Untitled Document
Sign Up | Login    
ಹಾಸ್ಪಿಟಲ್ ಎಡ್ಮಿಟ್ ಆದ್ರೂ ಹೆದರ್ಬೇಕಾಗಿಲ್ಲ; ಪಾವತಿಗೂ ಬಂತು ಇಎಂಐ ಸೌಲಭ್ಯ!

.

ಮನೆ, ವಾಹನ, ವಿದೇಶ ಪ್ರವಾಸ, ಗ್ರಾಹಕ ವಸ್ತುಗಳ ಖರೀದಿ ಕನಸು ನನಸು ಮಾಡುವುದಕ್ಕೆ ಇಎಂಐ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದು ಹಳೆ ಸುದ್ದಿಯೆಂಬುದೇನೋ ನಿಜ. ಆದರೆ, ಆರೋಗ್ಯ ಕ್ಷೇತ್ರಕ್ಕೂ ಇಎಂಐ ಸೌಲಭ್ಯದ ವ್ಯವಸ್ಥೆ ಕಾಲಿಡುತ್ತಿದೆ ಎಂದರೆ ನಂಬುತ್ತೀರಾ?

ಹೌದು.. ದಿನೇದಿನೆ ಬದುಕು ದುಬಾರಿಯಾಗತೊಡಗಿದೆ. ದುಡಿಮೆ ಸಾಲುತ್ತಿಲ್ಲ. ಸಾಲ ಸಿಗುತ್ತಿಲ್ಲ. ದುಡಿಮೆ ಇದ್ದಷ್ಟೇ ಖರ್ಚು ಮಾಡು ಎಂಬ ಸ್ಥಿತಿ ಇಲ್ಲವೇ ಇಲ್ಲ. ಕ್ರೆಡಿಟ್ ಕಾರ್ಡ್, ನಿಗದಿತ ಡೌನ್ ಪೇಮೆಂಟ್ ಪಾವತಿಸಿ ನಿಮಗೇನು ಬೇಕೋ ಅದನ್ನು ನಿಮ್ಮದಾಗಿಸಿ.. ನಂತರ ಇಎಂಐ(ಈಕ್ವೇಟೆಡ್ ಮಂತ್ಲಿ ಇನ್ ಸ್ಟಾಲ್ ಮೆಂಟ್) ಪಾವತಿಸಿ ಎಂಬ ವ್ಯವಸ್ಥೆ ಈಗಾಗಲೇ ಗ್ರಾಹಕ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ.

ಈಗ ಇದೇ ವ್ಯವಸ್ಥೆಯನ್ನು ವೈದ್ಯಕೀಯ ಕ್ಷೇತ್ರಕ್ಕೂ ಅಳವಡಿಸಲು ಫಾರ್ಮಸ್ಯೂಟಿಕಲ್ ಕಂಪನಿಗಳು ವೈದ್ಯಕೀಯ ಉಪಕರಣಗಳ ಉತ್ಪಾದಕರು ಚಿಂತನೆ ನಡೆಸುತ್ತಿದ್ದಾರೆ. ಈಗಾಗಲೇ ಕೆಲವು ಕಂಪನಿಗಳು ಬ್ಯಾಂಕಿಂಗ್ ಕ್ಷೇತ್ರದ ಜತೆ ಕೈ ಜೋಡಿಸಲಾರಂಭಿಸಿದ್ದು, ಹಲವು ಔಷಧಗಳು, ಹೃದಯದ ವಾಲ್ವ್, ಸ್ಟೆಂಟ್ ಮೊದಲಾದ ಉಪಕರಣಗಳ ಖರೀದಿಗೆ ಇಎಂಐ ಸೌಲಭ್ಯ ಪರಿಚಯಿಸತೊಡಗಿವೆ.

ಉದಾಹರಣೆಗೆ ಹೇಳುವುದಾದರೆ, ಅಮೆರಿಕ ಮೂಲದ ಮೆರ್ಕ್ ಅಂಡ್ ಕಂಪನಿಯ ಸೋದರ ಸಂಸ್ಥೆ ಭಾರತದ ಪಂಜಾಬಿನಲ್ಲಿ "ಸಂಭವ್'' ಯೋಜನೆ ಪರಿಚಯಿಸಿದ್ದು, ಹೆಪಟೈಟಿಸ್ ಸಿಗೆ ಬೇಕಾದ ಔಷಧವನ್ನು ಖರೀದಿಸಿದ ಬಳಿಕ, ಹೆಚ್ಚುವರಿ ಶುಲ್ಕವಿಲ್ಲದೆ ಇಎಂಐ ಮೂಲಕ ಪಾವತಿಸುವುದಕ್ಕೆ ಅವಕಾಶ ಒದಗಿಸಿದೆ. ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಿರುವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಈ ಯೋಜನೆಯನ್ನು ಇಡೀ ದೇಶಕ್ಕೆ ವಿಸ್ತರಿಸಲು ಕಂಪನಿ ಚಿಂತನೆ ನಡೆಸಿದೆ. ಸಾಮಾನ್ಯವಾಗಿ ಈ ರೀತಿ ಇಎಂಐ ಸೌಲಭ್ಯ ನೀಡುವಾಗ ಖರೀದಿದಾರರು ಅಥವಾ ಗ್ರಾಹಕರು ಶೇಕಡ 15ರಷ್ಟು ಹಣವನ್ನು ಡೌನ್ ಪೇಮೆಂಟ್ ರೂಪದಲ್ಲಿ ಪಾವತಿಸಬೇಕು. ಉಳಿದ ಶೇಕಡ 85ರಷ್ಟು ಮೊತ್ತವನ್ನು 3,6,9 ಹಾಗೂ ಗರಿಷ್ಠ 5 ವರ್ಷಗಳ ಅವಧಿಯಲ್ಲಿ ಪಾವತಿಸಬೇಕು. ಈ ಕಂಪನಿ ಸದ್ಯಕ್ಕೆ 30 ಸಾವಿರ ರೂ.ಗಳಿಂದ ಹಿಡಿದು 8.5 ಲಕ್ಷ ರೂ.ಗಳ ತನಕ ಔಷಧ ಸಾಲ ಒದಗಿಸುತ್ತಿದೆ.

ಕೊನೇ ಮಾತು; ಈಗಾಗಲೇ ಆರೋಗ್ಯ ವಿಮೆ ಹೆಸರಿನಲ್ಲಿ ದಂಧೆ ನಡೆಯುತ್ತಿರಬೇಕಾದರೆ, ಇಂಥದ್ದೊಂದು ಯೋಜನೆ ಜಾರಿಗೆ ಬಂದರೆ ರೋಗಿಗಳ ಮನೆಯವರಿಗೆ ಸ್ವಲ್ಪ ನಿರಾಳವಾಗಬಹುದಾದು. ಆದರೂ, ಕೆಲವು ಆಸ್ಪತ್ರೆಗಳು ಬೇಕಾಬಿಟ್ಟಿ ಔಷಧಗಳನ್ನು ಖರೀದಿಸಲು ಹೇಳಿ ಇಂತಹ ಕಂಪನಿಗಳನ್ನು ರೆಫರ್ ಮಾಡಿದರೆ ಅದನ್ನು ತಡೆಗಟ್ಟುವುದು ಹೇಗೆ ಎಂಬ ಪ್ರಶ್ನೆ ಇದೆ.

 

Author : ಸುಭಾಷ್ 

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited