Untitled Document
Sign Up | Login    
Dynamic website and Portals
  
September 19, 2015

ನರೇಂದ್ರ ಮೋದಿ ಫೇಕು, ಅವರದ್ದು ಸೂಟ್ ಬೂಟ್ ನ ಸರಕಾರ: ರಾಹುಲ್ ಗಾಂಧಿ

ಚಂಪಾರಣ್ : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತಮ್ಮ ಎಂದಿನ ವಾಗ್ದಾಳಿ ಮುಂದುವರಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮೋದಿ ಒಬ್ಬ 'ಫೇಕು' ಹಾಗೂ ಅವರ ಸರಕಾರ ಸೂಟ್ ಬೂಟ್ ನ ಸರಕಾರ ಎಂದು ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಅಂಗವಾಗಿ ಶನಿವಾರ ಚಂಪಾರಣ್ಯದ ರಾಮ್ ನಗರದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಕಳೆದ ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ ಎಂದು ಹೇಳಿದರು.

'ಪ್ರಧಾನಿ ಮೋದಿ ಎರಡು ಲಕ್ಷ ಉದ್ಯೋಗ ನೀಡುವುದಾಗಿಯೂ, ಬೆಲೆಗಳನ್ನು ಇಳಿಸುವುದಾಗಿಯೂ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿಯೂ ಭರವಸೆ ನೀಡಿದ್ದರು. ಅದೆಲ್ಲವೂ ಈಡೇರಿವೆಯೇ?' ಎಂದು ಪ್ರಶ್ನಿಸಿದ ರಾಹುಲ್, ಮೋದಿ ಹಿಂದೆಯೂ ಒಬ್ಬ 'ಫೇಕು' ಆಗಿದ್ದರು, ಈಗಲೂ ಆಗಿದ್ದಾರೆ' ಎಂದು ಹೇಳಿದರು.

ರ್ಯಾಲಿಯಲ್ಲಿ ತಮ್ಮ ಭಾಷಣದ ಬಹುತೇಕ ಸಮಯ ಪ್ರಧಾನಿ ಮೋದಿಯವರ ಬಟ್ಟೆಯ ಬಗ್ಗೆ ರಾಹುಲ್ ಗಾಂಧಿ ವಿನಿಯೋಗಿಸಿದರು.

'ಮೋದೀಜಿ ಒಬ್ಬ ಚಹಾ ಮಾರುವವನಾಗಿ ಆರಂಭಿಸಿದರು. ಆಗ ಅವರು ಕುರ್ತಾ ಧರಿಸುತ್ತಿದ್ದರು. ಈಗೀಗ ಅವರ ಬಟ್ಟೆ ಬರೆಗಳು ಉತ್ತಮಗೊಳ್ಲುತ್ತಿವೆ. ಕುರ್ತಾದಿಂದ ಅವರು 15 ಲಕ್ಷ ಬೆಲೆಬಾಳುವ ಸೂಟ್ ಗೆ ವರ್ಗಾವಣೆಗೊಂಡಿದ್ದಾರೆ' ಎಂದು ರಾಹುಲ್ ಹೇಳಿದರು.

'ಪ್ರಧಾನಿ ಮೋದಿ ಈಗ ಕೇವಲ ಸೂಟ್ ಧರಿಸಿದವರೊಡನೆ ಮಾತ್ರ ವ್ಯವಹರಿಸುತ್ತಾರೆ' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಕಳೆದ ಆಗಸ್ಟ್ 30ರಂದು ನಡೆದ 'ಸ್ವಾಭಿಮಾನ್' ರ್ಯಾಲಿಯ ನಂತರ ಬಿಹಾರದಲ್ಲಿ ಇದು ರಾಹುಲ್ ಗಾಂಧಿಯ ಪ್ರಥಮ ಸಾರ್ವಜನಿಕ ಪ್ರಚಾರ ಸಭೆಯಾಗಿದೆ. ಸ್ವಾಭಿಮಾನ್ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್.ಜೆ.ಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಮುಂತಾದವರು ಭಾಗವಹಿಸಿದ್ದರು.

ವಿಶೇಷವೆಂದರೆ, ಈ ಸಭೆಯಲ್ಲಿ ನಿತೀಶ್ ಕುಮಾರ್ ಹಾಗೂ ಲಾಲೂ ಯಾದವ್ ಭಾಗವಹಿಸಲಿಲ್ಲ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited