Untitled Document
Sign Up | Login    
Dynamic website and Portals
  
August 1, 2016

ಪೆಟ್ರೋಲ್, ಡೀಸೆಲ್ ದರ ಮತ್ತೆ ಇಳಿಕೆ

Petrol Bunk Petrol Bunk

ನವದೆಹಲಿ : ವಾಹನ ಸವಾರರಿಗೆ ಸಂತಸದ ಸುದ್ದಿ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಇಳಿಕೆಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ 1.42 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 2.01 ರೂಪಾಯಿ ಇಳಿಕೆಯಾಗಿದೆ.

ನೂತನ ಬೆಲೆ ಜುಲೈ 31ರ ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಜಾರಿಗೆ ಬಂದಿದ್ದು, ಕಳೆದ ಒಂದು ತಿಂಗಳಲ್ಲಿ 3ನೇ ಸಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾದಂತಾಗಿದೆ.

ಈ ಮುನ್ನ ಜುಲೈ 1 ರಂದು ಪೆಟ್ರೋಲ್ 89 ಪೈಸೆ ಮತ್ತು ಡೀಸೆಲ್ 49 ಪೈಸೆ ಕಡಿಮೆಯಾಗಿತ್ತು. ಜುಲೈ 16 ರಂದು ಪೆಟ್ರೋಲ್ 2.25 ರೂ ಮತ್ತು ಡೀಸೆಲ್ 42 ಪೈಸೆ ಕಡಿಮೆಯಾಗಿತ್ತು.

ಇದಕ್ಕೂ ಮುನ್ನ ಮೇ 1 ರಿಂದ ಸತತ ನಾಲ್ಕು ಬಾರಿ ಬೆಲೆ ಏರಿಕೆಯಾಗಿತ್ತು. ಈ ಅವಧಿಯಲ್ಲಿ ಪೆಟ್ರೋಲ್ 4.52 ರೂ. ಮತ್ತು ಡೀಸೆಲ್ 7.72 ರೂ. ಏರಿಕೆಯಾಗಿತ್ತು.

 

 

Share this page : 
 

Table 'bangalorewaves.bv_news_comments' doesn't exist