Untitled Document
Sign Up | Login    
Dynamic website and Portals
  
October 16, 2015

ಬಿಹಾರ್ ವಿಧಾನಸಭೆ ಚುನಾವಣೆಃ ಶುಕ್ರವಾರ ಎರಡನೇ ಹಂತದ ಮತದಾನ

ಪಟ್ನಾ : ಬಿಹಾರ್ ವಿಧಾನಸಭೆಗೆ 5 ಹಂತದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಶುಕ್ರವಾರ ಎರಡನೇ ಹಂತದ ಚುನಾವಣೆ ಪ್ರಾರಂಭವಾಗಿದೆ. ಶುಕ್ರವಾರ 32 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ.

ಬೆಳಗ್ಗೆ 9 ಗಂಟೆಗೆ ಶೇಕಡಾ 13 ರಷ್ಟು ಮತದಾನವಾದ ವರದಿಯಾಗಿದೆ.

6 ಜಿಲ್ಲೆಗಳ ಒಟ್ಟು 32 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ 456 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈ ಪ್ರದೇಶಗಳು ನಕ್ಸಲ್ ಪೀಡಿತ ಪ್ರದೇಶಗಳಾಗಿದ್ದು ಭಾರೀ ಭದ್ರತೆವ್ಯವಸ್ಥೆ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ 32 ಕ್ಷೇತ್ರಗಳ ಮತದಾನ ಸಮಯವನ್ನು ಒಂದು ಮತ್ತು ಎರಡು ಗಂಟೆ ಕಡಿತಗೊಳಿಸಲಾಗಿದೆ.

ಎಲ್ಲಾ 32 ಕ್ಷೇತ್ರಗಳಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ ಆದರೆ 11 ಕ್ಷೇತ್ರಗಳಲ್ಲಿ 3 ಗಂಟೆಗೆ, 12 ಕ್ಷೇತ್ರಗಳಲ್ಲಿ 4 ಗಂಟೆಗೆ ಮತ್ತು ಉಳಿದ 9 ಕ್ಷೇತ್ರಗಳಲ್ಲಿ ಮಾತ್ರ ಸಂಜೆ 5 ಗಂಟೆಗೆ ಮತದಾನ ಮುಕ್ತಾಯವಾಗಲಿದೆ ಎಂದು ಸಹಾಯಕ ಮುಖ್ಯ ಚುನಾವಣಾ ಅಧಿಕಾರಿ ಆರ್ ಲಕ್ಷ್ಮಣನ್ ತಿಳಿಸಿದ್ದಾರೆ.

ಅಕ್ಟೋಬರ್ 12 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ 57 ರಷ್ಟು ಮತದಾನವಾಗಿತ್ತು. ಮೊದಲ ಹಂತದಲ್ಲಿ ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಪೈಕಿ 49 ಕೇತ್ರಗಳಿಗೆ ಚುನಾವಣೆ ನಡೆದಿತ್ತು.

ಉಳಿದ 3 ಹಂತದ ಚುನಾವಣೆ ಅಕ್ಟೋಬರ್ 28, ನವೆಂಬರ್ 1 ಮತ್ತು ನವೆಂಬರ್ 5 ರಂದು ನಡೆಯಲಿದೆ. ನವೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited