Untitled Document
Sign Up | Login    
Dynamic website and Portals
  
September 9, 2015

ಗೋಲ್ಡ್ ಬಾಂಡ್ ಮತ್ತು ಚಿನ್ನ ನಗದೀಕರಣ ಯೋಜನೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ

ನವದೆಹಲಿ : ಭೌತಿಕ ರೂಪದಲ್ಲಿ ಲೋಹದ ಬೇಡಿಕೆಯನ್ನು ಕಡಿಮೆ ಮಾಡಲು ಮತ್ತು ಮನೆಗಳಲ್ಲಿ ಮತ್ತು ಇತರೆಡೆ ಬಳಕೆ ಮಾಡದ ಚಿನ್ನವನ್ನು ಸದ್ಬಳಕೆ ಮಾಡಲು ಬುಧವಾರ ನಡೆದ ಸಂಪುಟ ಸಭೆಯಲ್ಲಿ ಗೋಲ್ಡ್ ಬಾಂಡ್ ಮತ್ತು ಚಿನ್ನ ನಗದೀಕರಣ (Gold Monetisation) ಯೋಜನೆಗಳಿಗೆ ಒಪ್ಪಿಗೆ ದೊರೆತಿದೆ.

ಈ ಎರಡೂ ಯೋಜನೆಗಳೂ ಸುರಕ್ಷಿತ ಮತ್ತು ಆರ್ಥಿಕವಾಗಿ ಹೆಚ್ಚು ಸ್ಥಿರ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಪುಟ ಸಭೆಯ ನಂತರ ತಿಳಿಸಿದ್ದಾರೆ.

ಒಬ್ಬ ವ್ಯಕ್ತಿಗೆ ಗೋಲ್ಡ್ ಬಾಂಡ್ ಯೋಜನೆಯಲ್ಲಿ ವಾರ್ಷಿಕವಾಗಿ 500 ಗ್ರಾಂ ಮಿತಿ ಇರುತ್ತದೆ. ಇಂತಹ ಬಾಂಡ್ ಗಳನ್ನು 5-7 ವರ್ಷದವರೆಗೆ ನೀಡಲಾಗುತ್ತದೆ.

ಸಂಪುಟ ಸಭೆ ಇಂದು ಗೋಲ್ಡ್ ಬಾಂಡ್ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಈ ಯೋಜನೆಯಡಿಯಲ್ಲಿ ಭೌತಿಕ ರೂಪ ಚಿನ್ನ ಕರೀದಿಸುವ ಮೊದಲು ಭಾರತೀಯ ನಾಗರಿಕರು ಗೋಲ್ಡ್ ಬಾಂಡ್ ಕರೀದಿಸಬಹುದು ಎಂದು ಜೇಟ್ಲಿ ಹೇಳಿದ್ದಾರೆ.

ಚಿನ್ನಕ್ಕೆ ಪರ್ಯಾಯ ಹಣಕಾಸು ಹೂಡಿಕೆಯಾಗಿ 2015-16 ರ ಬಜೆಟ್ ನಲ್ಲಿ ಸಾವರಿನ್‌ ಗೋಲ್ಡ್‌ ಬಾಂಡ್‌ ಯೋಜನೆಯನ್ನು ಪ್ರಕಟಿಸಲಾಗಿತ್ತು.

ಬಾಂಡ್ ಗಳು 2, 5, 10 ಹಾಗು ಇತರ ಮುಖಬೆಲೆಯದ್ದಾಗಿದ್ದು, ಕನಿಷ್ಠ 5-7 ವರ್ಷಗಳದ್ದಾಗಿರುತ್ತದೆ. ಇದರಿಂದ ಮಧ್ಯಮಾವಧಿಯ ಚಿನ್ನದ ಬೆಲೆಯಲ್ಲಿನ ಏರಿಳಿತಗಳಿಂದ ಹೂಡಿಕೆದಾರನಿಗೆ ರಕ್ಷಣೆ ಸಿಗುತ್ತದೆ ಎಂದು ಅರುಣ್ ಜೇಟ್ಲಿ ತಿಳಿಸಿದರು.

ಚಿನ್ನ ನಗದೀಕರಣ ಯೋಜನೆಯಲ್ಲಿ ಬಳಕೆ ಮಾಡದ ಚಿನ್ನವನ್ನು ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿಗೆ ಬ್ಯಾಂಕ್ ಗಳಲ್ಲಿ ಠೇವಣಿ ಇಡಬಹುದು.

ಇದು ಕಪ್ಪುಹಣ ವಿನಾಯಿತಿ ಯೋಜನೆ ಅಲ್ಲ, ಸಾಮನ್ಯ ತೆರಿಗೆ ನೀತಿ ಅನ್ವಯವಾಗುತ್ತದೆ ಎಂದು ಜೇಟ್ಲಿ ಹೇಳಿದರು.

ಪ್ರತಿವರ್ಷ 1,000 ಟನ್ ಚಿನ್ನ ಆಮದಾಗುತ್ತದೆ. ಬಂಡವಾಳ ಹೂಡಿಕೆಗಾಗಿ ಜನರು ಅಷ್ಟು ಚಿನ್ನವನ್ನು ಬಳಸದೆ ಇಟ್ಟಿರುತ್ತಾರೆ. ಚಿನ್ನ ನಗದೀಕರಣ ಯೋಜನೆಯ ಉಪಯೋಗ ಪಡೆದುಕೊಂಡು ಜನರು ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟು ಅದಕ್ಕೆ ಬಡ್ಡಿ ಪಡೆಯಬಹುದು ಎಂದು ಜೇಟ್ಲಿ ತಿಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited