Untitled Document
Sign Up | Login    
ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಸಂದೇಶ: ಉತ್ತಮ ಆರೋಗ್ಯಕ್ಕಾಗಿ ಆಹಾರ ಸುಭದ್ರತೆ


ಪ್ರತಿ ವರ್ಷದಂತೆ ಈ ಭಾರೀಯು ರಾಜ್ಯಾದ್ಯಂತ ಸೆ.1ರಿಂದ 7ರವರೆಗೆ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಪ್ರತಿಯೊಂದು ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಉಪಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮೀಣ ಪ್ರದೇಶದ ಎಲ್ಲಾ ಜನತೆಗೂ ಅದರಲ್ಲೂ ವಿಶೇಷವಾಗಿ ಗರ್ಭಿಣಿ ಭಾಣಂತಿಯರ ಹದಿಹರೆಯದವರ ಹೆಣ್ಣು ಮಕ್ಕಳಿಗೆ, ಪೌಷ್ಠಿಕ ಆಹಾರ ಕುರಿತು ಸಮಗ್ರ ಮಾಹಿತಿಯನ್ನು ತಲುಪಿಸಲಾಗುತ್ತಿದೆ.

ಈ ಬಗ್ಗೆ ಗುಂಪು ಸಭೆಗಳು ತಾಯಂದಿರ ಸಭೆಗಳನ್ನು ನಡೆಸಿ ತಾಯಿ ಹಾಲಿನ ಮಹತ್ವ, 6ತಿಂಗಳ ನಂತರ ತಾಯಿ ಹಾಲಿನ ಜೊತೆ ಪೂರಕ ಆಹಾರ ಕೊಡುವದು, 2 ವರ್ಷದವರೆಗೆ ಮಕ್ಕಳಿಗೆ ತಾಯಿ ಹಾಲು ಉಣಿಸುವದು, ಅಪೌಷ್ಠಿಕತೆಯನ್ನು ತಡೆಗಟ್ಟುವದು.

ಸ್ಥಳಿಯ ಆಹಾರ ಪದಾರ್ಥಗಳ ಉಪಯುಕ್ತತೆ ಮಳಕೆ ಕಾಳು, ಕಾಲಕಾಲಕ್ಕೆ ದೊರೆಯುವ ಹಣ್ಣು-ಹಂಪಲಗಳು, ತರಕಾರಿ, ತಪ್ಪಲು ಪಲ್ಲೆ ಇವುಗಳ ಮಹತ್ವದ ಪ್ರಾಮುಖ್ಯತೆಯ ಬಗ್ಗೆ ಜನಸಾಮಾನ್ಯರಿಗೆ ಉತ್ತಮ ಆರೋಗ್ಯಕ್ಕಾಗಿ ಆಹಾರ ಸುಭದ್ರತೆ ಸಂದೇಶವನ್ನು ತಲುಪಿಸಲಾಗುತ್ತದೆ.

ಪೌಷ್ಠಿಕ ಆಹಾರ : ಪೌಷ್ಠಿಕ ಆಹಾರ ಎಂದರೆ ನಮ್ಮ ದೇಹದ ಆರೋಗ್ಯ ಕಾಪಾಡುವ ಸಮತೋಲನ ಆಹಾರ, ಅದರರ್ಥ ಆಹಾರದ ಎಲ್ಲಾ ಘಟಕಗಳಿಂದ ತಯಾರಿಸಿದ ಆಹಾರ. ಪೌಷ್ಠಿಕ ಆಹಾರದಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಮಾನಸಿಕ ಬೆಳವಣಿಗೆ, ದೈಹಿಕ ಶಕ್ತಿ ನೀಡುತ್ತದೆ. ಮಕ್ಕಳಲ್ಲಿ ಕಲಿಕೆಗೆ ಸಹಾಯವಾಗುತ್ತದೆ. ಕಷ್ಠದ ಕೆಲಸ ನಿರ್ವಹಿಸಲು ಆರೋಗ್ಯವಂತರಾಗಿರಲು ಮನುಷ್ಯನಿಗೆ ಒಳ್ಳೇಯ ಆಹಾರ ಅವಶ್ಯಕ. ದೇಹಕ್ಕೆ ಅವಶ್ಯವಾಗಿರುವ ಸಾಕಷ್ಟು ಆಹಾರವನ್ನು ಸೇವಿಸದಿದ್ದರೆ ಅನೇಕ ಸಾಮಾನ್ಯ ಕಾಯಿಲೆಗಳು ಬರುತ್ತವೆ. ಸಾಧ್ಯವಾಗಬಹುದಾದ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸುವದು ಒಳ್ಳೆಯದು ಏಕೆಂದರೆ ವಿವಿಧ ರೀತಿಯ ಆಹಾರಗಳು ಅನೇಕ ರೀತಿಯ ಪೌಷ್ಠಿಕಾಂಶವನ್ನು ಒದಗಿಸುತ್ತವೆ.
ಒಬ್ಬ ಮನುಷ್ಯ ದುರ್ಬಲನಾಗಿ ಅಥವಾ ಕಾಯಿಲೆಯಿಂದ ಇರಲು ಕಾರಣ ಸರಿಯಾದ ಅಥವಾ ಸಾಕಷ್ಟು ಆಹಾರ ಸೇವಿಸದೇ ಇರುವದು ಮತ್ತು ಇಂಥವರನ್ನು ಪೌಷ್ಟಿಕಾಂಶಗಳ ಕೊರತೆ ಇರುವವರು ಅಥವಾ ಅಪೌಷ್ಠಿಕತೆಯಿಂದ ಇರುವವರು ಎನ್ನುತ್ತಾರೆ.
1) ಅಸಮರ್ಪಕವಾದ ಆಹಾರ ಸೇವಿಸುವದರಿಂದ ಸಾಮಾನ್ಯವಾಗಿ ಬೆಳೆಯಲು ಅಥವಾ ತೂಕ ಹೆಚ್ಚಿಸಿಕೊಳ್ಳಲು ವಿಫಲವಾಗುವದು.
2) ನಡೆಯುವದರಿಲ್ಲಿ, ಮಾತನಾಡುವದರಲ್ಲಿ, ಯೋಚನೆಯಲ್ಲಿ ನಿಧಾನ
3) ಹೊಟ್ಟೆ ಊದುವದು ಕೈಕಾಲು ಸಣ್ಣದಾಗುವದು ಜೂಲು ಮುಖ ಶಕ್ತಿ ಇಲ್ಲದಿರುವಿಕೆ
4) ಪಾದಗಳಲ್ಲಿ ಮುಖ ಮತ್ತು ಕೈಕಾಲುಗಳಲ್ಲಿ ಬಾವು ಕೆಲವೊಮ್ಮೆ ಹುಣ್ಣ ಅಥವಾ ಚರ್ಮದ ಮೇಲೆ ಗುರ್ತುಗಳು
5) ಕೂದಲು ಕಡಿಮೆ ಅಥವಾ ಇಲ್ಲದಿರುವದು ಬಣ್ಣವಿಲ್ಲದಿರುವದು, ಹೊಳಪಿಲ್ಲದಿರುವದು
6) ಕಣ್ಣುಗಳ ಶುಷ್ಕತೆ ಕುರುಡುತನ
7) ನಿಶ್ಯಕ್ತಿ ಅಥವಾ ಬಳಲುವಿಕೆ
8) ಹಸಿವಿಲ್ಲದಿರುವು
9) ರಕ್ತಹೀನತೆ
1೦) ಬಾಯಿಯ ಎರಡು ತುದಿಗಳಲ್ಲಿ ಹುಣ್ಣು
11) ನೂವು ಅಥವಾ ಹುಣ್ಣು ಇರುವ ನಾಲಿಗೆ
12) ಪಾದಗಳಲ್ಲಿ ಉರಿ ಅಥವಾ ಜೂಮ ಹಿಡಿಯುವದು
ಈ ಕೆಳಗಿನ ತೊಂದರೆಗಳಿಗೆ ಬೇರೆ ಕಾರಣಗಳಿದ್ದರೂ ಸಹ ಸರಿಯಾಗಿ ಆಹಾರ ಸೇವಿಸದಿದ್ದರೆ ಇವುಗಳು ಆಗಾಗ್ಗೆ ಬರುವದು ಅಥವಾ ಇನ್ನೂ ಉಲ್ಬಣಿಸಬಹುದು.

1) ಭೇದಿ
2) ಕಿವಿಯಲ್ಲಿ ಗುಯ್‌ಗುಡುವ ಶಬ್ದ
3) ತಲೆನೂವು
4) ದವಡೆಗಳಲ್ಲಿ ರಕ್ತಸ್ರಾವ ಅಥವಾ ಕೆಂಪು ಬಣ್ಣ
5) ಮೂಗಿನಲ್ಲಿ ರಕ್ತ ಸ್ರಾವ
6) ಹೊಟ್ಟೆಯ ತೊಂದರೆ
7) ಒಣಗಿದ ಮತ್ತು ಸೀಳಿದ ಚರ್ಮ
8) ಚಿಕ್ಕ ಮಕ್ಕಳಲ್ಲಿ ಧನುರ್ವಾಯು ಅಥವಾ ಮೂರ್ಛೆ ರೋಗ
9) ಹೆಚ್ಚಿನ ಹೃದಯದ ಬಡಿತ
1೦) ಆಘಾತ ವಿವಿಧ ನರಗಳ ಮತ್ತು ಮಾನಸಿಕ ಸಮಸ್ಯೆಗಳು
11) ಎಕೃತ್ ಕಾಮಾಲೆ
12) ಪದೇ ಪದೇ ಸೋಂಕುಗಳು
ಗರ್ಭಿಣಿ ಇದ್ದಾಗ ಅಸಮರ್ಪಕ ಆಹಾರ ಸೇವಿಸಿದರೆ ಆಕೆಗೆ ನಿಶ್ಯಕ್ತಿ ಮತ್ತು ರಕ್ತಹೀನತೆ ಉಂಟಾಗುತ್ತದೆ. ಮತ್ತು ಮಗು ಜನಿಸುವಾಗ ಮತ್ತು ನಂತರ ಸಾಯುವ ಸಂಭವ ಹೆಚ್ಚಾಗುತ್ತದೆ. ಇದರಿಂದ ಗರ್ಭಪಾತ ಅಥವಾ ಮಗು ಸತ್ತು ಹುಟ್ಟುವಬಹುದು. ಸಮರ್ಪಕವಾದ ಆಹಾರ ಸೇವಿಸುವದರಿಂದ ಕಾಯಿಲೆಗಳ ವಿರುದ್ಧ ಪ್ರತಿರೋಧಿಸಲು ನೆರವಾಗುತ್ತದೆ. ಸರಿಯಾದ ಆಹಾರ ಸೇವಿಸದೇ ಇರುವದು ಆರೋಗ್ಯ ಸಮಸ್ಯಗಳಿಗೆ ನೇರವಾದ ಕಾರಣ ಇದಲ್ಲದೆ ನ್ಯೂನ್ಯ ಆಹಾರ ಪೋಷಣೆ ದೇಹವನ್ನು ಎಲ್ಲಾ ವಿಧವಾದ ಕಾಯಿಲೆಗಳ ವಿರುದ್ಧ ಅದರಲ್ಲೂ ಸೋಂಕುಗಳ ವಿರುದ್ಧ ಪ್ರತಿರೋಧಿಸಿದಂತೆ ದುರ್ಬಲಗೊಳಿಸುತ್ತದೆ.

1) ನ್ಯೂನ್ಯ ಆಹಾರ ಪೋಷಣೆಯ ಮಕ್ಕಳು ಉತ್ತಮ ಆಹಾರ ಪೋಷಣೆ ಪಡೆದ ಮಕ್ಕಳಿಗಿಂತ ಹೆಚ್ಚು ಪಾಲು ತೀವ್ರ ರೀತಿ ಭೇಧಿಗೆ ತುತ್ತಾಗುವ ಸಂಭವ ಹೆಚ್ಚು.
2) ಸಮರ್ಪಕ ಪೌಷ್ಠಿಕ ಆಹಾರ ಸೇವಿಸದ ಮಕ್ಕಳಿಗೆ ದಡಾರ ತುಂಬಾ ಅಪಾಯಕಾರಿ
3) ಅಸಮರ್ಪಕ ಪೌಷ್ಠಿಕ ಆಹಾರ ಸೇವಿಸುವ ಮಕ್ಕಳಲ್ಲಿ ಕ್ಷಯರೋಗ ಸರ್ವಸಾಮನ್ಯ ಮತ್ತು ಇವರಲ್ಲಿ ಅತೀ ಶೀಘ್ರವಾಗಿ ಕಾಯಿಲೆ ಉಲ್ಬಣಿಸುತ್ತದೆ. ಅತೀ ಹೆಚ್ಚು ಮಧ್ಯಪಾನ ಸೇವಿಸುವವರಿಗೆ ಯಕೃತಗೆ ಹಾನಿಯಾಗುವ ಸಿರೋಸಿಸ್ ಬರುತ್ತದೆ. ಮತ್ತು ಇದು ಸಮರ್ಪಕ ಪೌಷ್ಠಿಕ ಆಹಾರ ಸೇವಿಸದವರಲ್ಲಿ ಸರ್ವೇಸಾಮಾನ್ಯ ಮತ್ತು ಹೆಚ್ಚು ಉಲ್ಬಣಿಸುತ್ತದೆ.
4) ಸೀತ ಮುಂತಾದ ಸಾಮನ್ಯ ಸಮಸ್ಯೆಗಳು ಕೂಡಾ ನ್ಯೂನ್ಯ ಆಹಾರ ಪೋಷಣೆಯವರಿಗೆ ಆಗಾಗ್ಗೆ ಹೆಚ್ಚು ಕಂಡು ಬರುತ್ತದೆ. ಮತ್ತು ಬಹುದಿನಗಳವರೆಗೆ ಇರುತ್ತದೆ.
ಸಮರ್ಪಕ ಆಹಾರ ಸೇವನೆಯು ಕಾಯಿಲೆಯವರು ಗುಣಮುಖರಾಗಲು ನೆರವಾಗುತ್ತದೆ. ಉತ್ತಮ ಪೌಷ್ಠಿಕ ಆಹಾರ ಸೇವನೆ ಕಾಯಿಲೆಗಳನ್ನು ಬರಲು ತಡೆಗಟ್ಟಲು ಮಾತ್ರವಲ್ಲ ಕಾಯಿಲೆಗಳ ವಿರುದ್ಧ ಹೋರಾಡಿ ದೇಹವನ್ನು ಆರೋಗ್ಯವಾಗಿಡಲು ಸಹ ನೆರವಾಗುತ್ತದೆ. ಆದುದರಿಂದ ಕಾಯಿಲೆಯಾಗಿರುವ ವ್ಯಕ್ತಿಗೆ ಸಮರ್ಪಕ ಪೌಷ್ಠಿಕ ಆಹಾರ ಬಹಳ ಮುಖ್ಯ. ಸಮರ್ಪಕವಾಗಿ ತಿನ್ನುವದು ಮತ್ತು ಸ್ವಚ್ಛತೆ ಕಾಪಾಡುವದು ಒಳ್ಳೆಯ ಆರೋಗ್ಯಕ್ಕೆ ಅತ್ಯುತ್ತಮ ಮಾರ್ಗ ಇದಲ್ಲದೇ ನಿಶಕ್ತಿ ಹಾಗೂ ಅನಾರೋಗ್ಯದಿಂದ ಕಾಪಾಡುತ್ತದೆ.
Prevention is better than cure ಕಾರಣ ಈ ಕೆಳಕಂಡ ಗುಂಪಿನ ಕನಿಷ್ಠ ಒಂದೊಂದು ಆಹಾರ ಪದಾರ್ಥವನ್ನು ಸೇವಿಸಬೇಕು.
1) ಅನ್ನ ಅಥವಾ ಗೋದಿ ಚಪಾತಿ ಅಥವಾ ರಾಗಿ ರೊಟ್ಟಿ, ಮುದ್ದೆ.
2) ಬೇಯಿಸಿದ ತರಕಾರಿ ಕೆಲವು ಹಸಿ ತರಕಾರಿಗಳು.
3) ಕಾಳಿನಿಂದ, ತರಕಾರಿಯಿಂದ ಮಾಡಿದ ಸಾಂಬರ್, ಉಸುಳಿ.
4) ಹಾಲು ಅಥವಾ ಮೊಸರು ಮಜ್ಜಿಗೆ
5) ಅಗತ್ಯ ಪ್ರಮಾಣದಲ್ಲಿ ತುಪ್ಪ, ಬೆಣ್ಣಿ, ಎಣ್ಣೆ.
6) ಹಣ್ಣುಗಳು.
7) ಮಾಂಸಾಹಾರಿಗಳಲ್ಲಿ ಮಾಂಸ, ಮೀನು ಅಥವಾ ಮೊಟ್ಟೆ
ಸಮತೋಲನ ಆಹಾರ ಆರೋಗ್ಯಕರ ಆದರೆ ಯಾವುದೆ ಒಂದೇ ಆಹಾರ ಪದಾರ್ಥವನ್ನು ಮಿತಿಮೀರಿ ತಿಂದರೆ ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ. ಮನುಷ್ಯ ಸಸ್ಯಾಹಾರಿ ಕಾರಣ ಮಾಂಸಾಹಾರ ಒಳ್ಳೇಯದಲ್ಲ ಎಂದು ಹಲವು ಜನರು (ವೈದ್ಯರನ್ನು ಸೇರಿ) ಹೇಳುತ್ತಾರೆ. ಇದು ಸತ್ಯದಿಂದ ದೂರ ಹಾಗೂ ಧಾರ್ಮಿಕ ಅಭಿಪ್ರಾಯದಿಂದ ಪ್ರಭಾವಿತವಾದ ನಂಬಿಕೆ.
ಕೇವಲ ಯಾವ ಪೌಷ್ಠಿಕ ಆಹಾರ ಎಂಬುದು ಮುಖ್ಯವಲ್ಲ ಆಹಾರದ ಪೌಷ್ಠಿಕಾಂಶ ದೇಹಕ್ಕೆ ದೊರಕಲು ಸೇವನೆ ವಿಧಾನವೂ ಸರಿಯಾಗಿ ಇರಬೇಕು. ಶುಚಿಯಾಗಿ, ನಿಧಾನವಾಗಿ ಅಗಿದು, ಮಿತವಾಗಿ ಸೇವನೆ ಮಾಡಬೇಕು. ಎಲ್ಲ ಆಹಾರ ಘಟಕಗಳನ್ನೊಳಗೊಂಡಿರಬೇಕು. ಆಹಾರ ತಿನ್ನಲು ರುಚಿಯಾಗಿರಬೇಕು.
ಪೌಷ್ಠಿಕಾಂಶ ಹಾಗೂ ದೇಹಕ್ಕೆ ಅದರಿಂದ ಆಗುವ ಉಪಯೋಗ ಮತ್ತುಕೊರತೆಯಿಂದಾಗುವ ಪರಿಣಾಮ:
ಪಿಷ್ಟ ಮತ್ತು ಸಕ್ಕರೆ- ಶಕ್ತಿ ನೀಡುತ್ತದೆ. ಅಗತ್ಯಕ್ಕಿಂದ ಹೆಚ್ಚು ಸೇವಿಸಿದರೆ ಕೆಲವರಲ್ಲಿ ಕೊಬ್ಬಾಗಿ ಶೇಕರಣೆಯಾಗುತ್ತದೆ. ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಅಕ್ಕಿ, ಗೋಧಿ, ಬೆಲ್ಲ, ಸಕ್ಕರೆ, ಆಲೂಗಡ್ಡೆ, ಮೆಕ್ಕೆ ಜೋಳ, ನೆವಣಿ, ಶಾವಿಗೆ, ಗೆಣಸು, ಗೆಣಸಿನ ಹಿಟ್ಟು, ಬಾಳಿಕಾಯಿ, ಜೇನುತುಪ, ಕಾಕಂಬಿ.
ಪಿಷ್ಟ ಮತ್ತು ಸಕ್ಕರೆ ಕೊರತೆಯಿಂದ ಕಡಿಮೆ ತೂಕ, ಮಕ್ಕಳಲ್ಲಿ ಕಂಡು ಬರುವ ಮರಾಸ್ಮಸ್ ಕಾಯಿಲೆ ನಿರಂತ ನಿಶಕ್ತಿಕಂಡುಬರುತ್ತದೆ.

ಕೊಬ್ಬು- ಇದು ಪಿಷ್ಟ ಮತ್ತು ಸಕ್ಕರೆಗಿಂತ 2 ಪಟ್ಟು ಹೆಚ್ಚು ಶಕ್ತಿ ನೀಡುತ್ತದೆ. ದೇಹದ ಅಂಗಾಂಗ ರಚನೆಗೆ ಅಗತ್ಯ ಇವುಗಳಲ್ಲಿ ಮೋನೋಅನ್ ಸ್ಯಾಚ್ಯೂರೇಟೆಡ್, ಪಾಲಿ ಅನ್ ಸ್ಯಾಚ್ಯೂರೇಟೆಡ್, ಸ್ಯಾಚ್ಯೂರೇಟೆಡ್ ಪ್ಯಾಲಿ ಅಸಿಡ್, ಟ್ಯ್ರಾನ್ಸ್‌ಪ್ಯಾಟ್, ಟ್ರೈಗ್ಲಿಸರೈಡ್ಸ್ ಮುಖ್ಯವಾದವು ಇವೆ. ಇವುಗಳಲ್ಲಿ ಕೆಲವು ಅಪಾಯಕರ ಉದಾ: ಟ್ರಾನ್ಸ್‌ಫ್ಯಾಟ್, ಸ್ಯಾಚುರೇಟೆಡ್ ಫ್ಯಾಟ್.

ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಎಣ್ಣೆ, ಬೆಣ್ಣೆ, ತುಪ್ಪ, ಕಡಲೆಕಾಯಿ, ಎಳ್ಳು, ಸೂಯಾಅವರೆ, ತೆಂಗಿನಕಾಯಿ, ಹಾಲು. ಇದರ ಕೊರತೆಯಿಂದಾಗುವ ಪರಿಣಾಮ- ಕಡಿಮೆ ತೂಕ

ಪ್ರೋಟಿನ್- ದೇಹದ ಬೆಳವಣಿಗೆ ಹಾಗೂ ಜೀವಕೋಶಗಳ ತಯಾರಿಕೆಗೆ.
ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಬೇಳೆಕಾಳುಗಳು, ಎಣ್ಣೆಕಾಳುಗಳು ಎಲ್ಲ ದ್ವಿದಳ ಧಾನ್ಯಗಳು ಮಾಂಸ, ಮೊಟ್ಟೆ, ಮೀನು.
ಇದರ ಕೊರತೆಯಿಂದ- ಬೆಳವಣಿಗೆ ಕುಂಠಿವಾಗುತ್ತದೆ. ಮಕ್ಕಳಿಗೆ ಕ್ವಾಶಿಯಾರ್ಕರ ಆಗುತ್ತದೆ.

ಖನಿಜಗಳು-ಮೂಳೆಗಳ ಹಾಗೂ ಹಲ್ಲುಗಳ ಬೆಳವಣಿಗೆಗೆ, ನರಗಳು ಕಾರ್ಯ ನಿರ್ವಹಿಸಲು ಹೃದಯದ ಆರೋಗ್ಯ
ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ರಾಗಿ, ಸೊಪ್ಪು, ಹಾಲು
ಖನಿಜದ ಕೊರತೆಯಿಂದ- ಮೂಳೆಗಳ ಮೆದುತ್ವ ರೋಗ ಬರುತ್ತದೆ.

ಕಬ್ಬಿಣ- ಕೆಂಪು ರಕ್ತ ಕಣದಲ್ಲಿನ ಹೆಮೋಗ್ಲೋಬಿನ್ ವೃದ್ಧಿಗೆ
ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಹಸಿರು ಸೊಪ್ಪು, ನುಗ್ಗೆ ಸೊಪ್ಪು ಪಾಲಕ ಮೆಂತೆ ಸೊಪ್ಪು, ಸಬ್ಬಸಗಿ ಸೊಪ್ಪು ಮುಂತಾದ ಹಸಿರು ಸೊಪ್ಪು. ಕಡಲೆ ಬೀಜ ಮೊಳಕೆಯೊಡದ ಕಾಳು, ಹುರಳಿಕಾಳು, ಅಲಸಂದಿ ಕಾಳು, ಮೆಂತೆ ರಾಗಿ, ಬೆಲ್ಲ ಹಸಿರು ತರಕಾರಿಗಳು ಕರ್ಜುರ, ಉತ್ತತ್ತಿ ಒಣ ಹಣ್ಣುಗಳು ಮೊಟ್ಟೆ, ಮಾಂಸ, ಲಿವರ್ ಮುಂತಾದವು
ಕಬ್ಬಿಣದ ಕೊರತೆಯಿಂದ- ರಕ್ತ ಹೀನತೆ, ನಿಶಕ್ತಿ, ಅತಿಯಾದ ಆಯಾಸ ಏದುಸಿರು ಅತಿಯಾದ ಹೃದಯ ಬಡಿತ ಕಡಿಮೆ ತೂಕದ ಮಕ್ಕಳು ಹುಟ್ಟುವಿಕೆ. ಪದೇ ಪದೇ ಗರ್ಭಪಾತ.

ಅಯೋಡಿನ್- ಥೈರಾಯ್ಡ್ ಎಂಬ ಗ್ರಂಥಿಯು ಸ್ರವಿಸುವ ಹಾರ್ಮೋನುಗಳನ್ನು ತಯಾರಿಸಲು ದೇಹದ ಬೆಳವಣಿಗೆಗೆ ಅಗತ್ಯ ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಅಯೋಡೈಜಡ್, ಉಪ್ಪು, ಮೀನು, ಸಮುದ್ರದ ಕಡೆ ಅಯೋಡಿನ್ ಅಂಶವಿರುವ ನೆಲದಲ್ಲಿ ಬೆಳೆದ ಆಹಾರ ಪದಾರ್ಥ
ಇದರ ಕೊರತೆಯಿಂದ-ಕ್ರೇಟಿನಿಸಂ-ಮಕ್ಕಳಲ್ಲಿ ಬುದ್ಧಮಾಂದ್ಯತೆ, ಗಳಗಂಡ ಬರುತ್ತದೆ.
ದೇಹಕ್ಕೆ ಬೇಕಾಗುವ ಇತರೇ ಖನಿಜಗಳು್:
ಸೆಲೀನಿಯಂ, ಕಾಪರ್, ಪಾಸ್ಪರಸ್, ಮೊಲೆಬ್ಡಿಗನಂ, ಮ್ಯಾಗ್ನಿಶಿಯಂ, ಮ್ಯಾಂಗನೀಸ್, ಕ್ರೋಮಿಯಂ, ಇವುಗಳು ಬಹಳ ಕಡಿಮೆ ದೇಹಕ್ಕೆ ಅಗತ್ಯವಾಗುತ್ತವೆ. ಇವುಗಳ ಕೊರತೆಯಿಂದ ರೋಗಗಲೂ ಅತಿ ವಿರಳ.
ದೇಹಕ್ಕೆ ಬೇಕಾಗುವ ಲವಣಗಳು:
ಸೋಡಿಯಂ, ಪೋಟ್ಯಾಶಿಯಂ ಕ್ಲೋರೈಡ್, ಬೈಕಾರ್ಬೋನೇಟ್ ಮುಂತಾದವುಗಳು ಲವಣಗಳು, ಇವುಗಳ ಕೊರತೆಯಿಂದ ಅನೇಕ ರೋಗಗಳ ತೊಂದರೆ ಉಂಟಾಗುತ್ತದೆ.

ವಿಟಮಿನ್‌ಗಳು (ಜೀವಸತ್ವ):
ಪೌಷ್ಠಿಕಾಂಶ ದೇಹಕ್ಕೆ ಅದರಿಂದ ಆಗುವ ಉಪಯೋಗ ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು ಕೊರತೆಯಿಂದಾಗುವ ಪರಿಣಾಮ
ಥಯಾಮಿನ್ (ಬಿ 1) - ದೇಹಕ್ಕೆ ದೈಹಿಕ ಶಕ್ತಿ ನೀಡುತ್ತದೆ. ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಧಾನ್ಯ, ಬೇಳೆ ಕಾಳುಗಳು ಕೊರತೆಯಿಂದ-ನಿಶ್ಯಕ್ತಿ ಉಂಟಾಗುತ್ತದೆ
ರೈಬೋಪ್ಲೇವಿನ್- ಬಿ2 ಪೈರಿಡಾಕ್ಸಿನ್ ಬಿ 6 -ದೈಹಿಕ ಶಕ್ತಿ ದೈಹಿಕ ಶಕ್ತಿ ನೀಡುತ್ತದೆ. ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಹಾಲು, ಸೊಪ್ಪು, ತರಕಾರಿ ಇದರ ಕೊರತೆಯಿಂದ- ಬಾಯಿಹುಣ್ಣು ಮಾನಸಿಕ ಸಮಸ್ಯೆ ಉಂಟಾಗುತ್ತದೆ
ನಯಾಸಿನ್ (ನಿಕೋಟಿನ್ ಆಮ್ಲ)- ನಿಶ್ಯಕ್ತಿಯೆಂಬುದು ಒಂದು ಸಾಮಾನ್ಯ ತೊಂದರೆ, ಅದು ರೋಗವಲ್ಲ. ಈ ತೊಂದರೆಗೆ ವಿಟಮಿನ್ ಕೊರತೆಯಿಲ್ಲದೇ ದದೈಹಿಕ, ಮಾನಸಿಕ ಸಮಸ್ಯೆಗಳೂ ಕಾರಣ. ಕೇವಲ ವಿಟಮಿನ್ ಕೊಡುವುದರಿಂದ ಈ ಸಮಸ್ಯೆ ಪರಿಹಾರವಾಗದಿರಬಹುದು. ಬಿ-1, ರೈಬೋಪ್ಲೇವಿನ್, ನಯಾಸಿನ್‌ನಿಂದ ಮಾನಸಿಕ ಸಮಸ್ಯೆ, ತೀರ್ಮಾನ ಮಾಡಲು ಸಾಧ್ಯವಿಲ್ಲದಿರುವುದು, ಮುಂತಾದ ಮಾನಸಿಕ ರೋಗಗಳನ್ನು ತಡೆಯಬಹುದು. ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಬೇಳೆಕಾಳುಗಳು, ಕಡಲೇಕಾಯಿ. ಇದರ ಕೊರತೆಯಿಂದ-ಮಾನಸಿಕ ಸಮಸ್ಯೆ ಚರ್ಮರೋಗ (ಪೆಲೆಗ್ರಾ) ಬರಬಹುದು.
ಸಿ ಜೀವಸತ್ವ- ಜೀವಕೋಶಗಳ ಬೆಳವಣಿಗೆಗೆ, ಕರುಳಿನಲ್ಲಿ ಕಬ್ಬಿಣಹೀರಲು ಸಹಾಯ. ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಹಣ್ಣುಗಳು, ನಿಂಬೆ, ಕಿತ್ತಳೆ, ನೆಲ್ಲಿಕಾಯಿ, ಸೊಪ್ಪು, ತರಕಾರಿ ಕೊರತೆಯಿಂದ-ವಸಡಿನಿಂದ ರಕ್ತಸ್ರಾವ, ರಕ್ತಹೀನತೆ ಉಂಟಾಗಲಿದೆ.
ಪೋಲಿಕ್ ಆಮ್ಲ ಜೀವಕೋಶದ ಆರೋಗ್ಯಕ್ಕೆ ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ತರಕಾರಿ ಇದರ ಕೊರತೆಯಿಂದ ಮಗಲೋಬ್ಲಾಸ್ಮಿಕ್ ಅನೀಮಿಯಾ.

ವಿಟಮಿನ್ ಬಿ 12 -ಜೀವಕೋಶದ ಆರೋಗ್ಯಕ್ಕೆ ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಪ್ರಾಣಿ ಜನ್ಯ ಪದಾರ್ಥಗಳಲ್ಲಿ ಇದರಕೊರತೆಯಿಂದ-ಮೆಗಲೋಬ್ಲಾಸ್ಮಿಕ್ ಅನೀಮಿಯಾ .
ಎ ಜೀವಸತ್ವ- ದೃಷ್ಠದೋಷ, ಕುರುಡು, ಚರ್ಮದ ಆರೋಗ್ಯ ಮಕ್ಕಳ ಬೆಳವಣಿಗೆ. ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಹಳದಿ ಹಣ್ಣುಗಳು ಪಪ್ಪಾಯಿ, ಕಿತ್ತಳೆ, ಸೊಪ್ಪು, ಹಾಲು, ಮೀನು, ಲಿವರ್. ಇದರ ಕೊರತೆಯಿಂದ-ಕುರುಡುತನ ಚರ್ಮದ ಸಮಸ್ಯೆ
ಡಿ ಜೀವಸತ್ವ- ಕರುಳಿನಲ್ಲಿ ಕ್ಯಾಲ್ಸಿಯಂ ಹೀರುವಿಕೆಗೆ ಸಹಾಯ. ವಿಟಮಿನ್ ಇ, ನಯಾಸಿನ್, ಪ್ಯಾಂಟೋಥಿನಿಕ್ ಅಸಿಡ್, ಬಯಾಟಿನ್‌ಗಳು ದೇಹದ ವಿವಿಧ ರಾಸಾಯನ ಕಾರ್ಯಗಳಿಗೆ ಅಗತ್ಯ ಆದರೆ ಇವುಗಳ ಕೊರತೆ ಕಂಡುಬರುವುದು ವಿರಳ, ಅಂದ ಮೇಲೆ ಇವುಗಳನ್ನು ಔಷಧಿ ರೂಪದಲ್ಲಿ ಉಪಯೋಗಿಸುವ ಅಗತ್ಯತೆ ಇಲ್ಲ. ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಪ್ರಾನಿಜನ್ಮ ಪದಾರ್ಥ ಎಣ್ಣೆ ಸೂರ್ಯನ ಕಿರಣಗಳು, ಚರ್ಮದ ಕೆಳಗಿನ ಕೊಬ್ಬನ್ನು ವಿಟಮಿನ್ ಡಿಯಾಗಿ ಪರಿವರ್ತಿಸುತ್ತದೆ. ಇದರ ಕೊರತೆಯಿಂದ-ಮೂಳೆಯ ಮೆದುತ್ವ ರೋಗ
ನಾರು- ದೊಡ್ಡ ಕರುಳಿನಲ್ಲಿ ನೀರು ಹೀರಿ ಮಲದ ಗಾತ್ರ ಹೆಚ್ಚಿಸುತ್ತದೆ. ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಸೊಪ್ಪು, ತರಕಾರಿ, ಕಾಳುಗಳು, ಧಾನ್ಯಗಳು ಇದರ ಕೊರತೆಯಿಂದ-ಮಲಬದ್ಧತೆ ಉಂಟಾಗುತ್ತದೆ.
ನೀರು- ಜೀವಕೋಶಗಳ ಆರೋಗ್ಯಕ್ಕೆ ಅಗತ್ಯ ನೀರ ರಕ್ತದ ಗಾತ್ರವನ್ನು ಕಾಪಾಡುತ್ತದೆ. ಇಲ್ಲದಿದ್ದರೆ ಅಘಾತ (Shock
) ಆಗುತ್ತದೆ. ಇದು ಪೌಷ್ಟಿಕಾಂಶವಲ್ಲದಿದ್ದರೂ, ದೇಹಕ್ಕೆ ಅತ್ಯಗತ್ಯ. ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳು- ಹಣ್ಣಿನರಸ ಇದರ ಕೊರತೆಯಿಂದ- ನಿರ್ಜಲತೆ ಉಂಟಾಗಲಿದೆ.

 

Author : ಚಂದ್ರಲೇಖಾ ರಾಕೇಶ್

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited