Untitled Document
Sign Up | Login    
Dynamic website and Portals
  
January 13, 2016

2016-17ನೇ ಸಾಲಿನ ಸಿಇಟಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) 2016-17ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥಿಗಳು ಕೆಇಎ ವೆಬ್‌ಸೈಟ್‌ http://kea.kar.nic.in/ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಅಭ್ಯರ್ಥಿಗಳಿಗೆ ಆನ್‌ಲೈನ್‌ ಅರ್ಜಿ ಭರ್ತಿ ವೇಳೆ ಗೊಂದಲವಾಗದಂತೆ ಸಂಪೂರ್ಣ ಮಾರ್ಗದರ್ಶನ ನೀಡುವ ಇ-ಬ್ರೋಷರ್‌ (ವಿದ್ಯುನ್ಮಾನ ಮಾಹಿತಿ ಪುಸ್ತಕ) ಕನ್ನಡ ಹಾಗೂ ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಸಲು ಜ.13ರಿಂದ ಫೆ.13ರವರೆಗೆ ಒಂದು ತಿಂಗಳ ಕಾಲಾವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕವನ್ನು ನಿಗದಿತ ಬ್ಯಾಂಕಿನಲ್ಲಿ ಪಾವತಿಸಲು ಫೆ. 15 ಕಡೆಯ ದಿನ. ಪ್ರವೇಶ ಪತ್ರ ಏ. 15ರ ನಂತರ ವೆಬ್‌ಸೈಟ್‌ನಲ್ಲಿ ದೊರೆಯಲಿದೆ. ಕರ್ನಾಟಕದ ಸಾಮಾನ್ಯ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ರೂ.650 ರೂ. ಮತ್ತು ಪ.ಜಾ, ಪ.ಪಂ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು ರೂ. 500 ರೂ. ಅರ್ಜಿ ಶುಲ್ಕ ಭರಿಸಬೇಕು.

ಅಭ್ಯರ್ಥಿಯು ಆನ್‌ ಲೈನ್‌ನಲ್ಲಿ ಅರ್ಜಿ ಭರ್ತಿಗೆ ತನ್ನ ವಿದ್ಯಾರ್ಥಿ ನೊಂದಣಿ ಸಂಖ್ಯೆ ನಮೂದಿಸಿದ ತಕ್ಷಣ ಅರ್ಜಿಯಲ್ಲಿ ವಿದ್ಯಾರ್ಥಿಯ ಸ್ವವಿವರ ಗೋಚರಿಸಲಿದೆ. ಮಾಹಿತಿಗೆ http://kea.kar.nic.in/ ವೆಬ್‌ಸೈಟ್‌ ನೋಡಬಹುದು ಎಂದು ಕೆಇಎ ಹೇಳಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited