Untitled Document
Sign Up | Login    
ದೈಹಿಕ-ಮಾನಸಿಕ ಆರೋಗ್ಯದ ಕೊಂಡಿಯಾಯಿತು ಅಗರಬತ್ತಿ


ಇತ್ತೀಚೆಗೆ ಮೀಟ್ ದ ಪೀಪಲ್ ಎಂಬ ಅಧ್ಯಯನ ಭೇಟಿ ವಿಷಯದ ಆಧಾರದ ಮೇಲೆ ಎಂ.ಸಿ.ಜೆ.ವಿದ್ಯಾರ್ಥಿಗಳಾದ ನಾವೆಲ್ಲ ಕೊಕ್ಕಡದಲ್ಲಿರುವ ಎಂಡೋಸಲ್ಪಾನ್ ಪೀಡಿತರ ಪಾಲನಾ ಕೇಂದ್ರಕ್ಕೆ ಪರಶುರಾಮ ಕಾಮತ್‌ರ ನೇತೃತ್ವದಲ್ಲಿ ಹೋಗುವುದೆಂದು ನಿರ್ಧರಿಸಿದಾಗ ಸಾಕ್ಷ್ಯಚಿತ್ರ ಮಾಡಲು ಹೊರಟ ನಮ್ಮದೇ ಸ್ನೇಹಿತರಾದ ಕಾರ್ತಿಕ್, ಜೀವೇಂದ್ರ ಶೆಟ್ಟಿ ನಮಗೆ ಎಂಡೋಸಲ್ಪಾನ್ ನವರ ಬಗ್ಗೆ ಮಾಹಿತಿ ನೀಡಿದರು.

ಈ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ನಾವು ಕೊಕ್ಕಡದಲ್ಲಿರುವ ಎಂಡೋಸಲ್ಪಾನ್ ಪಾಲನಾ ಕೇಂದ್ರಕ್ಕೆ ಭೇಟಿಕೊಟ್ಟಾಗ ರಾಜ್ಯದ ಅತೀದೊಡ್ಡ ದುರಂತ ಕಣ್ಣ ಮುಂದೆ ತನ್ನಪುಟ ತೆರೆಯಿತು. ಆದರೆ ಅಲ್ಲಿ ಕೆಲವು ವಿಕಲಾಂಗರ ಕೈಯಲಿದ್ದ ಅಗರಬತ್ತಿಗಳು ಮಾತ್ರ ತಮ್ಮ ಸುವಾಸನೆಯ ಬೀರಿ ಮನಸ್ಸನ್ನು ಉಲ್ಲಸಿತಗೊಳಿಸುತ್ತಿತ್ತು.

ಈ ಕೇಂದ್ರದಲ್ಲಿದ್ದ ಎಂಡೋಸಲ್ಪಾನ್ ಪೀಡಿತರ ದೈಹಿಕ ಹಾಗೂ ಮಾನಸಿಕ ಸ್ವಾಸ್ಥಕ್ಕೆ ಫಿಸಿಯೋಥೆರಪಿಗಳು ಇದ್ದರೂ, ಅವರ ಸದಾ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಚಲನಾಶೀಲತೆಯ ಕೊಂಡಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿಯ ಸಿರಿ ಉತ್ಪನ್ನಗಳಲ್ಲಿ ಒಂದಾದ ಅಗರಬತ್ತಿಯ ಪ್ಯಾಕಿಂಗ್ ಕೆಲಸಮಾಡುತ್ತಿದೆ. ಇದರಿಂದ ಇವರುಗಳು ಒಂದೇ ಕಡೆ ಕುಳಿತುಕೊಂಡು ಅಗರಬತ್ತಿಯ ಪ್ಯಾಕಿಂಗ್ ಮಾಡುವುದರಿಂದ, ಕುಂಠಿತಗೊಂಡಿರುವ ದೈಹಿಕ-ಮಾನಸಿಕ ಆರೋಗ್ಯಕ್ಕೆ ಚಾಲನೆ ದೊರೆಯುತ್ತದೆ. ಇಲ್ಲಿ ಅಗರಬತ್ತಿಯನ್ನು ಪ್ಯಾಕಿಂಗ್ ಮಾಡಲು ಅವರುಗಳಿಗೆ ಒತ್ತಡ ಹೇರದೇ, ಎಂಡೋಸಲ್ಪಾನ್ ಪೀಡಿತರು ತಮ್ಮ ಇಚ್ಷೆಗೆ ತಕ್ಕಂತೆ ಪ್ಯಾಕಿಂಗ್ ಮಾಡಬಹುದಾಗಿದೆ.
ಇಲ್ಲಿನ ಎಂಡೋಸಲ್ಪಾನ್ ಪೀಡಿತರಾದ ನಾರಾಯಣರವರಿಗೆ ಅಗರಬತ್ತಿಯ ಪ್ಯಾಕಿಂಗ್ ತುಂಬಾ ಇಷ್ಟವಾಗಿದೆ ಎಂಬುವುದನ್ನು ತನ್ನದೇ ರೀತಿಯಲ್ಲಿ ವಿವರಿಸುತ್ತಾರೆ.

ಒಟ್ಟಿನಲ್ಲಿ ತಾವು ಮಾಡದ ತಪ್ಪುಗಳಿಗೆ ಬಲಿಪಶುಗಳಾದ ಇವರುಗಳು, ದೈಹಿಕ-ಮಾನಸಿಕ ಆರೋಗ್ಯದ ಕೊಂಡಿಯಾಗಿ ಅಗರಬತ್ತಿ ಕೆಲಸ ಮಾಡುತ್ತಿದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ನಿಜವಾಗಿಯೂ ಧರ್ಮಸ್ಢಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

 

Author : Reshma Kanyadi

Author's Profile

I as a journalism student.

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited