Untitled Document
Sign Up | Login    
Dynamic website and Portals
  
September 18, 2015

ವಾರಣಾಸಿಯಲ್ಲಿ 90 ನಿಮಿಷದಲ್ಲಿ 40 ನಿಯೋಗಗಳನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ (ಫೈಲ್ ಚಿತ್ರ) ಪ್ರಧಾನ ಮಂತ್ರಿ ನರೇಂದ್ರ ಮೋದಿ (ಫೈಲ್ ಚಿತ್ರ)

ವಾರಣಾಸಿ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಒಂಬತ್ತು ತಿಂಗಳ ನಂತರದ ಭೇಟಿ ಇದಾಗಿದೆ. ಕಳೆದ ಎರಡು ಭೇಟಿ, ಭಾರಿ ಮಳೆಯ ಕಾರಣದಿಂದ ರದ್ದಾಗಿತ್ತು.

ಶುಕ್ರವಾರ ಮಧ್ಯಾಹ್ನ, ಪ್ರಧಾನಿ ಮೋದಿ ಅವರು 90 ನಿಮಿಷಗಳಲ್ಲಿ 40 ನಿಯೋಗಗಳನ್ನು ಭೇಟಿ ಮಾಡಲಿದ್ದಾರೆ.

ಭೇಟಿಯ ಸಮಯದಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲು ರಿಂಗ್ ರಸ್ತೆ ಸೇರಿದಂತೆ ರಸ್ತೆ ಮತ್ತು ವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡುವ ನಿರೀಕ್ಷೆ ಇದೆ.

ತಮ್ಮ ಹುಟ್ಟುಹಬ್ಬದ ನಂತರ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರಿಗೆ, ಸ್ವಚ್ಛ ಕಾಶಿ ಯನ್ನು ಉಡುಗೊರೆಯಾಗಿ ನೀಡಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ. ಪ್ರಧಾನಿ ಅವರು 66 ನೇ ವರ್ಷಕ್ಕೆ ಕಾಲಿಟ್ಟಿ ಈ ಸಂದರ್ಭದಲ್ಲಿ, ಬಿಜೆಪಿ ಕಾರ್ಯಕರ್ತರು 660 ಡಸ್ಟ್ ಬಿನ್ ಗಳನ್ನು ಗಂಗಾ ನದಿಯಲ್ಲಿ ಪ್ರವಾಸಿಗರನ್ನು ದೋಣಿಯಲ್ಲಿ ಸುತ್ತಾಡಿಸುವ ಬೆಸ್ತರಿಗೆ ನೀಡಲು ನಿರ್ಧರಿಸಿದ್ದಾರೆ. ಇದರ ಜೊತೆ 6600 ನಗರದ ದಿನಗೂಲಿಗಳಿಗೆ ಟೂತ್ ಪೇಸ್ಟ್, ಟೂತ್ ಬ್ರಷ್, ಸೋಪ್, ಶಾಂಪೂ ಮುಂತಾದ ವಸ್ತುಗಳಿರುವ ಕಿಟ್ ನೀಡಲು ನಿರ್ಧರಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited