Untitled Document
Sign Up | Login    
Dynamic website and Portals
  
November 5, 2015

ಗೋಲ್ಡ್ ಬಾಂಡ್ ಮತ್ತು ಚಿನ್ನ ನಗದೀಕರಣ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಚಿನ್ನ ನಗದೀಕರಣ ಮತ್ತು ಗೋಲ್ಡ್ ಬಾಂಡ್ ಯೋಜನೆಗಳಿಗೆ ಚಾಲನೆ ಚಿನ್ನ ನಗದೀಕರಣ ಮತ್ತು ಗೋಲ್ಡ್ ಬಾಂಡ್ ಯೋಜನೆಗಳಿಗೆ ಚಾಲನೆ

ನವದೆಹಲಿ : ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನ ನಗದೀಕರಣ (Gold Monetisation) ಮತ್ತು ಗೋಲ್ಡ್ ಬಾಂಡ್ ಯೋಜನೆಗಳಿಗೆ ಚಾಲನೆ ನೀಡಿದರು.

ಭಾರತದಲ್ಲಿ ೨೦,೦೦೦ ಟನ್ ನಿಷ್ಕ್ರಿಯ ಚಿನ್ನವಿದೆ, ಆದ್ದರಿಂದ ನಾವೆಲ್ಲ ಬಡವರು. ಈ ವರ್ಷ ಇಲ್ಲಿಯವರೆಗೆ ೫೬೨ ಟನ್ ಬಂಗಾರ ಖರೀದಿಸಿ ಭಾರತ ಚೀನಾವನ್ನು ಹಿಂದಕ್ಕೆ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು.

ಯೋಜನೆಗಳ ಯಶಸ್ವಿಗೆ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಾರೆ. ಭಾರತದಲ್ಲಿ ಚಿನ್ನವನ್ನು ಬಿಟ್ಟು ಬೇರೆನು ಮಹಿಳೆಯರ ಹೆಸರಿನಲ್ಲಿರುವುದಿಲ್ಲ. ಇದು ಅವರ ಶಕ್ತಿಯ ವಿಷಯ. ಮಹಿಳೆಯರಿಂದಲೆ ಈ ಯೋಜನೆ ಯಶಸ್ವೀಗಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಒಬ್ಬ ವ್ಯಕ್ತಿಗೆ ಗೋಲ್ಡ್ ಬಾಂಡ್ ಯೋಜನೆಯಲ್ಲಿ ವಾರ್ಷಿಕವಾಗಿ 500 ಗ್ರಾಂ ಮಿತಿ ಇರುತ್ತದೆ. ಇಂತಹ ಬಾಂಡ್ ಗಳನ್ನು 5-7 ವರ್ಷದವರೆಗೆ ನೀಡಲಾಗುತ್ತದೆ. ಬಾಂಡ್ ಗಳು 2, 5, 10 ಹಾಗು ಇತರ ಮುಖಬೆಲೆಯದ್ದಾಗಿದ್ದು, ಕನಿಷ್ಠ 5-7 ವರ್ಷಗಳದ್ದಾಗಿರುತ್ತದೆ.

ಚಿನ್ನ ನಗದೀಕರಣ ಯೋಜನೆಯಲ್ಲಿ ಬಳಕೆ ಮಾಡದ ಚಿನ್ನವನ್ನು ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿಗೆ ಬ್ಯಾಂಕ್ ಗಳಲ್ಲಿ ಠೇವಣಿ ಇಡಬಹುದು.

ಇದೇ ವೇಳೆ ಅಶೋಕ ಚಕ್ರ ಮತ್ತು ಮಹಾತ್ಮ ಗಾಂಧೀಜಿ ಯವರ ಭಾವಚಿತ್ರಗಳಿರುವ 10 ಮತ್ತು 20 ಗ್ರಾಂಗಳ ಚಿನ್ನದ ನಾಣ್ಯಗಳನ್ನೂ ಪ್ರಧಾನಿ ಬಿಡುಗಡೆ ಮಾಡಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited