Untitled Document
Sign Up | Login    
Dynamic website and Portals
  
June 9, 2016

ಮೆಕ್ಸಿಕೋಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಮೆಕ್ಸಿಕೋಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಮೆಕ್ಸಿಕೋ : ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರವಾಸದ ಕೊನೆ ಭಾಗವಾಗಿ ಮೆಕ್ಸಿಕೋ ತಲುಪಿದ್ದಾರೆ.

ಮೆಕ್ಸಿಕೋದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನರೇಂದ್ರ ಮೋದಿ ಅವರನ್ನು, ಮೆಕ್ಸಿಕೋದ ವಿದೇಶಾಂಗ ವ್ಯವಹಾರಗಳ ಸಚಿವ ಕ್ಲೌಡಿಯಾ ರುಯೆಜ್ ಮಸಿಯು ಅವರು ಸ್ವಾಗತಿಸಿದರು.

ನರೇಂದ್ರ ಮೋದಿ ಮೆಕ್ಸಿಕೋದ ಅಧ್ಯಕ್ಷ ಎನ್ರಿಕ್ ಪೆನಾ ನಿಯೆಟೋ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಎನ್​ಎಸ್​ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆಯೂ ಪ್ರಧಾನಿ ಮನವಿ ಮಾಡಲಿದ್ದಾರೆ.

ಪ್ರವಾಸಕ್ಕೂ ಮೊದಲು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೆಕ್ಸಿಕೋ ಅಧ್ಯಕ್ಷ ನಿಯೆಟೋ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇನೆ. ಲ್ಯಾಟಿನ್ ಅಮೆರಿಕ ಭಾಗದಲ್ಲಿ ಮೆಕ್ಸಿಕೋ ಭಾರತದ ಪ್ರಮುಖ ಮಿತ್ರ ರಾಷ್ಟ್ರ. ಕಳೆದ 30 ವರ್ಷಗಳಲ್ಲಿ ಇದು ಭಾರತೀಯ ಪ್ರಧಾನಿಯೊಬ್ಬರ ಮೊದಲ ದ್ವಿಪಕ್ಷೀಯ ಭೇಟಿ. ಮೆಕ್ಸಿಕೋಗೆ ನನ್ನ ಭೇಟಿ ಅಲ್ಪ ಅವಧಿಯದ್ದಾಗಿದ್ದರೂ ಸಹ ಪ್ರಮುಖವಾದುದು ಎಂದು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited