Untitled Document
Sign Up | Login    
Dynamic website and Portals
  
September 18, 2015

50 ವರ್ಷಗಳಲ್ಲಿ ಮಾಡದೇ ಇರುವುದನ್ನು 50 ತಿಂಗಳಲ್ಲಿ ಮಾಡುತ್ತೇನೆಃ ಪ್ರಧಾನಿ ನರೇಂದ್ರ ಮೋದಿ

ಇ-ರಿಕ್ಷಾ  ಫಲಾನುಭವಿಗಳ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತುಕತೆ ಇ-ರಿಕ್ಷಾ ಫಲಾನುಭವಿಗಳ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತುಕತೆ

ವಾರಣಾಸಿ : ಶುಕ್ರವಾರ ಒಂದು ದಿನದ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಭೇಟಿಯ ಸಂದರ್ಭದಲ್ಲಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, 501 ಪೆಡಲ್ ರಿಕ್ಷಾಗಳನ್ನು ಮತ್ತು 101 ಇ-ರಿಕ್ಷಾಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಪ್ರಮುಖ ಅಂಶಗಳು ಈ ಕೆಳಗಿನಂತಿವೆಃ

* ಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಸರ್ಕಾರದ ಮೊದಲ ಗುರಿ

* ವರ್ಷಗಳ ವರೆಗೆ ನಾವು ಗರೀಬಿ ಹಟಾವೋ ಎಂಬ ಘೋಷವಾಕ್ಯ ಮಾತ್ರ ಕೇಳಿದ್ದೇವೆ.

* ಹಗಲು ರಾತ್ರಿ ಬಡವರ ಕಲ್ಯಾಣದ ಬಗ್ಗೆ ಮಾತನಾಡುವುದು ಸಂಪ್ರದಾಯವಾಗಿದೆ.

* ಆದರೆ ಬಡವರ ಜೀವನದಲ್ಲಿ ಅತ್ಯಲ್ಪ ಬದಲಾವಣೆ ಕಂಡುಬಂದಿದೆ.

* ತಂತ್ರಜ್ನಾನಗಳಿಂದ ಬಡವರು ಹೆಚ್ಚು ಸಂಪಾದನೆ ಮಾಡಬಹುದು.

* ಆಟೋ ಚಾಲಕರು ನಗರಕ್ಕೆ ಮಾರ್ಗದರ್ಶಿಗಳಾಗಿದ್ದಾರೆ. ಅವರು ಪ್ರವಾಸಿಗರ ಮೇಲೆ ಪ್ರಭಾವ ಬೀರುತ್ತಾರೆ.

* ಇ-ರಿಕ್ಷಾಗಳು ವಾರಣಾಸಿಯ ಭವಿಷ್ಯವನ್ನು ಬದಲಾವಣೆ ಮಾಡುತ್ತವೆ.

* ನಾನು ಆಟೋ ಚಾಲಕರಲ್ಲಿ ಮನವಿ ಮಾಡುತ್ತೇನೆ, ಬಡತನದಿಂದಾಗಿ ನಿಮ್ಮ ಮಕ್ಕಳ ವಿದ್ಯಾಬ್ಯಾಸದಲ್ಲಿ ರಾಜಿ ಮಾಡಿಕೊೞಬೇಡಿ.

* ನಾವು ನಮ್ಮ ಮಕ್ಕಳನ್ನು ವಿದ್ಯಾವಂತರನ್ನಗಿಸಿದರೆ, ಪ್ರಪಂಚದ ಯಾವುದೇ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ.

* ಅವರು (ಹಿಂದಿನ ಸರ್ಕಾರ) 50 ವರ್ಷಗಳಲ್ಲಿ ಮಾಡದೇ ಇರುವುದನ್ನು 50 ತಿಂಗಳಲ್ಲಿ ಮಾಡುತ್ತೇನೆ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited