Untitled Document
Sign Up | Login    
Dynamic website and Portals
  
September 19, 2015

ಬಿಹಾರ ಚುನಾವಣೆ: ಸಮೀಕ್ಷೆಯಂತೆ ಮೋದಿ ನೇತೃತ್ವದ ಎನ್.ಡಿ.ಎ ಗೆ ನಿಛ್ಚಳ ಬಹುಮತ

ನವದೆಹಲಿ : ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರ ಅಧಿಕಾರಕ್ಕೆ ಬರಲಿದೆ. ಝೀ ಮೀಡಿಯಾ ಸಮೂಹ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಎನ್.ಡಿ.ಎ. ಒಕ್ಕೂಟಕ್ಕೆ ನಿಛ್ಚಳ ಬಹುಮತ ದೊರೆಯಲಿದೆ.

ಎನ್.ಡಿ.ಎ ಗೆ ನಿತೀಶ್ ಕುಮಾರ್ ನೇತೃತ್ವದ ಮೈತ್ರಿ ಒಕ್ಕೂಟ (ಮಹಾಘಟಬಂಧನ್) ಕ್ಕಿಂತ ಅಧಿಕ ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಮೈತ್ರಿ ಒಕ್ಕೂಟದಲ್ಲಿ ಆರ್.ಜೆ.ಡಿ, ಜೆ.ಡಿ.ಯು, ಕಾಂಗ್ರೆಸ್ ಹಾಗೂ ಜನತಾ ದಳ (ಸೆಕ್ಯುಲರ್) ಪಕ್ಷಗಳು ಸೇರಿವೆ.

ಎನ್.ಡಿ.ಎ ಮೈತ್ರಿಕೂಟದಲ್ಲಿ ಬಿಜೆಪಿ, ಜಿತಿನ್ ರಾಮ್ ಮಾಂಜ್ಹಿ ನೇತೃತ್ವದ ಹಿಂದೂಸ್ಥಾನ್ ಆವಾಮ್ ಮೋರ್ಛಾ, ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ್ ಜನಶಕ್ತಿ ಪಾರ್ಟಿ ಹಾಗೂ ಕೇಮ್ದ್ರ ಸಚಿವ ಉಪೇಂದ್ರ ಕುಷ್ವಾಹ ಅವರ ರಾಷ್ಟ್ರೀಯ ಲೋಕ್ ಸಮತಾ ಪಾರ್ಟಿ ಸೇರಿವೆ.

ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಶೇ.50.8 ಮತದಾರರು ಎನ್.ಡಿ.ಎ ಗೆ ಮತಹಾಕಲಿದ್ದು, ಶೇ.42.5 ಮತದಾರರು ಮಹಾಘಟಬಂಧನ್ ಗೆ ಮತ್ತು ಶೇ.6.7 ಮತದಾರರು ಉಳಿದ ಪಕ್ಷಗಳಿಗೆ ಮತ ನೀಡಲಿದ್ದಾರೆ.

ಸಮೀಕ್ಷೆಯಂತೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಒಕ್ಕೂಟಕ್ಕೆ 140 ಅಸೆಂಬ್ಲಿ ಸ್ಥಾನಗಳು ಲಭ್ಯವಾಗಲಿವೆ. ನಿತೀಶ್ ಕುಮಾರ್ ನೇತೃತ್ವದ ಮೈತ್ರಿಕೂಟಕ್ಕೆ 70 ಸ್ಥಾನಗಳು ಸಿಗಲಿವೆ. ಉಳಿದ 33 ಸ್ಥಾನಗಳಲ್ಲಿ ತೀವ್ರ ಹಣಾಹಣಿ ನಿರೀಕ್ಷಿಸಲಾಗಿದ್ದು, ಅವು ಯಾರ ಕಡೆ ವಾಲಬಹುದು ಎಂದು ಹೇಳುವುದು ಕಷ್ಠವೆನ್ನಲಾಗಿದೆ.

ಅಚ್ಚರಿಯೆಂದರೆ, ಈ ಬಾರಿ ಶೇ.41.2 ಮುಸ್ಲಿಂ ಮತಗಳು ಎನ್.ಡಿ.ಎ ಒಕ್ಕೂಟಕ್ಕೆ ದೊರೆಯುವ ಸಾಧ್ಯತೆಗಳಿವೆ. ಉಳಿದ ಶೇ.52.4 ಮುಸ್ಲಿಂ ಮತಗಳು ಮೈತ್ರಿಕೂಟಕ್ಕೆ ಲಭ್ಯವಾಗುವ ನಿರೀಕ್ಷೆ ಇದೆ.

ಸಮೀಕ್ಷೆಯಂತೆ ಬಹುತೇಕ ಹಿಂದೂಗಳು ಎನ್.ಡಿ.ಎ ಗೆ ಮತಹಾಕಲಿದ್ದಾರೆ. ಶೇ.52.6 ಹಿಂದೂ ಮತಗಳು ಎನ್.ಡಿ.ಎ ಗೆ ಸಿಗಲಿದ್ದು, ಶೇ.40.8 ಹಿಂದೂಗಳು ಮೈತ್ರಿಕೂಟಕ್ಕೂ, ಮಿಕ್ಕ ಶೇ.6 ಹಿಂದೂಗಳು ಇತರ ಪಕ್ಷಗಳಿಗೆ ಮತದಾನ ಮಾಡಲಿದ್ದಾರೆ.

ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಶೇ.47.8 ಯಾದವರ ಮತಗಳು ಲಭಿಸಲಿವೆ. ನಿತೀಶ್ ಕುಮಾರ್ ಅವರ ಮೈತ್ರಿ ಕೂಟಕ್ಕೆ ಶೇ.47.5 ಹಾಗೂ ಇತರರಿಗೆ ಶೇ.4.7 ಯಾದವ ಮತಗಳು ಸಿಗುವ ಸಾಧ್ಯತೆಗಳಿವೆ.

ಸಮೀಕ್ಷೆಯಂತೆ ಶೇ.52 ಮಹಿಳಾ ಮತಗಳು ಎನ್.ಡಿ.ಎ. ಪಾಲಾಗಲಿವೆ. ಶೇ.40.5 ಮಹಿಳೆಯರು ಮೈತ್ರಿಕೂಟಕ್ಕೆ ಒಲವು ತೋರಿದರೆ, ಮಿಕ್ಕ ಶೇ.7.5 ಮಹಿಳಾ ಮತಗಳು ಇತರ ಪಕ್ಷಗಳಿಗೆ ಸಲ್ಲುವ ನಿರೀಕ್ಷೆಯಿದೆ.

ಬಿಹಾರ ವಿಧಾನ ಸಭಾ ಚುನಾವಣೆ ಐದು ಹಂತಗಳಲ್ಲಿ, ಒಕ್ಟೋಬರ್ 12ರಿಂದ ನವಂಬರ್ 5ರವರೆಗೆ ನಡೆಯಲಿದೆ. ನವಂಬರ್ ೮ಕ್ಕೆ ಫಲಿತಾಂಶ ಹೊರಬರಲಿದೆ.

ಈ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ ಅವರ ಮಧ್ಯೆ ಪ್ರತಿಷ್ಠೆಯ ಪೈಪೋಟಿಯಾಗಿದ್ದು, ಚುನಾವಣೆ ಗೆಲ್ಲಲು ಬಿಜೆಪಿ ಹಾಗೂ ಜೆಡಿಯು ತನ್ನೆಲ್ಲಾ ರಣತಂತ್ರಗಳನ್ನೂ ಉಪಯೋಗಿಸುತ್ತಿವೆ.

ಬಿಹಾರ ಅಸೆಂಬ್ಲಿಯಲ್ಲಿ 243 ಸ್ಥಾನಗಳಿವೆ. ಒಕ್ಟೋಬರ್ 12, 16, 28, ನವಂಬರ್ 1 ಹಾಗೂ 5ರಂದು ಒಟ್ಟು ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಪ್ರಸಕ್ತ ವಿಧಾನಸಭೆಯ ಅವಧಿ ನವಂಬರ್ 29ಕ್ಕೆ ಪೂರ್ಣಗೊಳ್ಲಲಿದೆ.

ಬಿಹಾರದಲ್ಲಿ ಒಟ್ಟು 6.68 ಕೋಟಿ ಮತದಾರರಿದ್ದು, ಇವರಲ್ಲಿ 2.04 ಕೋಟಿ ಮತದಾರರು 18 ರಿಂದ 29 ವರ್ಷ ವಯಸ್ಸಿನವರಾಗಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited