Untitled Document
Sign Up | Login    
ಸಿಗರೆಟ್‌ ಮಾರಾಟಕ್ಕೆ ಶೀಘ್ರ ನಿಷೇಧ


ಸಿಗರೇಟ್ ಹಾಗೂ ಬೀಡಿಗಳ ದುಷ್ಪರಿಣಾಮಗಳನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಿಂಗಲ್ ಸಿಗರೇಟ್ ಹಾಗೂ ಬಿಡಿ ಮಾರಾಟ ನಿಷೇಧಕ್ಕೆ ಮುಂದಾಗಿದೆ.

ಸಿಂಗಲ್‌ (ಬಿಡಿ) ಸಿಗರೆಟ್‌ ಮಾರಾಟವನ್ನು ನಿಷೇಧಿಸಬೇಕು ಮತ್ತು ಸಿಗರೇಟು ಕೊಳ್ಳುವವರ/ಸೇದುವವರ ಕನಿಷ್ಠ ವಯೋಮಿತಿ ಯನ್ನು ಈಗಿನ 18ರಿಂದ 25ಕ್ಕೆ ಹೆಚ್ಚಿಸ ಬೇಕು ಎಂಬ ಕೇಂದ್ರ ಆರೋಗ್ಯ ಸಚಿವಾ ಲಯದ ಸಲಹೆಗಾರ ರಮೇಶ್‌ ಚಂದ್ರ ನೇತೃತ್ವದ ಸಮಿತಿ ಮಾಡಿದ ಶಿಫಾರಸನ್ನು ಕೇಂದ್ರ ಆರೋಗ್ಯ ಸಚಿವಾಲಯ ಒಪ್ಪಿಕೊಂಡಿದೆ.

ಸಂಪುಟ ಸಭೆಯಲ್ಲಿ ಇದರ ಟಿಪ್ಪಣಿ ಚರ್ಚೆಯಾಗಬೇಕಿದ್ದು, ಸಂಪುಟದ ಅನುಮೋದನೆ ದೊರಕಿದ ನಂತರ ಸಂಸತ್ತಿನಲ್ಲಿ ಕಾಯ್ದೆಗೆ ತಿದ್ದುಪಡಿಯಾ ದರೆ ಹೊಸ ನಿಯಮಗಳು ಜಾರಿಗೆ ಬರುವ ಹಾದಿ ಸುಗಮವಾಗಲಿದೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸಂಸತ್ತಿಗೆ ನೀಡಿದ ಲಿಖೀತ ಹೇಳಿಕೆಯಲ್ಲಿ ಮಂಗಳವಾರ ಈ ಮಾಹಿತಿ ನೀಡಿದ್ದಾರೆ. 'ರಮೇಶ್‌ ಚಂದ್ರ ಸಮಿತಿ ಶಿಫಾರಸನ್ನು ಆರೋಗ್ಯ ಸಚಿವಾಲಯ ಒಪ್ಪಿಕೊಂಡಿದೆ. ಸಿಗ ರೇಟು ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ-2003ನ್ನು ತಿದ್ದುಪಡಿ ಮಾಡಲು ಈ ಸಮಿತಿ ಶಿಫಾರಸು ಮಾಡಿದೆ' ಎಂದಿದ್ದಾರೆ.

ಈ ನಿಟ್ಟಿನಲ್ಲಿ, ಸಿಗರೆಟ್‌ ಮಾರಾಟಗಾ ರರು ಇಡೀ ಪ್ಯಾಕನ್ನೇ ಮಾರಾಟ ಮಾಡಬೇಕು. ಬಿಡಿ (ಸಿಂಗಲ್‌) ಸಿಗರೇಟು ಮಾರುವಂತಿಲ್ಲ. ಅಲ್ಲದೆ, ಕೊಳ್ಳುವವರ ವಯೋಮಿತಿಯನ್ನೂ ಹೆಚ್ಚಿಸಲಾಗುತ್ತದೆ. ನಿಯಮ ಉಲ್ಲಂ ಸಿದವರಿಗೆ ಭಾರಿ ದಂಡ ವಿಧಿಸಲಾ ಗುತ್ತದೆ ಎಂದು ನಡ್ಡಾ ವಿವರಿಸಿದ್ದಾರೆ. ಸಂಪುಟದಲ್ಲಿ ಚರ್ಚೆಗೆ ಇದರ ಟಿಪ್ಪಣಿ ಯನ್ನು ತಮ್ಮ ಸಚಿವಾಲಯ ಸಿದ್ಧಗೊ್ಳಿಸಿದೆ ಎಂದೂ ನಡ್ಡಾ ತಿಳಿಸಿದ್ದಾರೆ.

ಸಿಗರೇಟು ಉದ್ಯಮದಿಂದ ಸರ್ಕಾರಕ್ಕೆ ಪ್ರತಿ ವರ್ಷ ತೆರಿಗೆ ರೂಪದಲ್ಲಿ 25 ಸಾವಿರ ಕೋಟಿ ಆದಾಯ ಬರುತ್ತದೆ. ಆದರೆ ಇದಕ್ಕೆ ಹೋಲಿಸಿದರೆ, ಇದರ ದುಷ್ಪರಿಣಾಮದಿಂದ ಆಗುತ್ತಿರುವ ಖರ್ಚು ಭಾರಿ ಪ್ರಮಾಣದಲ್ಲಿ ಹೆಚ್ಚಿರುವ ಕಾರಣ, ಸಿಗರೆಟ್‌ ಮಾರಾಟದ ಮೇಲೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ.

ಭಾರತೀಯರು ಪ್ರತಿ ವರ್ಷ ಅಂದಾಜು 100 ಶತಕೋಟಿ ಸಿಗರೇಟುಸೇದುತ್ತಾರೆ ಎಂದು ಅಂಕಿ- ಅಂಶಗಳು ಹೇಳುತ್ತವೆ. 1 ಸಿಗರೆಟ್‌ ಪ್ಯಾಕ್‌ ಬೆಲೆ ಸುಮಾರು 50 ರೂ.ನಿಂದ 190 ರೂ. ವರೆಗೂ ಇದೆ. ಪೂರ್ತಿ ಪ್ಯಾಕ್‌ ಒಟ್ಟಿಗೆ ಕೊಳ್ಳಲು ಆಗದವರು ಹೆಚ್ಚಾಗಿ ಖುಲ್ಲಾ ಸಿಗರೇಟು ಖರೀದಿಸುತ್ತಾರೆ. ಖುಲ್ಲಾ ಸಿಗರೆಟ್‌ ಮಾರಾಟದಿಂದಲೇ ತಂಬಾಕು ಕಂಪನಿಗಳು ಶೇ.70ರಷ್ಟು ಆದಾಯ ಗಳಿಸುತ್ತವೆ.

ಆದರೆ ಸರ್ಕಾರದ ನಿರ್ಬಂಧಗ ಳಿಂದ ಸಿಗರೇಟು ಉದ್ಯಮಕ್ಕೆ ಭಾರಿ ಹೊಡೆತ ಬೀಳುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಐಟಿಸಿ ಸೇರಿದಂತೆ ಅನೇಕ ತಂಬಾಕು ಕಂಪನಿಗಳ ಷೇರುಗಳು ಸೋಮವಾರ ಕುಸಿದಿವೆ.

 

Author : ಸಂಗ್ರಹ ವರದಿ .

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited