Untitled Document
Sign Up | Login    
ಬೇಸಿಗೆಯಲ್ಲಿ ಕಾಡುವ ಸಾಮಾನ್ಯ ಸಮಸ್ಯೆ ಬೆವರು ಸಾಲೆ

ಬೇಸಿಗೆಯಲ್ಲಿ ಕಾಡುವ ಸಾಮಾನ್ಯ ಸಮಸ್ಯೆ ಬೆವರು ಸಾಲೆ

ಬೇಸಿಗೆ ಪ್ರಾರಂಭವಾಗಿದೆ. ನೆತ್ತಿಯ ಮೇಲೆಯೇ ಸುಡುವ ಸೂರ್ಯ, ಬಿಸಿಲಿನ ಧಗೆ, ಶಕೆಯಿಂದ ಮೈ ಬೆವರುತ್ತದೆ.. ಇಂಥ ಸಂದರ್ಭದಲ್ಲಿ ಕಾಡುವ ಅತೀ ಸಾಮಾನ್ಯ ತೊಂದರೆಯೇ ಬೆವರು ಸಾಲೆ. ಸಾಮಾನ್ಯವಾಗಿ ಹೆಚ್ಚು ಬೆವರುವ ಪ್ರದೇಶದಲ್ಲಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ಬೆವರು ಸಾಲೆ ಅತ್ಯಂತ ಕಿರಿ ಕಿರಿ ನೀಡುವ ಗುಳ್ಳೆ. ಚರ್ಮದ ಮೇಲೆ ಕಾಣಿಸಿಕೊಂಡ ಪ್ರಾರಂಭದಲ್ಲಿ ನವೆಯ ಅನುಭವಾದರೂ, ಅದು ಉಲ್ಬಣವಾದರೆ ಚುಚ್ಚಿದ ಅನುಭವವಾಗಿ ತಾಳ್ಮೆಗೆಡಿಸುತ್ತದೆ. ಉರಿ ಕೂಡ ಕಾಣಿಸಿಕೊಳ್ಳುತ್ತದೆ.

ಚರ್ಮದ ರಂಧ್ರಗಳು ಯಾವಾಗಲೂ ತೆರೆದಿದ್ದು, ಜೀವಕೋಶಗಳ ಕಶ್ಮಲಗಳನ್ನು ಬೆವರಿನ ರೂಪದಲ್ಲಿ ಚರ್ಮ ವಿಸರ್ಜಿಸುತ್ತದೆ. ಆದರೆ ವಾತಾವರಣದಲ್ಲಿಯ ಧಗೆಯ ಕಾರಣದಿಂದ ದೇಹ ಅತಿ ಹೆಚ್ಚು ಬೆವರನ್ನು ಹೊರಚೆಲ್ಲುತ್ತದೆ. ಆದರೆ, ಬೆವರಿನೊಂದಿಗೆ ಬರುವ ಎಣ್ಣೆಯಂಶ ಅಥವಾ ಬ್ಯಾಕ್ಟೇರಿಯಾ ಚರ್ಮದ ರಂಧ್ರಗಳಿಂದ ಸರಾಗವಾಗಿ ಕಶ್ಮಲಗಳು ಹೊರಬಾರದಂತೆ ತಡೆಒಡ್ಡುತ್ತವೆ. ಬ್ಯಾಕ್ಟೇರಿಯಾಗಳು ಚರ್ಮದ ರಂಧ್ರಗಳ ಮೇಲೇಯೇ ಕುಳಿತು ಚರ್ಮಕ್ಕೆ ಹಾನಿಯುಂಟು ಮಾಡುತ್ತವೆ. ಇದೇ ಕಾರಣಕ್ಕೇ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಅಸಹನೀಯ ಕಿರಿಕಿರಿ ನೀಡುವ ಬೆವರು ಸಾಲೆ..
ಕೆಂಪು ಬಣ್ಣದ ಚಿಕ್ಕ ಚಿಕ್ಕ ಗುಳ್ಳೆಗಳು ಒತ್ತೊತ್ತಾಗಿ ಹುಟ್ಟುವುದರಿಂದ ಅಸಹನೀಯ ಕಿರಿಕಿರಿ ಉಂಟುಮಾಡುತ್ತವೆ. ಹೀಗಾಗಿ ಬೆವರು ಗುಳ್ಳೆಗಳ ಲಕ್ಷಣಗಳೇನಾದರೂ ಕಂಡುಬಂದಲ್ಲಿ ಅಥವಾ ಪ್ರತಿವರ್ಷವೂ ಬೇಸಿಗೆಯಲ್ಲಿ ಬೆವರುಸಾಲೆಯ ಸಮಸ್ಯೆಯನ್ನು ಅನುಭವಿಸುವವರು ಮುಂಜಾಗೃತಾ ಕೃಮಗಳನ್ನು ಕೈಗೊಳ್ಳುವುದು ಉತ್ತಮ.

ಬೆವರುಗುಳ್ಳೆಗಳು ಚರ್ಮದ ಮೇಲೆ ಕಾಣಿಸಿಕೊಂಡಾಗ ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕು. ಸ್ಪಾಂಜ್‌ ಅಥವಾ ಅತೀ ಮೃದುವಾದ ಬ್ರಷ್‌ ಬಳಸಿ ಚರ್ಮವನ್ನು ಸ್ವಚ್ಛಗೊಳಿಸಿ. ಸ್ನಾನಕ್ಕೆ ಉಗುರುಬೆಚ್ಚಗಿನ ನೀರು ಉತ್ತಮ. ಅತೀ ತಣ್ಣಗಿನ ನೀರಿನಿಂದ ಸ್ನಾನ ಮಾಡದಿರಿ. ದಿನಕ್ಕೆರಡು ಬಾರಿ ಸ್ನಾನ ಮಾಡುವುದರಿಂದ ಚರ್ಮದ ರಂಧ್ರಗಳಲ್ಲಿ ಕುಳಿತಿರುವ ಬ್ಯಾಕ್ಟೇರಿಯಾಗಳನ್ನು ಸ್ವಚ್ಛಗೊಳಿಸಿದಂತಾಗುತ್ತದೆ. ಎಣ್ಣೆಯಂಶಹೊಂದಿರುವ ಬೆವರಿನಿಂದ ಮೈಯೆಲ್ಲಾ ಜಿಡ್ಡು ಜಿಡ್ಡಾಗಿರುವ ಅನುಭವವಾದಾಗ ಸ್ನಾನ ಮಾಡುವುದು ಉತ್ತಮ.

ಬೆವರು ಸಾಲೆ ಉಂಟಾಗಿರುವ ಜಾಗಕ್ಕೆ ಕ್ಲೆನ್ಸರ್ ಬಳಸಿ ಸ್ವಚ್ಛಗೊಳಿಸಿ. ಕ್ಲೆನ್ಸರ್ ನಿಂದ ಸ್ವಚ್ಛಗೊಳಿಸುವುದರಿಂದ ಉರಿ ಮತ್ತು ನವೆ ಕಡಿಮೆಯಾಗುತ್ತದೆ.
ಸ್ವಚ್ಛವಾದ ತೊಳೆದ ಬಟ್ಟೆಗಳನ್ನೇ ಧರಿಸಿ. ಧೂಳು ಕುಳಿತಿರುವ ಅಥವಾ ಬೆವರು ತಾಗಿ ಒಣಗಿದ್ದ ಬಟ್ಟೆಗಳನ್ನು ಬಳಸುವುದರಿಂದ ಮತ್ತೆ ಚರ್ಮಕ್ಕೆ ಬ್ಯಾಕ್ಟೇರಿಯಾಗಳು ದಾಳಿ ಇಡುವ ಸಂಭವವಿರುತ್ತದೆ. ಹತ್ತಿಯ ಬಟ್ಟೆ ಅತೀ ಉತ್ತಮ.

ಬೇಸಿಗೆಯಲ್ಲಿ ಬಿಗಿಯಾದ ಬಟ್ಟೆಗಳನ್ನು ಧರಿಸದಿರಿ. ಚರ್ಮಕ್ಕೆ ಒತ್ತುವ ಬಟ್ಟೆಗಳನ್ನು ಧರಿಸುವುದರಿಂಧ ಚರ್ಮದ ರಂಧ್ರಗಳಿಗೆ ಹಾನಿಯಾಗುತ್ತದೆ. ಸಡಿಲವಾದ ಹತ್ತಿ ಬಟ್ಟೆ ಬೇಸಿಗೆಯಲ್ಲಿ ಉತ್ತಮ.

ಬೆವರು ಸಾಲೆ ಕುತ್ತಿಗೆಯ ಮೇಲೆ ಕಾಣಿಸಿಕೊಳ್ಳುವುದು ಜಾಸ್ತಿ. ಕೂದಲನ್ನು ಹರಡಿಕೊಂಡಿರುವುದಕ್ಕೆ ಬಿಡಬೇಡಿ. ಕತ್ತು, ಕುತ್ತಿಗೆಯ ಭಾಗಕ್ಕೆ ಕೂದಲು ತಾಗದಂತೆ ನೋಡಿಕೊಳ್ಳಿ.

ಮುಖದ ಮೇಲೇಳುವ ಮೊಡವೆಗಳ ನಿಯಂತ್ರಣಕ್ಕಾಗಿ ಬಳಸುವ ಕ್ರೀಂನ್ನೂ ಕೂಡ ಬೆವರು ಸಾಲೆಯ ನಿಯಂತ್ರಣಕ್ಕೆ ಬಳಸಬಹುದು. ಮೊಡವೆ ನಿಯಂತ್ರಣಕ್ಕೆ ಬಳಸುವ ಕ್ರೀಂ ಚರ್ಮದ ಮೇಲೆದ್ದ ಬೆವರು ಗುಳ್ಳೆಗಳನ್ನು ಒಣಗಿಸುವುದಲ್ಲದೆ, ಸಿಪ್ಪೆ ಸುಲಿದು ಹೋಗಿ ವಾಸಿ ಯಾಗುತ್ತದೆ. ಸತ್ತ ಚರ್ಮಗಳು ಹೊರ ಹೋಗಿ, ಬ್ಯಾಕ್ಟೇರಿಯಾಗಳು ಸಾಯುತ್ತವೆ.
ಬೆವರು ಸಾಲೆ ಉಪಶಮನಕ್ಕಾಗಿಯೇ ಇರುವ ಪೌಡರ್ ಗಳನ್ನು ಬಳಸಬಹುದು. ಆದರೆ, ಮೈಮೇಲೆದ್ದ ಗುಳ್ಳೆಗಳು ಅಸಹನೀಯ ಎಂದೆನಿಸಿದರೆ ಚರ್ಮ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಿರಿ.

ಈ ಸಮಸ್ಯೆಯ ಉಪಶಮನಕ್ಕಿರುವ ಒಂದೇ ಒಂದು ದಾರಿ ಅಂದರೆ ಸ್ವಚ್ಛವಾಗಿರುವುದು, ಚರ್ಮವನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಂಡರೆ, ಬೆವರು ಸಾಲೆಯಿಂದ ದೂರವಿರಬಹುದು

 

Author : ಅಮೃತಾ ಹೆಗಡೆ

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited