Untitled Document
Sign Up | Login    
Dynamic website and Portals
  
August 22, 2015

ಬಿಬಿಎಂಪಿ ಚುನಾವಣೆ ಮತದಾನ ಆರಂಭ

ಬಿಬಿಎಂಪಿ ಚುನಾವಣೆ ಮತದಾನ ಆರಂಭ ಬಿಬಿಎಂಪಿ ಚುನಾವಣೆ ಮತದಾನ ಆರಂಭ

BW News Bureau : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮತದಾನ ಶನಿವಾರ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ. ಒಟ್ಟು 197 ವಾರ್ಡ್​ಗಳಿಗೆ ಚುನಾವಣೆ ನಡೆಯುತ್ತಿದ್ದು, 6,759 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 198 ವಾರ್ಡ್‌ಗಳ ಪೈಕಿ ಹೊಂಗಸಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರಿಂದ, ಶನಿವಾರ 197 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ ಮತದಾನ ನಿಧಾನಗತಿಯಲ್ಲಿ ಸಾಗಿದ್ದು, 11 ಗಂಟೆಯ ಸಮಯದಲ್ಲಿ ಕೇವಲ ಶೇಕಡಾ 9 ರಷ್ಟು ಮತದಾನವಾದ ವರದಿಯಾಗಿದೆ.

73.88 ಲಕ್ಷ ಮತದಾರರು ಮತ ಚಲಾವಣೆ ಹಕ್ಕು ಪಡೆದುಕೊಂಡಿದ್ದು, ಸಂಜೆ 5 ಗಂಟೆ ತನಕ ಮತದಾನ ನಡೆಯಲಿದೆ.

20 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಮೂಲಸೌಕರ್ಯ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿ ವೀರನ ಪಾಳ್ಯದ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಜ್ಞಾನಭಾರತಿ ವಾರ್ಡ್‌ (129) ವ್ಯಾಪ್ತಿಗೆ ಬರುವ ವೀರನ ಪಾಳ್ಯದಲ್ಲಿ 600 ಮತದಾರರಿದ್ದಾರೆ.

ಶಿವಾಜಿನಗರದಲ್ಲಿ ಮತದಾನ ಮಾಡಲು ಬಂದ ಫಯಾಜ್ ಎನ್ನುವ ಯುವಕನ ತಲೆಯ ಮೇಲೆ ಮರದ ಕೊಂಬೆ ಬಿದ್ದ ಕಾರಣ ಸಾವನ್ನಪ್ಪಿದ್ದಾನೆ.

ಮಂಗಳವಾರ, ಆ. 25 ರಂದು ಮತ ಎಣಿಕೆ ನಡೆಯಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : BBMP

ರಸ್ತೆ ಗುಂಡಿ ಮುಚ್ಚಲು 10 ದಿನಗಳ ಗಡುವು: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಆದೇಶ
  • ರಸ್ತೆ ಗುಂಡಿ ಮುಚ್ಚಲು 10 ದಿನಗಳ ಗಡುವು: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಆದೇಶ
  • ನಗರದ ರಸ್ತೆ ಗುಂಡಿಗಳನ್ನು 10 ದಿನದೊಳಗೆ ಮುಚ್ಚುವಂತೆ ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.
  • ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ನೇಮಕ
  • ಬೆಂಗಳೂರಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿ ಹೈಕೋರ್ಟ್ ಆದೇಶ; ಉಲ್ಲಂಘನೆಗೆ ಭಾರೀ ದಂಡ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited