Untitled Document
Sign Up | Login    
ಬಿಸ್ಕತ್ ಮತ್ತು ಉಪ್ಪಿನಕಾಯಿಯಲ್ಲಿದೆ ಅನಾರೋಗ್ಯಕರ ಅಂಶ: ಅಧ್ಯಯನದಿಂದ ಪತ್ತೆ


ಇನ್ನುಮುಂದೆ ನೀವು ಬಿಸ್ಕತ್ ಮತ್ತು ಉಪ್ಪಿನಕಾಯಿ ತಿನ್ನುವಾಗ ಸ್ವಲ್ಪ ಜಾಗ್ರತಿ ವಹಿಸಬೇಕು. ಈ ಬಿಸ್ಕತ್ ತುಂಬಾ ಚೆನ್ನಾಗಿದೆ ಎಂದಾಗಲೀ, ಅಥವಾ ಈ ಉಪ್ಪಿನ ಕಾಯಿ ಎಷ್ಟು ಟೇಸ್ಟಿಯಾಗಿದೆ ಎಂದಾಗಲಿ ಬಾಯಿ ಚಪ್ಪರಿಸಿ ತಿನ್ನುವಂತಿಲ್ಲ. ಕೆಲ ಪ್ರಖ್ಯಾತ ಬಿಸ್ಕತ್ ಗಳು ಸಕ್ಕರೆ ಕಾಯಿಲೆ ಬರಲು ಕಾರಣವಾದರೆ, ಮತ್ತೆ ಕೆಲ ಉಪ್ಪಿನಕಾಯಿ ನಿಮಗೆ ರಕ್ತದೊತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಹೀಗಾಗಿ ಇನ್ನುಮುಂದೆ ಬಿಸ್ಕೇಟ್ ಮತ್ತು ಉಪ್ಪಿನಕಾಯಿ ಖರೀದಿಸುವಾಗ ಅವುಗಳ ಗುಣಮಟ್ಟವನ್ನು ಪರಿಶೀಲಿಸಲೇ ಬೇಕು.

ಗ್ರಾಹಕರ ಇಲಾಖೆಯ ಸಹಯೋಗದಲ್ಲಿ ಕಾನ್ಸರ್ಟ್ ಟ್ರಸ್ಟ್ ಎಂಬ ಸ್ವಯಂಸೇವಾ ಸಂಸ್ಥೆ ನಡೆಸಿದ ಬಿಸ್ಕತ್ ಮತ್ತು ಉಪ್ಪಿನಕಾಯಿ ಬ್ರ್ಯಾಂಡ್ ಗಳ ಗುಣಮಟ್ಟ ಪರಿಶೀಲನೆಯಲ್ಲಿ ಈ ಆತಂಕಕಾರಿ ಅಂಶಗಳು ಪತ್ತೆಯಾಗಿವೆ.

ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಮತ್ತು ತಮಿಳುನಾಡಿನಲ್ಲಿರುವ 34 ಖ್ಯಾತ ಬಿಸ್ಕತ್ ಮತ್ತು 25 ಪ್ರಖ್ಯಾತ ಉಪ್ಪಿನಕಾಯಿ ಬ್ರ್ಯಾಂಡ್ ಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವುಗಳ ಜಾಹೀರಾತು ಮತ್ತು ಲೇಬಲ್ ಗಳಲ್ಲಿ ಹೇಳಿಕೊಂಡಿರುವ ಅಂಶಗಳಿಗೂ ತುಂಬಾ ವ್ಯತ್ಯಾಸಗಳು ಅಧ್ಯಯನದ ವೇಳೆ ಕಂಡುಬಂದಿವೆ.

ಅಧ್ಯಯನದಲ್ಲಿ ಆರೋಗ್ಯ ಮತ್ತು ಪ್ಯಾಕೇಜಿಂಗ್ ಅನ್ನು ಮಾನದಂಡವಾಗಿರಿಸಿಕೊಳ್ಳಲಾಗಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಜಿ.ಸಂತಾನರಾಜನ್ ಎಂಬುವವರು ವಿವರಿಸಿದ್ದಾರೆ.

ಕ್ರೀಮ್, ಸಾಲ್ಟ್ ಮತ್ತು ಬೇಕರಿ ಬಿಸ್ಕತ್ ಗಳನ್ನು ಪರಿಶೀಲಿಸಿದಾಗ ಇದರಲ್ಲಿ ಬಹುತೇಕ ಬಿಸ್ಕತ್ ಗಳಲ್ಲಿ ಅತಿಯಾದ ಸಕ್ಕರೆ ಮತ್ತು ಕ್ಯಾಲೊರಿ ಅಂಶಗಳು ಪತ್ತೆಯಾಗಿವೆ. ಇವುಗಳು ತಾತ್ಕಾಲಿಕವಾಗಿ ಶಕ್ತಿಯನ್ನು ವರ್ಧಿಸಿದರೂ ಅವುಗಳಲ್ಲಿ ಪೌಷ್ಟಿಕಾಂಶಗಳ ಕೊರತೆಯಿದೆ. ಲೇಬಲ್ ಗಳಲ್ಲಿ ಹೇಳಿಕೊಂಡಂತೆ ಅವುಗಳಲ್ಲಿ ಕ್ಯಾಲ್ಸಿಯಂ, ಜೇನುತುಪ್ಪದ ಅಂಶಗಳಿಲ್ಲ ಎಂದು ತಿಳಿದುಬಂದಿದೆ.

ಇನ್ನು ಉಪ್ಪಿನಕಾಯಿ ಪರಿಶೀಲನೆ ವೇಳೆ ಹಲವು ಉಪ್ಪಿನಕಾಯಿ ಬ್ರ್ಯಾಂಡ್ ಗಳು ಅತಿಯಾದ ಸೊಡಿಯಂ ಬಳೆಕೆ ಮಾಡಿರುವುದು ಪತ್ತೆಯಾಗಿದೆ. ಸಿಹಿ ಉಪ್ಪಿನಕಾಯಿಯಲ್ಲಿ ಮಿತಿ ಮೀರಿದ ಸಕ್ಕರೆ ಪ್ರಮಾಣವಿದ್ದು, ಇದ್ಸರಬಳಕೆಯಿಂದ ಹೃದಯ ಅಥವಾ ಮಧುಮೇಹದಂತಹ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇನ್ನುಮುಂದೆ ಬಿಸ್ಕತ್ ಹಾಗೂ ಉಪ್ಪಿನಕಾಯಿ ಖರೀದಿಸುವ ಮುನ್ನ ಪರಿಶೀಲಿಸುವುದು ಉತ್ತಮ.

 

Author : ಲೇಖಾ.ಆರ್ .

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited