Untitled Document
Sign Up | Login    
Dynamic website and Portals
  
June 9, 2016

ಎನ್ಎಸ್ ಜಿ ಸದಸ್ಯತ್ವಕ್ಕೆ ಭಾರತ ಸೇರ್ಪಡೆಗೆ ಮೆಕ್ಸಿಕೋದಿಂದ ಬೆಂಬಲ

ಎನ್ಎಸ್ ಜಿ ಸದಸ್ಯತ್ವಕ್ಕೆ ಭಾರತ ಸೇರ್ಪಡೆಗೆ ಮೆಕ್ಸಿಕೋದಿಂದ ಬೆಂಬಲ

ಮೆಕ್ಸಿಕೋ : ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ)ಕ್ಕೆ ಭಾರತದ ಸೇರ್ಪಡೆಗೆ ಮೆಕ್ಸಿಕೋ ಕೂಡ ಬೆಂಬಲ ಘೋಷಿಸಿದೆ.

ಪಂಚ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಮೆಕ್ಸಿಕೋಗೆ ಭೇಟಿ ನೀಡಿದ್ದು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮೆಕ್ಸಿಕೋ ಅಧ್ಯಕ್ಷ ಎನ್ರಿಕೆ ಪೇನ ನಿಯೆಟೊ ವಿಶ್ವ ಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹಕ್ಕೆ ಭಾರತ ಸೇರ್ಪಡೆಯಾಗುವುದಕ್ಕೆ ಮೆಕ್ಸಿಕೋ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದ್ದಾರೆ.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಮೆಕ್ಸಿಕೋ ಅಧ್ಯಕ್ಷರ ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದಾರೆ.

ಸ್ವಿಟ್ಜರ್ಲ್ಯಾಂಡ್, ಮೆಕ್ಸಿಕೋ ದೇಶಗಳ ಜೊತೆಗೆ ಅಮೆರಿಕ, ಫ್ರಾನ್ಸ್, ಬ್ರಿಟನ್, ರಷ್ಯಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡಿವೆ ಈ ಬೆಳವಣಿಗೆಯನ್ನು ಭಾರತದ ರಾಜತಾಂತ್ರಿಕ ಶ್ರಮಕ್ಕೆ ಫಲಪ್ರದವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited