Untitled Document
Sign Up | Login    
1960 ದಶಕದ ಇಪ್ಪತ್ತರ ಹರೆಯದ ಮೆಲುಕುಗಳು


ನೀವೊಬ್ಬ ನಿವೃತ್ತ ವ್ಯಕ್ತಿ ಸಾದಾರಣ ಎಪ್ಪತ್ತರ ಅಂಚಿನಲ್ಲಿರುವ ವಯೋವೃದ್ದ .ದಿನ ನಿತ್ಯವೂ ಮುಂಜಾನೆಯ ತಂಪಾದ ವಾತಾವರಣದಲ್ಲಿ ದಾರಿ ನಡೆಯುವುದೆಂದರೆ ನಿಮಗೆ ಬಲು ಇಷ್ಟ. ಹೀಗೆ ನಡೆಯುತ್ತಿರುವಾಗ ಕೆಲವೊಮ್ಮೆ ನೀವು ನಿಮ್ಮದೇ ಪ್ರಾಯದ ಇನ್ನೋರ್ವ ವ್ಯಕ್ತಿಯೂ ನಿಮ್ಮಎದುರಿನಲ್ಲಿ ನಡೆಯುತ್ತಿರುವುದನ್ನು ಗಮನಿಸುತ್ತೀರಿ. ಅವನಲ್ಲಿ ಏನೋ ಒಂದು ಆಕರ್ಷಣೆ ನಿಮ್ಮನ್ನು ಸೆಳೆಯುತ್ತದೆ . ನೀವು ಅವನೊಡನೆ ಒಂದು ದಿನ ಮಾತನಾಡಲು ಪ್ರಾರಂಭಿಸುತ್ತೀರಿ. ಆಗ ನಿಮಗೆ ಆತನು ನಿಮ್ಮ ಐವತ್ತು ವರ್ಷ ಹಿಂದಿನ ಇಂಜಿನಿಯರಿಂಗ್ ಕಾಲೇಜ್ ನ ಸಹಪಾಠಿ ಎಂದು ತಿಳಿಯುತ್ತದೆ.

ಇದು ಒಂದು ಅವಸ್ಮರಣೀಯ ಸಂದರ್ಭ ಹಾಗೂ ಅನುಭವ. ನಿಮ್ಮ ಮನಸ್ಸಿನಲ್ಲಿ ಹಾಗೂ ಅಂತಕರಣದಲ್ಲಿ ಆತನ ಐವತ್ತು ವರ್ಷ ಮೊದಲಿನ ಯೌವನದ ಸುಂದರ ಚಿತ್ರಪಟವು ತುಂಬಿಕೊಂಡಿರುವಾಗ ಒಮ್ಮಿಂದೊಮ್ಮೆ ಈಗ ಆತನ ಬೋಳು ತಲೆ ,ಕೆದರಿದ ಬಿಳಿ ಕೂದಲು ,ಸುಕ್ಕುಗಟ್ಟಿದ ಮುಖವನ್ನು ನೋಡಿದಾಗ ನಗುವು ಬರುತ್ತದೆ . ಆದರೆ ನೀವು ಸಹಾ ಮುದುಕರಾಗಿದ್ದೀರಿ ಎಂಬ ಕಟು ಸತ್ಯದ ಅರಿವಾಗುತ್ತದೆ. ನಿಮ್ಮ ಮನಸ್ಸು ಇನ್ನೂ ಎಳೆಯಾಗಿದ್ದರೂ ದೇಹವು ವೃದ್ಧಾಪ್ಯದಿಂದ ಶಿಥಿಲವಾಗಿದೆ ಎಂಬ ನಗ್ನ ಸತ್ಯದ ಅರಿವಾಗುತ್ತದೆ.

ಆದರೂ ನೀವಿಬ್ಬರೂ ನೀವು ಕಾಲೇಜ್ ಮೆಟ್‌,ಹಾಸ್ಟೆಲ್ ಮೆಟ್‌ , ಕ್ಲಾಸ್ ಮೆಟ್‌, ರೂಮ್‌ ಮೆಟ್‌ ಆಗಿ ಐವತ್ತು ವರ್ಷಗಳ ಹಿಂದೆ ಕಳೆದ ಸ್ವರ್ಣ ದಿನಗಳನ್ನು ಸಂಭ್ರಮದಿಂದ ಜ್ಞಾಪಿಸುಕೊಳ್ಳುತ್ತೀರಿ .. ಹಳೆಯ ಮಧುರವಾದ ನೆನಪುಗಳು ನಿಜಕ್ಕೂ ಅವಸ್ಮರಣೀಯ.

ಕರ್ನಾಟಕದ ಸುರತ್ಕಲ್ಲಿನ ಇಂಜಿನಿಯರಿಂಗ್ ಕಾಲೇಜ್ NITK ( ಹಳೆ ಹೆಸರು KREC ) ಯ 1968 ರ ಬ್ಯಾಚಿನ ಸಹಪಾಠಿಗಳಿಗೆ ಬರುವ ಸೋಮವಾರ ಡಿಸೆಂಬರ್ ಇಪ್ಪತ್ತಮೂರು ಹಾಗೂ ಮಂಗಳವಾರ ಡಿಸೆಂಬರ್ ಇಪ್ಪತ್ತನಾಲ್ಕನೆ ತಾರೀಕಿಗೆ ಕಾಲೇಜ್ ನ ಕ್ಯಾಂಪಸ್ ನಲ್ಲಿ ನಡೆಯುವ ಪುನರ್ಮಿಲನ ಸಂದರ್ಭದಲ್ಲಿ ಈ ಮೇಲೆ ಹೇಳಿದ ಅವಸ್ಮರಣೀಯ ಅನುಭವವಾಗಲಿದೆ . ಇದು ಹೆಳೆಯ ಮುಖವನ್ನು ಮರೆತು ನಮ್ಮ ಸ್ನೇಹಿತರ ಹೊಸ ಮುಖಗಳನ್ನು ನಮ್ಮ ಸ್ಮೃತಿಪಟಲದಲ್ಲಿ ಕೂಡಿಡುವ ಒಂದು ಸದವಕಾಶ
1968ನೆ ಇಸವಿಯಲ್ಲಿ ಪಧವೀದರರಾದಮೇಲೆ ಪ್ರತಿಯೊಬ್ಬರೂ ಮುಂದಿನ ಓದಿಗಾಗಿ , ಕೆಲಸಕ್ಕಾಗಿ ದೇಶದ ಹಾಗೂ ವಿದೇಶದ ಬೇರೆ ಬೇರೆ ಭಾಗಗಳಿಗೆ ವಲಸೆ ಹೋಗಿ ಬೇರೆ ಬೇರೆ ವೃತ್ತಿ ವ್ಯವಸಾಯಗಳನ್ನು ಕರಗತ ಮಾಡಿಕೊಂಡರು .

ಕೆಲವರು ಸಂಶೋಧಕರಾದರೆ ,ಕೆಲವರು ವಿಶ್ವ ವಿದ್ಯಾಲಯದ ಪ್ರಾದ್ಯಾಪಕರಾದರು . ಹಲವರು ತಮ್ಮದೇ ಆದ ಕೈಗಾರಿಕೆಗಳನ್ನು ಪ್ರಾರಂಭಿಸಿ ತಾಂತ್ರಿಕ ಉದ್ಯಮಿಗಳಾದರು .ಹಲವರು ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಪ್ರೆಸಿಡೆಂಟ್ , CEO ,ಡೈರೆಕ್ಟರ್ ಗಳಾದರು . ಇನ್ನು ಕೆಲವರು ಭಾರತೀಯ ಸೇನೆಯಲ್ಲಿ ,ವಾಯು ಹಾಗೂ ಜಲ ಸೇನೆಯಲ್ಲಿ ಹಿರಿಯ ಅಧಿಕಾರಿಗಳಾದರು .ವಿಶ್ವದ ಅನೇಕ ದೇಶಗಳಾದ ಅಮೇರಿಕ , ದುಬೈ ,ಇಂಗ್ಲೆಂಡ್ , ಆಸ್ಟ್ರೇಲಿಯಾ ಮುಂತಾದ ಕಡೆಗಳಲ್ಲಿ ನಮ್ಮ NITK ಯ ಕೀರ್ತಿಯನ್ನು ಬೆಳಗಿದರು. ಇವರಲ್ಲಿ ಹೆಚ್ಚಿನವರು ಈ ಪುನರ್ಮಿಲನದ ಹಬ್ಬದಲ್ಲಿ ಭಾಗಿಯಾಗಲಿದ್ದರೆ ಹಾಗೂ ಭೇಟಿಯಾಗಲು ಬರುತ್ತಿದ್ದಾರೆ .
ಇವರು ಯಾರೂ ಇಲ್ಲಿ ತಮ್ಮ ಸಾಧನೆಗಳ ಬಗ್ಯೆ ಹೇಳಿಕೊಳ್ಳಲು ಬರುತ್ತಿಲ್ಲ . ತಮ್ಮ ಸಂಶೋಧನೆಯ ವಿಷಯ ಉಪನ್ಯಾಸವನ್ನು ನೀಡಲು ಬರುತ್ತಿಲ್ಲ . ಪ್ರೊಫೆಷನಲ್ ಮ್ಯಾನೇಜ್‌ಮೆಂಟ್‌ನ ವಿಷಯದ ಭಾಷಣ ನೀಡಲು ಬರುತ್ತಿಲ್ಲ. ಅವರೆಲ್ಲರೂ ಇಲ್ಲಿ ತಮ್ಮ ಹಳೆಯ ಕ್ಲಾಸ್ ಮೆಟ್ಗಳನ್ನು , ರೂಮ್ ಮೆಟ್ ಗಳನ್ನು ,ಕಾಲೇಜ್ ಮೆಟ್ ಗಳನ್ನು ಬಹಳ ವರ್ಷಗಳ ನಂತರ ಭೇಟಿಯಾಗಲು ಬರುತಿದ್ದಾರೆ . ತಮ್ಮ ಹಳೆಯ ಸವಿ ನೆನಪುಗಳನ್ನು , ತಮ್ಮ ಜೀವನದ ಸಿಹಿ ಕಹಿ ಅನುಭವಗಳನ್ನು ಹಂಚಿಕೊಳ್ಳಲು ಬರುತಿದ್ದಾರೆ .

ಇವರೆಲ್ಲರೂ ಮಮತೆಯಿಂದ ಕಾಲೇಜ್ ನ ಆಗಿನ ಅನಿವಾರ್ಯ ಕಷ್ಟಗಳಾದ , ನೀರಿನ ಕೊರತೆ , ಕ್ಲಾಸ್ ರೂಂ ನ ಕೊರತೆ , ವಿಧ್ಯುಚ್ಚಕ್ತಿಯು ಕೊರತೆ , ನುಸಿಗಳ ಹೊಡೆತ ಮುಂತಾದುವುಗಳ ವಿಷಯ ಮೆಲುಕು ಹಾಕಲು ಬರುತಿದ್ದಾರೆ ಕಾಲೇಜ್ ಕ್ಯಾಂಪಸ್ ನಲ್ಲಿ ನಮ್ಮ ಜೂನಿಯರ್ಸ್ ಗಳನ್ನು ಹೇಗೆ ರಾಗ್ ಮಾಡಿದೆವು , ಸುರತ್ಕಲ್ ಬೀಚ್ ನಲ್ಲಿ ಹುಡುಗಿಯರನ್ನು ಹೇಗೆ ಹಿಂಬಾಲಿಸಿದೆವು , ಪ್ರಾಧ್ಯಾಪಕರಿಗೆ ಕ್ಲಾಸ್ ನಲ್ಲಿ ಹೇಗೆ ಪೀಡೆ ಕೊಟ್ಟೆವು ಮುಂತಾದ ವಿಷಯಗಳನ್ನು ನೆನಪಿಸಿಕೊಂಡು ಗಹಗಹಿಸಿ ನಗಲು ಬರುತ್ತಿದ್ದಾರೆ . ತಮ್ಮ ಬಾಳಸಂಗಾತಿಯ ಹಾಗೂ ಸಂಸಾರದ ಪರಿಚಯವನ್ನು ತಮ್ಮ ಹಳೆಯ ಗೆಳೆಯರಿಗೆ ಮಾಡಿಕೊಡಲು ಬರುತಿದ್ದಾರೆ .
ಇವರು ಯಾರೂ ಇಲ್ಲಿ ತಮ್ಮ ಸಾಧನೆಗಳ ಬಗ್ಯೆ ಹೇಳಿಕೊಳ್ಳಲು ಬರುತ್ತಿಲ್ಲ . ತಮ್ಮ ಸಂಶೋಧನೆಯ ವಿಷಯ ಉಪನ್ಯಾಸವನ್ನು ನೀಡಲು ಬರುತ್ತಿಲ್ಲ . ಪ್ರೊಫೆಷನಲ್ ಮ್ಯಾನೇಜ್ಮೆಂಟ್ ನ ವಿಷಯ ಭಾಷಣ ನೀಡಲು ಬರುತ್ತಿಲ್ಲ. ಅವರೆಲ್ಲರೂ ಇಲ್ಲಿ ತಮ್ಮ ಹಳೆಯ ಕ್ಲಾಸ್ ಮೆಟ್ಗಳನ್ನು , ರೂಮ್ ಮೆಟ್ ಗಳನ್ನು ,ಕಾಲೇಜ್ ಮೆಟ್ ಗಳನ್ನು ಬಹಳ ವರ್ಷಗಳ ನಂತರ ಭೇಟಿಯಾಗಲು ಬರುತಿದ್ದಾರೆ . ತಮ್ಮ ಹಳೆಯ ಸವಿ ನೆನಪುಗಳನ್ನು , ತಮ್ಮ ಜೀವನದ ಸಿಹಿ ಕಹಿ ಅನುಭವಗಳನ್ನು ಹಂಚಿಕೊಳ್ಳಲು ಬರುತಿದ್ದಾರೆ .

ಇವರೆಲ್ಲರೂ ಮಮತೆಯಿಂದ ಕಾಲೇಜ್ ನ ಆಗಿನ ಅನಿವಾರ್ಯ ಕಷ್ಟಗಳಾದ , ನೀರಿನ ಕೊರತೆ , ಕ್ಲಾಸ್ ರೂಂ ನ ಕೊರತೆ , ವಿಧ್ಯುಚ್ಚಕ್ತಿಯು ಕೊರತೆ , ನುಸಿಗಳ ಹೊಡೆತ ಮುಂತಾದುವುಗಳ ವಿಷಯ ಮೆಲುಕು ಹಾಕಲು ಬರುತಿದ್ದಾರೆ ಕಾಲೇಜ್ ಕ್ಯಾಂಪಸ್ ನಲ್ಲಿ ನಮ್ಮ ಜೂನಿಯರ್ಸ್ ಗಳನ್ನು ಹೇಗೆ ರಾಗ್ ಮಾಡಿದೆವು , ಸುರತ್ಕಲ್ ಬೀಚ್ ನಲ್ಲಿ ಹುಡುಗಿಯರನ್ನು ಹೇಗೆ ಹಿಂಬಾಲಿಸಿದೆವು , ಪ್ರಾಧ್ಯಾಪಕರಿಗೆ ಕ್ಲಾಸ್ ನಲ್ಲಿ ಹೇಗೆ ಪೀಡೆ ಕೊಟ್ಟೆವು ಮುಂತಾದ ವಿಷಯಗಳನ್ನು ನೆನಪಿಸಿಕೊಂಡು ಗಹಗಹಿಸಿ ನಗಲು ಬರುತ್ತಿದ್ದಾರೆ . ತಮ್ಮ ಬಾಳಸಂಗಾತಿಯ ಹಾಗೂ ಸಂಸಾರದ ಪರಿಚಯವನ್ನು ತಮ್ಮ ಹಳೆಯ ಗೆಳೆಯರಿಗೆ ಮಾಡಿಕೊಡಲು ಬರುತಿದ್ದಾರೆ .

ಈ ಸಂಧರ್ಭವನ್ನು ತಮ್ಮ ಹಳೆಯ ಪ್ರಾದ್ಯಾಪಕರನ್ನು ಭೇಟಿಯಾಗಿ ಅವರಿಗೆ ಗೌರವವನ್ನು ಸಲ್ಲಿಸಲು ಉಪಯೋಗಿಸುತಿದ್ದಾರೆ . ಇನ್ನು ಭವಿಷ್ಯದಲ್ಲಿ ತಮ್ಮ ಕ್ಲಾಸ್ ಮೆಟ್‌ ಗಳನ್ನುಸಂಪರ್ಕದಲ್ಲಿಟ್ಟುಕೊಳ್ಳಲು ಬೇಕಾದ ಮಾಹಿತಿಗಳನ್ನು ಸಂಗ್ರಹಿಸಲು ಬರುತಿದ್ದಾರೆ . ಕಾಲೇಜ್ ನ ಹೊಸ ಹೊಸ ವಿಭಾಗಗಳನ್ನು ಸಂದರ್ಶಿಸಿ ಕಾಲೇಜ್ ನಲ್ಲಿ ಆದ ಐವತ್ತು ವರ್ಷಗಳ ಅಭಿವೃದ್ದಿಯನ್ನು ವಿಮರ್ಶಿಸಲು ಇದೊಂದು ಸದವಕಾಶ.

 

Author : ಯು. ಸಿ. ಆಚಾರ್ .

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited