Untitled Document
Sign Up | Login    
ಉತ್ತಮ ಆರೋಗ್ಯಕ್ಕೆ ಸಮತೋಲನ ಆಹಾರ ಅಗತ್ಯ

ಸಮತೋಲನ ಆಹಾರ ಪದಾರ್ಥಗಳು.

ಶರೀರಕ್ಕೆ ಪೋಷಕಾಂಶಗಳು ನಿರಂತವಾಗಿ ಬೇಕಾಗುತ್ತವೆ. ಆರೋಗ್ಯದ ನಿರ್ವಹಣೆಗೆ ಈ ಪೋಷಕಾಂಶಗಳು ಬಳಕೆಯಾಗುತ್ತದೆ. ದೈಹಿಕ ನಿರ್ವಹಣೆ ಸರಿಯಾಗಿ ಆಗಬೇಕೆಂದರೆ, ಪೋಷಕಾಂಶಗಳನ್ನು ಪ್ರತಿದಿನ ಸರಿಯಾಗಿ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಒದಗಿಸಬೇಕು. ಆದ್ದರಿಂದ ದಿನನಿತ್ಯ ಸಮಾತೋಲನ ಆಹಾರದ ಸೇವನೆ ಅತ್ಯಗತ್ಯ.

ದೇಹದ ಬೆಳವಣೆಗೆ, ನಿರ್ವಹಣೆ ಮತ್ತು ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಸಾಕಷ್ಟು ಅಥವಾ ಸರಿಯಾದ ಪ್ರಮಾಣದಲ್ಲಿ ಹೊಂದಿರುವಂತಹ ಆಹಾರವೇ ಸಮತೋಲನ ಆಹಾರ.

ದೈಹಿಕ ಆರೋಗ್ಯ, ದಿನ ನಿತ್ಯದ ಚಟುವಟಿಕೆಗಳು, ಜೀವನಶೈಲಿ ಹಾಗೂ ತೂಕಕ್ಕೆ ಅನುಗುಣವಾಗಿ ದೇಹಪ್ರಕೃತಿಗೆ ಹೊಂದುವಂತಹ ಆಹಾರ ಯೋಜನೆಯಿಂದ ಸುದೃಢ ಆರೋಗ್ಯ ಹೊಂದಲು ಸಾಧ್ಯ. ಕೀಟನಾಶಕಗಳನ್ನು, ರಾಸಾಯನಿಕ ಗೊಬ್ಬರಗಳನ್ನು ಹಾಕಿ ಬೆಳೆಸಿರದ ಸಾವಯವ ತರಕಾರಿಗಳ ಬಳಕೆ ಆರೋಗ್ಯಕ್ಕೆ ಉತ್ತಮ.
ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿದ್ದಲ್ಲಿ ಅವರು ಸುಲಭವಾಗಿ ಮಾರಕ ರೋಗಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಇವರಿಗೆ ಸಮತೋಲನ ಆಹಾರದ ಅವಶ್ಯಕತೆ ಹೆಚ್ಚು.

ಗರ್ಭಿಣಿ ಮತ್ತು ಬಾಣಂತಿಯರು ತಮ್ಮ ಆಹಾರದಲ್ಲಿ ಧಾನ್ಯ, ಬೇಳೆಕಾಳುಗಳು, ಹಸಿರುಸೊಪ್ಪು ತರಕಾರಿ, ಜಂಬೀರ ಜಾತಿಯ ಹಣ್ಣುಗಳು, ಹಾಲು ಮತ್ತು ಹಾಲಿನ ಪದಾರ್ಥಗಳನ್ನು ಹೆಚ್ಚಾಗಿ ಉಪಯೋಗಿಸುವುದು ಅತ್ಯಗತ್ಯ. ಚಿಕ್ಕಮಕ್ಕಳಲ್ಲಿ ಬೆಳವಣಿಗೆ ಶೀಘ್ರವಾಗಿರುವುದರಿಂದ ಮಕ್ಕಳಿಗೆ ಬೇಕಾದ ಸಸಾರಜನಕವು ಹೆಚ್ಚು ಇರುವ ದ್ವಿದಳಧಾನ್ಯಗಳು ಅದರ ಆಹಾರದಲ್ಲಿ ಹೆಚ್ಚು ಪ್ರಮಾಣದಲ್ಲಿ ಸೇರಿಸಬೇಕು.

ಪೌಷ್ಟಿಕ ಆಹಾರಗಳ ಬಗ್ಗೆ ತಿಳಿದುಕೊಂಡು ಸ್ಥಳೀಯವಾಗಿ ದೊರೆಯುವ ಪದಾರ್ಥಗಳನ್ನು ಜಾಣ್ಮೆಯಿಂದ ಉಪಯೋಗಿಸಿದಾಗ ಉತ್ತಮ ಆಹಾರವನ್ನು ಪಡೆಯಲು ಅನುಕೂಲವಾಗುವುದಲ್ಲದೆ. ಇರುವ ಆದಾಯದಲ್ಲೇ ಸಮತೋಲನ ಆಹಾರವನ್ನು ಪಡೆಯಲು ಅನುವು ಮಾಡಿಕೊಳ್ಳಬಹುದು.
ಆರೋಗ್ಯವಂತ ಆಹಾರಗಳಾದ ವಿವಿಧ ರೀತಿಯ ಇಡೀ ಧಾನ್ಯಗಳನ್ನು ಮೊಳಕೆ ಬರಿಸಿ ಸೇವಿಸುವುದು, ಸೊಪ್ಪು ಮತ್ತು ನಾರಿನ ಪದಾರ್ಥವಿರುವ ತರಕಾರಿಗಳು, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪ್ರತಿದಿನ ಸೇವಿಸುವುದು ಅವಶ್ಯಕ. ರಾಗಿಮುದ್ದೆ, ಮಜ್ಜಿಗೆ, ಚಪಾತಿ ಮತ್ತಿತರ ವಿವಿಧ ಕೊಬ್ಬಿಲ್ಲದ ಪದಾರ್ಥಗಳನ್ನು ಮಿತವಾಗಿ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಡಿಕೊಳ್ಳಬಹುದಾಗಿದೆ.

ಪಿಷ್ಟ ಆಧಾರಿತ ಆಹಾರಗಳಾದ ಅನ್ನ, ಪಾಸ್ತಾ, ಯಥೇಚ್ಛ ಹಣ್ಣು ಹಾಗೂ ತರಕಾರಿಗಳು ಇದರ ಜೊತೆಗೆ ಪ್ರೋಟಿನ್ ಸಮೃದ್ಧ ಆಹಾರಗಳಾದ ಮಾಂಸ, ಮೀನು, ಅವರೇಕಾಳು, ಸಾಕಷ್ಟು ಹಾಲು ಈ ಎಲ್ಲಾ ಆಹಾರಗಳು ಅಗತ್ಯವಿರುರುವ ಪೋಷಕಾಂಶಗಳನ್ನು ಒದಗಿಸುವತ್ತದೆ.

ಹೆಚ್ಚಿನ ವಯಸ್ಕರು ಅಧಿಕ ದೇಹತೂಕ ಅಥವಾ ಬೊಜ್ಜಿನವರಾಗಿರುತ್ತಾರೆ. ಅಗ್ಯತ್ಯಕ್ಕಿಂತ ಹೆಚ್ಚು ತಿನ್ನುವುದರಿಂದಲೂ ಬೊಜ್ಜಿನ ಸಮಸ್ಯೆ ಬರಬಹುದು. ಅಧಿಕ ಕ್ಯಾಲೋರಿಯುಕ್ತ ಆಹಾರ ಹಾಗೂ ಪಾನೀಯಗಳ ಬಳಕೆಯನ್ನು ಕಡಿಮೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
ಪ್ರಮುಖ ಅಂಶಗಳು

* ಮುಖ್ಯವಾಗಿ ದೇಹಕ್ಕೆ ಬೇಕಾದ ಪ್ರಮುಖ ಅಂಶವಾದ ಪ್ರೋಟಿನ್ ಶೇ.15-20ರಷ್ಟು ಆಹಾರದಲ್ಲಿರಬೇಕು.

* ಶೇ.20-30 ಕೊಬ್ಬಿನ ಅಂಶ ಇದ್ದು, ದೈನಂದಿನ ಕೆಲಸಗಳಿಗೆ ಅನುವಾಗುವಂತೆ ಶಕ್ತಿ ಒಳಗೊಂಡಿರಬೇಕು.

* ಕಾರ್ಬೋಹೈಡ್ರೆಟ್, ಶರ್ಕರ, ಪಿಷ್ಟ, ನಾರಿನಾಂಶ, ಸೂಕ್ಷ್ಮ ಪೌಷ್ಟಿಕ ಅಂಶಗಳನ್ನು ಪೂರೈಸಬೇಕು. ಸಂಸ್ಕರಿತ ಕಾರ್ಬೋಹೈಡ್ರೆಟ್ ಅಂಶ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು.

* ಅತೀ ಕೊಬ್ಬನ್ನು ಒಳಗೊಂಡಿರಬಾರದು.

* ಉಪ್ಪಿನ ಅಂಶ ಪ್ರತಿದನ 5ಗ್ರಾಂ ಗಳಷ್ಟೇ ಇರಬೇಕು. ಆದರೆ ಭಾರತೀಯರು 20 ಗ್ರಾಂ ಗಳಿಗಿಂತ ಹೆಚ್ವಿಗೆ ಸೇವಿಸುತ್ತಾರೆ!

* ಜಂಕ್ ಪುಡ್‌ಗಳಾದ ಕೋಲಾ, ಪಾನಿಪುರಿ, ಅತೀ ಸಂಸ್ಕರಿತ ಆಹಾರಗಳು, ಅತೀ ಬೇಯಿಸಿದ ಆಹಾರ, ಶಕ್ತಿ ಕೊಡದ ಆಹಾರ ಸೇವನೆ ಬೇಡ.

* ಆಹಾರವು ಆಯಾ ಕಾಲ, ಪ್ರದೇಶ, ಸಮಯ, ವಯಸ್ಸು... ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿರಬೇಕು.

* ಗರ್ಭವಸ್ಥೆ, ಹಾಲೂಡಿಸುವ ತಾಯಂದಿರು, ದೈಹಿಕ ಕಸರತ್ತುಮಾಡುವವರು, ಅತಿ ಶ್ರಮದಾಯಕ ಕೇಲಸ ಮಾಡುವವರಿಗೆ ಹೆಚ್ಚು ಶಕ್ತಿ ಭರಿತ ಆಹಾರ ಅಗತ್ಯ.

ಸಮತೋಲನ ಆಹಾರ ಏಕೆ ಬೇಕು ?

* ಮುಖ್ಯವಾಗಿ ಎಲ್ಲಾ ವಯೋಮಾನದವರೂ ಅವರ ವಯಸ್ಸು, ಆರೋಗ್ಯ ಸ್ಧಿತಿಗೆ ಅನುಗುಣವಾಗಿ ನಿಗದತ ಅಂಶವುಳ್ಳ ಆಹಾರ ಸೇವಿಸಿದಾಗ ಮಾತ್ರ ಉತ್ತಮ ದೈಹಿಕ ಆರೋಗ್ಯ ಪಡೆಯಲು ಸಾಧ್ಯ

* ಸಾಮಾನ್ಯ ಆರೋಗ್ಯ ಸ್ಧಿತಿಗಾಗಿ

* ದೈಹಿಕ, ಮಾನಸಿಕ ಆರೋಗ್ಯ, ಬಲವರ್ಧನೆ, ಬೆಳವಣಗೆಗಾಗಿ

* ರೋಗ ನಿರೋಧಕ ಶಕ್ತಿ ಹೆಚ್ಚಿಸಲು

 

Author : ಸೀಮಾ ಎಸ್ ಭಟ್ 

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited