Untitled Document
Sign Up | Login    
Dynamic website and Portals
  
July 8, 2015

ಮೈಕ್ರೋಸಾಫ್ಟ್ ನಿಂದ ಈ ವರ್ಷ ಇನ್ನಷ್ಟು ಉದ್ಯೋಗ ಕಡಿತ ಸಾಧ್ಯತೆ

ಸಿಯಾಟ್ಲ್ : ಬಹುರಾಷ್ಟ್ರೀಯ ಐಟಿ ಸಂಸ್ಥೆ ಮೈಕ್ರೋಸಾಫ್ಟ್ ಈ ವರ್ಷ ಮತ್ತಷ್ಟು ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ. ಬದಲಾಗುತ್ತಿರುವ ತಾಂತ್ರಿಕತೆಯ ಪರಿಣಾಮವಾಗಿ ಕಂಪನಿ ವೆಚ್ಚಕ್ಕೆ ಕತ್ತರಿ ಹಾಕಲು ನಿರ್ಧರಿಸಿದೆ ಎನ್ನಲಾಗಿದೆ.

ಕಳೆದ ವರ್ಷ ಮೈಕ್ರೋಸಾಫ್ಟ್ ಸುಮಾರು 18,000 ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಿತ್ತು. ಇದರ ಜೊತೆಗೆ ಈ ವರ್ಷ ಇನ್ನಷ್ಟು ಉದ್ಯೋಗ ಕಡಿತಗೊಳ್ಳುವ ಸಾಧ್ಯತೆ ಇದೆ.

ಈ ಬಾರಿಯ ಉದ್ಯೋಗ ಕಡಿತ ಮೈಕ್ರೋಸಾಫ್ಟ್ ಹಾರ್ಡ್ ವೇರ್ ವಿಭಾಗದ ಮತ್ತು ಕಳೆದ ವರ್ಷ ನೋಕಿಯಾದಿಂದ ಸ್ವಾಧೀನಪಡಿಸಿಕೊಂಡ ಸ್ಮಾರ್ಟ್ ಫೋನ್ ವಿಭಾಗದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಮೈಕ್ರೋಸಾಫ್ಟ್ ಈ ಬಗ್ಗೆ ಸೂಕ್ಷ್ಮವಾಗಿ ಸೂಚನೆಯನ್ನು ಈ ಮೊದಲು ನೀಡುತ್ತಲೇ ಬಂದಿದೆ. ಕಂಪನಿಗಾಗಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ಮೈಕ್ರೋಸಾಫ್ಟ್ ನ ಸಿಇಓ ಸತ್ಯಾ ನಡೇಲಾ ಈ ಮೊದಲು ಹೇಳಿಕೆ ನೀಡಿದ್ದರು.

ಕಳೆದ ವರ್ಷ ನೋಕಿಯಾ ಸಂಸ್ಥೆಯ ಮೊಬೈಲ್ ಹ್ಯಾಂಡ್ ಸೆಟ್ ಬುಸಿನೆಸ್ ಅನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ಮೈಕ್ರೋಸಾಫ್ಟ್ ಶೇರ್ ಮಾರುಕಟ್ಟೆಯಲ್ಲಿ ಕುಸಿತ ಕಾಣಲಾರಂಭಿಸಿದೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಆಪಲ್ ನ ಐಓಎಸ್ ಮತ್ತು ಗೂಗಲ್ ನ ಆಂಡ್ರಾಯ್ಡ್ ಗೆ ಪರ್ಯಾಯವಾಗಿ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಅನ್ನು ತರುವಲ್ಲಿ ಮೈಕ್ರೋಸಾಫ್ಟ್ ಈ ವರೆಗೆ ಯಶಸ್ಸು ಕಾಣಲಿಲ್ಲ.

ಸದ್ಯದಲ್ಲೇ ಪಿಸಿ, ಸ್ಮಾರ್ಟ್ ಫೋನ್ ಹಾಗೂ ಇತರ ಸಾಧನಗಳಿಗೆ ಹೊಸ ಆಪರೇಟಿಂಗ್ ಸಿಸ್ಟಮ್ ಬಿಡುಗಡೆಗೊಳಿಸಲು ಮೈಕ್ರೋಸಾಫ್ಟ್ ಸಿದ್ದತೆ ನಡೆಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited