ಹಾಗು ಹಲ್ಲಿನ ಅನಾರೋಗ್ಯದ ತೊಂದರೆಗಳು ಮುಂಚೂಣಿಯಲ್ಲಿವೆ. ಸರಿಯಾದ ಸಮಯದಲ್ಲಿ ಸರಿಯಾದ ಗಮನ ಕೊಟ್ಟರೆ ಇವುಗಳನ್ನು ತಡೆಯಬಹುದು. ವಿಶ್ವ ಬಾಯಿಯ ಆರೋಗ್ಯ ದಿನ ಬಾಯಿ ಮತ್ತು ಹಲ್ಲಿನ ತಜ್ನ್ಯರಿಗೆ ಸಮುದಾಯದ ಸೇವೆ ಮಾಡಲು ಹಾಗು ಸಾಮಾನ್ಯ ಜನರಿಗೆ ಬಾಯಿಯ ಆರೋಗ್ಯದ ಕುರಿತಾಗಿ ವಿಶೇಷವಾಗಿ ಮಾಹಿತಿ ನೀಡಲು ಒಂದು ಒಳ್ಳೆಯ ಅವಕಾಶ.

ಪ್ರತೀ ವರ್ಷದಂತೆ ಈ ಬಾರಿಯೂ ವಿಷಯವೊಂದನ್ನು ಪ್ರಮುಖವಾಗಿರಿಸಲಾಗಿದೆ. ಬಾಯಿಯ ಆರೋಗ್ಯ ಹಾಗು ದೇಹಾರೋಗ್ಯ ಈ ವರ್ಷದ ಧ್ಯೇಯವಾಗಿದೆ. ಬಾಯಿಯ ಆರೋಗ್ಯ ದೇಹಾರೋಗ್ಯದ ಕನ್ನಡಿ ಎಂದು ಹೇಳಲಾಗುತ್ತದೆ. ಹಲವು ರೋಗ ಲಕ್ಷಣಗಳು ಬಾಯಿಯಲ್ಲಿ ಮೊದಲಿಗೆ ಕಾಣಿಸಬಹುದು. ಅದಲ್ಲದೇ ಬಾಯಿಯ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಕೂಡ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತೀ ಮುಖ್ಯ.

ದೇಹದ ಅನಾರೋಗ್ಯಗಳ ಸಾಲಿಗೆ ಸೇರುವ ಹಲವು ರೋಗಗಳು ಬಾಯಿಯ ಹಾಗು ಹಲ್ಲಿನ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಬಹುದು. ಹ್ರದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮುಂತಾದ ರೋಗದಿಂದ ಬಳಲುವವರು ತಮ್ಮ ಬಾಯಿಯ ಹಾಗು ಹಲ್ಲಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡದಿದ್ದಲ್ಲಿ ಉಲ್ಬಣಗೊಳ್ಳಬಹುದು. ಗರ್ಭಿಣಿಯರ ಬಾಯಿಯ ಆರೋಗ್ಯದಲ್ಲಿ ಕೂಡ ಏರುಪೇರಾಗಬಹುದು. ಹೀಗೆ ಬಾಯಿಯ ಆರೋಗ್ಯವನ್ನು ಯಾವುದೇ ಕಾರಣಕ್ಕೆ ನಿರ್ಲಕ್ಷಸಿದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ.

ಹಾನಿಕಾರಕ ತಂಬಾಕು ಹಾಗು ಅದರ ಇತರೆ ಉತ್ಪನ್ನಗಳ ಕುರಿತಾಗಿ ತಿಳುವಳಿಕೆ ಇರುವವರೂ ಅದರ ಬಳಕೆ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಬಾಯಿಯ ಕಾನ್ಸರ್ ಜಾಗತಿಕ ಮಟ್ಟದ ಒಂದು ಪಿಡುಗು. ಸಾರ್ವಜನಿಕರು ತಮ್ಮನ್ನು ತಾವು ಅಂತಹ ಚಟಗಳ ದಾಸರಾಗ ಬಾರದೆಂದು ಮನಸ್ಸನ್ನು ದೃಢಮಾಡಬೇಕಾಗಿದೆ.
ಬಾಯಿ ಮತ್ತು ಹಲ್ಲಿನ ಆರೊಗ್ಯ ಪ್ರತಿಯೊಬ್ಬನಿಗೂ ಮುಖ್ಯ. ಸುಂದರ ಹಾಗು ಅನಂದದ ನಗು ಪ್ರತಿಯೊಬ್ಬನ ಆಸ್ತಿ.ಇಂದೇ ಬಾಯಿಯ ಆರೋಗ್ಯದ ಕಾಳಜಿವಹಿಸುತ್ತೇನೆಂದು ಪ್ರತಿಜ್ನೆ ಕೈಗೊಂಡು , ನಿಮ್ಮ ದಂತ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಿ.

ದಂತ ಚಿಕಿತ್ಸೆ ದುಬಾರಿಯಲ್ಲ, ನಿರ್ಲಕ್ಷತೆ ದುಬಾರಿಯಾದೀತು!!!

 

Author : ಅಶ್ವಿನಿ ಪಿ ಎಸ್ ಭಟ್

Author's Profile

ಅಶ್ವಿನ್ ಪಿ ಎಸ್
ಅಂತಿಮ ವರ್ಷದ ಬಿ.ಡಿ.ಎಸ್ ವಿದ್ಯಾರ್ಥಿ,
ಸರಕಾರಿದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು.

psbhatashwin@gmail.com
www.facebook.com/ForAHappySmile

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited