Untitled Document
Sign Up | Login    
ಅಂಧತ್ವ ತಡೆಗಾಗಿ "ಸುನಧಾ'' ಸಾಂಸ್ಕೃತಿಕ ಕಾರ್ಯಕ್ರಮ

ಸಮರ್ಥನಂ ಅಂಗವಿಕಲರ ಸಂಸ್ಥೆ

ಪ್ರತಿ ವರ್ಷ ಏಪ್ರಿಲ್ ಮೊದಲವಾರ "ಅಂಧತ್ವ ತಡೆ ವಾರ''. ಅಂಧತ್ವ ನಿವಾರಣೆ ಮತ್ತು ವಿಕಲಾಂಗರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಸಮರ್ಥನಂ ಸಂಸ್ಥೆ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಏ.12-14 ರ ತನಕ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಜಾಗೃತಿ ಕಾರ್ಯದ ಕುರಿತ ವಿವರ ಇಲ್ಲಿದೆ.

ನಾವು ನೀವು ಆಡುತ್ತೇವೆ, ಯಾರ ಸಹಾಯವೂ ಇಲ್ಲದೇ ಓಡಾಡುತ್ತೇವೆ, ಹಗಲುಗನಸು ಕಾಣುತ್ತೇವೆ. ಆದರೆ, ದೃಷ್ಟಿ ವಿಕಲಾಂಗರ ಕತ್ತಲ ಜಗತ್ತು ವಿಶಿಷ್ಟ ಮತ್ತು ವೈವಿಧ್ಯಮಯ. ಈ ಜಗತ್ತಿನ ಕಲ್ಪನೆ ಉಳಿದವರಿಗಾರಿಗೂ ಇರದು. ಅವರದು ಕತ್ತಲ ಲೋಕದ ಬದುಕು. ಈ ಹಿನ್ನೆಲೆಯಲ್ಲಿ ಅಂಧತ್ವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಏಪ್ರಿಲ್ ಮೊದಲವಾರವನ್ನು "ಅಂಧತ್ವ ತಡೆ ವಾರ'' ಎಂದ ಆಚರಿಸಲಾಗುತ್ತದೆ.

ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಏ.12ರಂದು ಸಮರ್ಥನಂ ಮತ್ತು ದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಜತೆಯಾಗಿ ವಿಕಲಾಂಗ ಯುವಜನ ಮತ್ತು ಮಕ್ಕಳಿಗಾಗಿ "ಸುನಧಾ'' ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ.
ದ ಐ ಫೌಂಡೇಷನ್ ಸಹಯೋಗದೊಂದಿಗೆ ಏ.13 ಮತ್ತು 14ರಂದು ಎರಡು ದಿನಗಳ ಚುಟುಕು ಕ್ರಿಕೆಟ್ ಪಂದ್ಯವನ್ನು ಆಯೋಜಿಸಿದೆ. ಭಾರತ ಮತ್ತು ಆಸ್ಟ್ರೇಲಿಯ ತಂಡಗಳು ಈ ಸೌಹಾರ್ದ ಪಂದ್ಯದ ಎದುರಾಳಿಗಳು.

ಹೆಚ್ಚಿನ ಮಾಹಿತಿಗೆ : www.samathanam.org / www.theeyefoundation.com /

 

Author : ಆಶಿಶ್ ಸೇನ್

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited