Untitled Document
Sign Up | Login    
ಹಸ್ತಪ್ರತಿ ಅಭಿಯಾನದೊಂದಿಗೆ ಕೈ ಜೋಡಿಸೋಣ ಬನ್ನಿ


ಬೆಂಗಳೂರಿನ  ಬಿ.ಎಂ.ಶ್ರೀ  ಸ್ಮಾರಕ ಪ್ರತಿಷ್ಠಾನದಲ್ಲಿನಲ್ಲಿ  ಹಸ್ತ ಪ್ರತಿ ಕಾರ್ಯಗಾರ ನಡೆಯುತ್ತಿದೆ. ಸೋಮವಾರ 10ನೆಯ ಫೆಬ್ರವರ ಯಂದು “ ಹಸ್ತ ಪ್ರತಿ ಸಂರಕ್ಷಣೆ ಮತ್ತು ಅಧ್ಯಯನ ಅಭಿಯಾನದ ಅಡಿಯಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಸುವ ಒಂದು ವಾರದ ಕಾರ್ಯಾಗಾರದ ಉದ್ಘಾಟನೆಯಾಯಿತು.ಇದರಲ್ಲಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಕಾಲೇಜು, ಮಲ್ಲೇಶ್ವರಂ ಮತ್ತು  ಎಂ ಇ.ಎಸ್‌ ಕಾಲೇಜಿನಲ್ಲಿ ಕನ್ನಡ ಎಂ. ಎ ಓದುತ್ತಿರುವ 25 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ



ಅಭಿಯಾನದ ನಿರ್ದೇಶಕರಾದ ಎಚ್‌. ಶೇಷಗಿರಿರಾವ್‌ ಕಾರ್ಯಾಗಾರವನ್ನು  ಉದ್ಘಾಟಿಸಿದರು. ಹಿರಿಯ ಸಾಹಿತಿಗಳಾದ ಶ್ಸುರೀ ಎಂ ವಿ ಸೀತಾರಾಮಯ್ಯನವರು  ಮೂವತ್ತು ವರ್ಷಗಳ ಹಿಂದೆ ಸಾಹಿತ್ಯ ಮತ್ತು ಸಂಶೋಧನೆಯ ಸಲುವಾಗಿ ತಮ್ಮ ಗುರುಗಳಾದ ಬಿ. ಎಂ.,ಶ್ರೀ ಅವರ ಹೆಸರಿನಲ್ಲಿ ಈ ವಿದ್ವತ್‌ಸಂಸ್ಥೆ ಸ್ಥಾಪಿಸಿದರು. ಇದನ್ನ ರಾಷ್ಟ್ರ ಕವಿ ಕುವೆಂಪು ಅವರು ಉದ್ಘಾಟಿಸಿದರು. ಎಂ.ವಿ. ಸಿಯವರ ಸತತ ಪರಿಶ್ರಮದಿಂದ  1300 ಹಸ್ತಪ್ರತಿಗಳು ಸಂಗ್ರಹವಾದವು.ಏಳು ಲಿಪಿ ಗಳಲ್ಲಿರುವ ವಿವಿಧ ವಿಷಯದ ಹಸ್ತಪ್ರತಿಗಳಿವೆ.


’ಹಸ್ತಪ್ರತಿಗಳು ನಾಡಿನ ಜ್ಞಾನ ಭಂಡಾರ. ಲಕ್ಷಾಂತರ ಹಸ್ತ ಪ್ರತಿಗಳಲ್ಲಿ ಪರಂಪರಾಗತ ಜ್ಞಾನ ಅಡಗಿದೆ ಆದರೆ ಅವು ನಾಶವಾಗುತ್ತಿವೆ. ಪ್ರಾಕೃತಿಕ ವಿಕೋಪ, ನಿರ್ಲಕ್ಷ್ಯ ,ಮೂಢ ನಂಬಿಕೆ ಮತ್ತು  ಅಜ್ಞಾನವೆ ಅದಕ್ಕೆ ಕಾರಣ. ಅವುಗಳನ್ನು ಸಂಗ್ರ ಹಿಸಿ ಸಂರಕ್ಷಿಸಿ ಅವುಗಳಲ್ಲಿನ ಜ್ಞಾನವನ್ನು ಅರಿಯುವುದರಿಂದ ಮನುಕುಲದ ಅಭಿವೃದ್ಧಿ ಸಾಧ್ಯ. ಈಗ ಹಸ್ತಪ್ರತಿಗಳ ಸಂಗ್ರಹಾಲಯದಲ್ಲಿ ಅವುಗಳ ಧೂಳು ವರೆಸಿ ವರ್ಷಕ್ಕೊಮ್ಮೆ  ತೈಲ ಲೇಪನಮಾಡಿ ಇಡುವುದೇ ಮುಖ್ಯ ಕಾರ್ಯವಾಗಿದೆ, ಅಧ್ಜಯನ ಮಾಡುವ   ವಿದ್ವಾಂಸರು ವಿರಳವಾಗುತಿದ್ದಾರೆ. ಅವುಗಳಲ್ಲಿ ಆಸಕ್ತಿ ಇಲ್ಲವಾಗಿದೆ. ಹಸ್ತಪ್ರತಿಗಳನ್ನು ಶಾಶ್ವತವಾಗಿ ಸಂರಕ್ಷಿಸುವ ಉದ್ದೇಶದಿಂದ ಅವುಗಳ ಡಿಜಿಟಲೈಜೇಷನ್‌ ಆಗ ಬೇಕಿದೆ. ಜ್ಞಾನವು ಮುಕ್ತವಾಗಿ ಎಲ್ಲರಿಗೂ ಎಲ್ಲ ಕಡೆ ದೊರೆಯಲು ಆಧುನಿಕ ತಂತ್ರ ಜ್ಞಾನ ಬಳಸಿ ಆನ್‌ಲೈನ್‌ನಲ್ಲಿ ಹಾಕಿದರೆ ಸಂಶೋಧಕರು ಹುಡುಕಿಕೊಂಡು ಹೋಗಿ ಭೂತ ಗನ್ನಡಿ ಹಿಡಿದು ಅಧ್ಯಯನ ಮಾಡುವ  ಬದಲು ಕುಳಿತಲ್ಲಿಯೇ ಅಗತ್ಯ ಮಾಹಿತಿ ಪಡೆಯಬಹುದು. 


ಈ ದಿಶೆಯಲ್ಲಿ  ಜನ ಜಾಗೃತಿ  ಮೂಡಿಸಲು ಮತ್ತು ಜ್ಞಾನದ ಪಂಜನ್ನು ಮುಂದೆ ಸಾಗಿಸಲು ಯುವಜನರನ್ನು ತೊಡಗಿಸಿ ಕೊಳ್ಳುವದರಿಂದ ಮಾತ್ರ ಸಾಧ್ಯ.  ಗಣಕೀಕರಣದ ಕೆಲಸದಲ್ಲಿ ಈಗ ಆನ್‌ಲೈನ್‌ನಲ್ಲಿ ದೇಶ ವಿದೇಶಗಳ ೨೫ ಜನರು ಸಹಕರಿಸುತ್ತಿರುವರು. ಈ ಕೆಲಸದಲ್ಲಿ ಸಮುದಾಯವು ತೊಡಗಿದಾಗ ಮಾತ್ರ ಸಾಧ್ಯ. ವಿದ್ಯಾರ್ಥಿಗಳಿಗೆ ಇದು ಕನ್ಯ ನೆಲ. ಅದರಲ್ಲಿ ತೊಡಗಿಕೊಂಡರೆ ಆಕಾಶವೇ ಮಿತಿ. ಇದು ನಮ್ಮ ಪರಂಪರೆಯನ್ನು ಉಳಿಸಿ  ಕೊಳ್ಳುವ ಕೆಲಸ  ಅದಕ್ಕೆ ಯುವ ಜನರನ್ನು ಸಿದ್ಧ ಮಾಡುವುದೇ ಕಾರ್ಯಾಗಾರದ ಉದ್ದೇಶ ಎಂದು ಹೇಳಿದರು.


ಅತಿಥಿಯಾದ ಡಾ. ಶ್ಯಾಮಲಾ ರತ್ನ ಕುಮಾರಿ ಮಾತನಾಡುತ್ತಾ ಹಸ್ತಪ್ರತಿಗಳ ಸಂರಕ್ಷಣೆಯ ವಿವಿಧ ಹಂತಗಳನ್ನು ವಿವರಿಸಿದರು.ಪ್ರಾಚೀನ ಕಾಲದಲ್ಲಿ ತಾಳೆಗರಿ ಸಿದ್ಧ ಪಡಿಸುತಿದ್ದ ವಿಧಾನ ಮತ್ತು ಕಂಟವನ್ನು ಬಳಸಿ ತಾಳೆಯ ಗರಿಗಳ ಮೇಲೆ ಕೊರೆಯುತಿದ್ದ ಪರಿಯನ್ನು   ತಿಳಿಸಿದರು.ಹಸ್ತಪ್ರತಿಗಳನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದರು.

ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಗಳಾದ ಪ್ರೊ.ಅಬ್ದುಲ್‌ ಬಷೀರ್‌ ಅವರು ಸಂಸ್ಥೆಯಲ್ಲಿ ಹಸ್ತ ಪ್ರತಿ ವಿಭಾಗದಲ್ಲಿ ಇತ್ತೀಚೆಗೆ ಆಗುತ್ತಿರುವ ಪ್ರಗತಿಯನ್ನು ಮೆಚ್ಚುತ್ತಾ, ಹಸ್ತಪ್ರತಿಗಳಲ್ಲಿನ ಕಾವ್ಯಗಳು ಅವುಗಳ ಸಂರಕ್ಷಣೆಗೆ ನೀಡುತಿದ್ದ ಪ್ರಾಮುಖ್ಯತೆಯನ್ನು ತಿಳಿಸಿದರು. ಕಾವ್ಯವು ಕೃಷ್ಣ ಕಥೆ ಎಂದಾಗ ಭಕ್ತಿಯ ಜೊತೆ ಭಯವೂ ಹುಟ್ದಿ ಹೇಗೆ ಹಸ್ತಪ್ರತಿಯ ರಕ್ಷಣೆ ಆಗುತಿತ್ತು ಎಂದ ಉದಾಹರಣೆ ಸಮೇತ ತಿಳಿಸಿದರು.  ವಿದ್ಯಾರ್ಥಿಗಳು ತಮಗೆ ಒದಗಿಸಲಾದ ಅವಕಾಶದ ಸದುಪಯೋಗ ಮಾಡಿಕೊಳ್ಳ ಬೇಕೆಂದು ಕರೆ ನೀಡಿದರು.

ಅಭಿಯಾನದ ಸಕರಿಸುತ್ತಿರುವ ಬಿ. ಎಸ್‌ ಗುರು ಪ್ರಸಾದ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು
ಹಸ್ತ ಪ್ರತಿ ಸಂರಕ್ಷಣೆಗೆ ಕೌಶಲ ಮತ್ತು ಪರಿಶ್ರಮ ಎರಡೂ ಅಗತ್ಯವಾಗಿರುತ್ತವೆ. ಆರಂಭದಲ್ಲಿ ಮಿಶ್ರ ಗರಿಗಳ ಕಟ್ಟಿನಲ್ಲಿರುವ ಗರಿಗಳನ್ನು ಗುರುತಿಸಿ ಬೇರೆ ಬೇರೆ ಮಾಡಿ ಗರಿ ಸಂಖ್ಯೆಯನ್ನು ಗುರುತಿಸಿ ವಿಂಗಡಣೆಮಾಡಬೇಕು .ನಂತರ ಒಣ ಶುದ್ಧೀಕರಣ ಮತ್ತು ಆರ್ಧ್ರ ಶುದ್ಧೀಕರಣ (dry cleaning ,wet cleaning )ಮಾಡಿ ಒಣಗಿಸಿ ನಂತರ ಲೆಮನ್ ಗ್ರಾಸ್ ಆಯಿಲ್ ಹಚ್ಚಿ ಒಣಗಿಸ ಬೇಕು. ತುಳಸಿ ಎಣ್ಣೆ ,ಲೆಮನ್ ಗ್ರಾಸ್ ಎಣ್ಣೆ ಹಾಗೂ ಶುಧ್ಧೀಕೃತ ನೀರಿಗೆ ( ಡಿಸ್ಟಿಲ್ ವಾಟರ್) ಗ್ರ್ಯಾಫೈಟ್ ಹುಡಿಯನ್ನು ಸೇರಿಸಿ ಮಸಿಯ ದ್ರಾವಣವನ್ನು ತಯಾರು ಮಾಡ ಬೇಕು ಗರಿಗಳು ಒಣಗಿದ ನಂತರ ಅವಕ್ಕೆ ಈ ದ್ರಾವಣವನ್ನು ಹಾಕಿ ಮಸಿ ಹಚ್ಚ ಬೇಕು .. ನೆರಳಿನಲ್ಲಿ ಎರಡು ಮೂರೂ ದಿನ ಒಣಗಿಸಿದ ನಂತರ ಗರಿ ಸಂಖ್ಯೆಗೆ ಅನುಗುಣವಾಗಿ ಜೋಡಿಸಿ ಕೃತಿಯ ಹೆಸರು ,ಕರ್ತೃ ವಿನ ಹೆಸರು ,ಲಿಪಿಕಾರಣ ಹೆಸರು ಇದೆಯೇ ಎಂದು ಹುಡುಕಿ ಸೂಚಿಯನ್ನು ತಯಾರು ಮಾಡಬೇಕು ನಂತರ ಸ್ಕ್ಯಾನ್ ಮಾಡಿ ಗಣಕೀಕರಣ ಮಾಡಬೇಕು.

ಇನ್ನು ಆಯಾಯ ಕಾಲದ ಲಿಪಿಯನ್ನು ಅನುಸರಿಸಿ ಅಕ್ಷರಗಳನ್ನು ಓದಿ ಶಬ್ದ ವಾಕ್ಯವನ್ನಾಗಿ ಜೋಡಿಸಿ ಪಾಠವನ್ನು ಸಿದ್ಧ ಮಾಡಬೇಕು ಇತರ ಪಾಠಗಳು ಲಭ್ಯವಾದರೆ ಅದನ್ನು ಇದರೊಂದಿಗೆ ತಾಳೆ ಮಾಡಿ ಶುದ್ಧ ಪಾಠಡ ನಿರ್ಣಯ ಮಾಡ ಬೇಕು. ಈ ನಡುವೆ ಅನೇಕ ಅಕ್ಷರಗಳು ,ಶಬ್ದಗಳು ವಾಕ್ಯಗಳು ತುಂಡಾಗಿ ಹುಳು ಹಿಡಿದು ನಷ್ಟವಾಗಿರುತ್ತವೆ ಅವನ್ನೆಲ್ಲ (ಅದನ್ನು ಊಹೆ ಎಂದು ಅಲ್ಲಿಯೇ ಉಲ್ಲೇಖಿಸಿ) ಊಹೆಯ ಮೂಲಕ ತುಂಬುವ ಕಾರ್ಯ ಮಾಡಬೇಕು .ಹೀಗೆ ಇನ್ನು ಅನೇಕ ಹಂತಗಳು ಇದರಲ್ಲಿ ಅಡಕವಾಗಿವೆ .ಇವನ್ನೆಲ್ಲ ಒಬ್ಬೊಬ್ಬರಿಗೆ ಮಾಡುವುದು ಅಸಾಧ್ಯ .ಇದಕ್ಕೆ ಸಾಂಘಿಕ ಯತ್ನ ಅತ್ಯಗತ್ಯ. ಈ ನಿಟ್ಟಿನಲ್ಲಿ ಹಸ್ತ ಪ್ರತಿ ಸಂರಕ್ಷಣಾ ಅಭಿಯಾನ ಪ್ರಾರಂಭಗೊಂಡಿದೆ.

ಕನ್ನಡ ಪ್ರಾಧ್ಯಾಪಕರಾದ ಡಾ. ಲಕ್ಷ್ಮಿಪ್ರಸಾದರಿಗೆ ಅಪರೂಪದ ಕೃತಿ ಕೈಗೆ ಬಂದಿತ್ತು !ಮೈಸೂರೊಡೆಯ ಚಿಕ್ಕದೇವರಾಯ ವಿರಚಿತ ಮಹಾಭಾರತ ಅದಾಗಿತ್ತು.ಅದನ್ನು ಕೂಲಂಕುಷವಾಗಿ ಅಧ್ಯಯನ ಮಾಡ ಬೇಕಿದೆ.  ಅವರು ಮೊದಲೇ ಸಂಶೋಧಕಿ. ಈಗಾಗಲೇಒಂದು ಪಿ. ಎಚ್‌ಡಿ ಪಡೆದು ಇನ್ನೊಂದು ಸಂಪ್ರಬಂಧವನ್ನು ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿರುವರು.ಅವರಿಗೆ ಮತ್ತೊಂದು ಸಂಶೋಧನೆಗೆ ಯೋಗ್ಯವಾದ ವಿಷಯ ದೊರೆತಂತಾಯಿತು.ಇದು ಪ್ರಕಟಿತ ಕೃತಿಯೋ ಅಪ್ರಕಟಿತ ಕೃತಿಯೋ ಎಂಬ ಜಿಜ್ಞಾಸೆ ಎದ್ದಿತುಆಬಗ್ಗೆ ನಂತರ ವಿವರವಾದ ಮಾಹಿತಿ ಪಡೆಯಲು ಆಕೃತಿಯನ್ನ ಎತ್ತಿ ಇಡಲಾಯಿತು.



ಕೆಲವರ ಅನಿಸಿಕೆಯಂತೆ ಸಂಗ್ರಹದಲ್ಲಿನ ಬಹುತೇಕ ಹಸ್ತಪ್ರತಿಗಳು ಈಗಾಲೇ ಪ್ರಕಟವಾಗಿರ ಬಹುದು ಆದರೆ ಚಿನ್ನದ ಗಣಿಯಲ್ಲಿ ಟನ್‌ಗಟ್ಟಲೇ ಮಣ್ನೂ ಕಲ್ಲು ಅಗೆದು ಪುಡಿಮಾಡಿದರೆ ಒಂದೋ ಎರಡೋ ಗ್ರಾಂ ಚಿನ್ನ ಸಿಕ್ಕರೂ ಸಾಕು ಶ್ರ ಮ ಸಾರ್ಥಕ. ಹಸ್ತಪ್ರತಿ ಅಭಿಯಾನವೂ ಅದೇ ತರಹದ್ದು. ನಮ್ಮ ಶ್ರಮ ಅನೇಕ ರೀತಿಯಲ್ಲಿ ಫಲ ಕೊಡಲಾರಂಬಿಸಿತು ಪತ್ರಿಕೆಯಲ್ಲಿನ ಸುದ್ಧಿ ಓದಿ ಯಾರೋ ಎರಡು ಹಸ್ತಪ್ರತಿಗಳನ್ನು ತಂದುಕೊಟ್ಟಿದ್ದಾರೆ ಹೊಸದುರ್ಗದ ತಿಪ್ಪೆಸ್ವಾಮಿ  ಎಂಬ  ಮಧ್ಯವಯಸ್ಕರು. ಜೀವನದಲ್ಲಿ ಸ್ಥಿರತೆ ಕಂಡು ಕೊಂಡಿರುವರು.  ತಾವೂ ಈ ಕೆಲಸದಲ್ಲಿ ಭಾಗಿಯಾಗಲು ಬಂದಿದ್ದಾರೆ.  ವಿದ್ಯಾರ್ಥಿಗಳಲ್ಲಿ ಕಾಂಪ್ಯೂಟರ್‌ ಮತ್ತು ಇಂಟರ್‌ನೆಟ್‌ ಸೌಲಭ್ಯ  ಇರುವ ಎಂಟುಮಂದಿ ತಾವೂ ಆನ್‌ಲೈನ್‌ ಕೆಲಸದಲ್ಲಿ ಸಹಕರಿಸಲು ಬಯಸಿದ್ದಾರೆ. ಅವರಿಗೆ ಕಾರ್ಯಾಗಾರದ ನಂತರ ಎರಡು ದಿನದ ವಿಶೇಷ ತರಬೇತಿನೀಡಿ ನಮ್ಮ ಗುಂಪಿಗೆ ಸೇರಿಸಿ ಕೊಳ್ಳುವ ವ ಆಶ್ವಾಸನೆ ನೀಡಲಾಯಿತು.

ಮುಂದೆಯೂ ಆಸಕ್ತರಿಗೆ ಈ ಬಗ್ಗೆ ಕಾರ್ಯಗಾರ ಮಾಡುವ ಯೋಜನೆ ಇದೆ.

 

Author : Laxmi prasad .

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited