Untitled Document
Sign Up | Login    
ಯೆಣ್ಮಕಜೆ ತರವಾಡಿನಲ್ಲಿ ಸಂಗೀತ ರಸದೌತಣ


ವರ್ಷಕ್ಕೊಮ್ಮೆ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ಹಳ್ಳಿಗೆ ಕರೆಸಿ ಅವರ ಉನ್ನತ ಸಾಧನೆಯ ರಸದೌತಣವನ್ನು ಊರವರಿಗೆ ಉಣಿಸುವ ಕಾಯಕವನ್ನು ಮೌನವಾಗಿ ನಡೆಸುವವರು ಯು .ಎ .ಇ ಎಕ್ಸ್ ಚೇಂಜ್ ಬ್ಯಾಂಕಿನ ಸಿ ಇ ಓ ಆಗಿರುವ ಯೆಣ್ಮಕಜೆ ತರವಾಡು ಮನೆಯ ಸುಧೀರ್ ಕುಮಾರ್ ಶೆಟ್ಟಿ . ಪೂರ್ವ ಸಂಪ್ರದಾಯದಂತೆ ವರ್ಷಾವಧಿ ನಡೆಯುವ ''ಪಿಲಿ ಚಾಮುಂಡಿ ,ರಕ್ತೇಶ್ವರಿ ,ಪರಿವಾರ ದೈವಗಳ ನೇಮೋತ್ಸವ ಖಾಯಂ ಆಗಿ ಮಾರ್ಚ್ ತಿಂಗಳ ಮೊದಲ ದಿನದಿಂದ ಆರಂಭ ವಾಗುತ್ತದೆ .

ಅಂತಾರಾಷ್ಟ್ರೀಯ ಮಟ್ಟದ ವ್ಯಾವಹಾರಿಕ ಸುತ್ತಾಟದಲ್ಲಿ ಭಾರತೀಯ ಕಲಾವಿದರನ್ನುಭೇಟಿಯಾಗುವ ಶೆಟ್ಟರ ಡೈರಿಯಲ್ಲಿ ಅವರ ಹೆಸರು ನಮೂದಾಗುತ್ತದೆ .ಪೆರ್ಲ ಸಮೀಪದ ಯೆಣ್ಮಕಜೆ ತರವಾಡು ನೆಮೊತ್ಸವಕ್ಕೆ ಅವರಿಗೆ ಆಮಂತ್ರಣ ಗ್ಯಾರಂಟಿ .ಕಲಾವಿದರಿಗೋ ಗ್ರಾಮೀಣ ,ಪ್ರಶಾಂತ ,ದೈವಿಕ ವಾತಾವರಣದಲ್ಲಿ ಆಸಕ್ತರ ಮುಂದೆ ಕಲಾ ಪ್ರದರ್ಶನ ನೆಮ್ಮದಿ ನೀಡುತ್ತದೆ . ವಿವಿದ ಕಲೆಗಳ ಗುರಿ ಸಮೂಹವನ್ನು ಧರ್ಮ ಭೀರುವನ್ನಗಿಸುವುದೇ ಆಗಿದೆ ಎಂದು ನಂಬಿದವರು ಸುಧೀರ್ ಕುಮಾರ್ ಶೆಟ್ಟಿ .

ದಿನಾಂಕ 02 -03-2014 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಗೀತರತ್ನ ಎಂಬುದಾಗಿ ಖ್ಯಾತರಾದ ರಾಮಚಂದ್ರ ಮಾಸ್ತರ್ ಕಾನ್ಹ೦ಗಾಡ್ ಅಮೋಘ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು . ಶಿಷ್ಯರಾದಅನಿಲ್ ಕುಮಾರ್ ,ಶಿಷ್ಯೆ ಶ್ರುತಿ ಸಾಥಿ ನೀಡಿದರೆ ,ವಯಲಿಂನಲ್ಲಿ ಅನೂಪ್ ಪಿ ಭಾಸ್ಕರ್ ಪಾಲಕ್ಕಾಡ್ ,ಮೃದಂಗದಲ್ಲಿ ಅಡೂರ್ ಬಾಬು ಕಣ್ಣೂರ್ ,ಘಟಮ್ ನಲ್ಲಿ ರಿಜು ಉನ್ನಿಕೃಷ್ಣನ್ ಪಾಲಕ್ಕಾಡ್ ,ಮೊರ್ಸಿಂಗ್ ನಲ್ಲಿ ತಾಮರಕ್ಕುಡಿ ರಾಜಶೇಖರನ್ ಹಿಮ್ಮೆಳನದಲ್ಲಿ ಸಹಕರಿಸಿದರು .

ರಾಮಚಂದ್ರ ಮಾಸ್ತರ್ ಕಾಞಂಗಾಡ್ ಶ್ರೇಷ್ಟ ಕಲಾವಿದ ಕೆ ಜೆ ಜೇಸುದಾಸ ರೊಂದಿಗೆ ಗುರುವಾಯೂರ್ ನಲ್ಲಿ ಸತತ ಹನ್ನೆರೆಡು ಘಂಟೆಗಳ ಸಂಗೀತ ಕಚೇರಿ ,ಅಧ್ಯಾಪನ ನಡೆಸುತ್ತಿದ್ದ ದುರ್ಗಾ ಹೈಸ್ಕೂಲ್ ನಲ್ಲಿ ಸತತ ಇಪ್ಪತ್ತೈದು ಘಂಟೆಗಳ ಕಚೇರಿ ಗಿನ್ನೆಸ್ಸ್ ಗಾಖಲೆ ನಿರ್ಮಿಸಿದ್ದಾರೆ. ಇವರು ಕೇರಳ ಸರಕಾರದ ವೃತ್ತಿಪರ ರಂಗಭೂಮಿ ಪ್ರಶಸ್ತಿ ಭಾಜನರು. ಸುಮಾರು ಹದಿನೈದು ಸಾವಿರಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳಿದ ಮಾಸ್ತರರು ನೀಡಿದ ಕಛೇರಿಗಳ ಸಂಖ್ಯೆ ಮೂರು ಸಹಸ್ರವನ್ನು ಮೀರಿದೆ ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸ ಬಹುದು

ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆಯೂರು ಸಾನ್ನಿದ್ಯ ವಹಿಸಿ ಕಲಾವಿದರನ್ನು ಹರಸಿದರು . ಅಬುದಾಭಿಯ ವಿ ಟಿ ದಾಮೋದರನ್ ,ಕಾಸರಗೋಡು ಡಿ ವೈ ಎಸ್ಪಿ ರಂಜೀತ್ ಕುಮಾರ್ ,ಪಯ್ಯನ್ನೂರಿನ ಡಾ ವಿ ಸಿ ರಾಮಚಂದ್ರನ್ ಮುಂತಾದವರು ಉಪಸ್ತಿತರಿದ್ದು ಶುಭ ಹಾರೈಸಿದರು . ನೂರಾರು ಮಂದಿ ಆಸಕ್ತರು ಸಂಗೀತದ ಸವಿ ಸವಿದರು

 

Author : ಚಂದ್ರಶೇಖರ್ ಏತಡ್ಕ .

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited