ಬೆಂಗಳೂರು : ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಷರತ್ತುಬದ್ಧ ಅನುಮತಿಯನ್ನು ನೀಡಿದೆ.
ಎತ್ತಿನಹೊಳೆ ಯೋಜನೆ ಅನುಷ್ಠಾನದಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಕೆಎನ್ ಸೋಮಶೇಖರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಎನ್ ಜಿಟಿ ತಿರಸ್ಕರಿಸಿದ್ದು, ಯೋಜನೆಯ ಮೊದಲ ಹಂತದ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಿದೆ.
3 ಅರ್ಜಿಗಳಲ್ಲಿ ಒಂದು ಅರ್ಜಿ ವಿಚಾರಣೆ ನಡೆಸಿದ ಎನ್ ಜಿಟಿ ಇಂದು ಕೇವಲ ಒಂದು ಅರ್ಜಿಯ ಕುರಿತ ತೀರ್ಪು ಪ್ರಕಟಿಸಿದೆ. ಎತ್ತಿನಹೊಳೆ ವಿರುದ್ಧ ಸಲ್ಲಿಸಿರುವ ಇನ್ನೂ 2 ಅರ್ಜಿ ವಿಚಾರಣೆ ಬಾಕಿ ಇದೆ. ಷರತ್ತುಗಳನ್ನು ಅಂತಿಮ ತೀರ್ಪಿನಲ್ಲಿ ಪ್ರಕಟಿಸುವುದಾಗಿ ಎನ್ ಜಿಟಿ ಪೀಠ ಸ್ಪಷ್ಟಪಡಿಸಿದೆ.