Untitled Document
Sign Up | Login    
Dynamic website and Portals
  
July 7, 2015

ಪರಸ್ಪರ ಸಹಕಾರ ವೃದ್ದಿಗೆ 3 ಒಪ್ಪಂದಗಳಿಗೆ ಭಾರತ ಉಜ್ಬೇಕಿಸ್ತಾನ ಸಹಿ

ಸುದ್ದಿಗೋಷ್ಠಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಮತ್ತು ಉಜ್ಬೇಕಿಸ್ತಾನದ ಅಧ್ಯಕ್ಷ  ಇಸ್ಲಾಮ್ ​ಕರಿಮೋವ್ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉಜ್ಬೇಕಿಸ್ತಾನದ ಅಧ್ಯಕ್ಷ ಇಸ್ಲಾಮ್ ​ಕರಿಮೋವ್

ತಾಷ್ಕೆಂಟ್ : ಮಧ್ಯ ಏಷಿಯಾ ರಾಷ್ಟ್ರಗಳಿಗೆ ಇದೇ ಮೊದಲ ಬಾರಿ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉಜ್ಬೇಕಿಸ್ತಾನದ ಅಧ್ಯಕ್ಷ ಇಸ್ಲಾಮ್ ​ಕರಿಮೋವ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಆಫ್ಗಾನಿಸ್ತಾನದ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ನಡೆಸಲಾಯಿತು. ಜೊತೆಗೆ ಸಂಸ್ಕೃತಿ ಮತ್ತು ಪ್ರವಾಸೋದ್ಯಮದಲ್ಲಿ ಪರಸ್ಪರ ಸಹಕಾರ ವೃದ್ಧಿಗೆ ಮೂರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ತಮ್ಮ ಎಂಟು ದಿನಗಳ ಮಧ್ಯ ಏಷಿಯಾ ಮತ್ತು ರಷ್ಯಾ ಪ್ರವಾಸದಲ್ಲಿ, ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್ ಗೆ ಬಂದ ಪ್ರಧಾನಿ ನರೇಂದ್ರ ಮೋದಿಯವರನ್ನು ವಿಧ್ಯುಕ್ತವಾಗಿ ಸ್ವಾಗತಿಸಲಾಯಿತು.

ಉಭಯ ನಾಯಕರು ಆಫ್ಗಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಚರ್ಚೆಯ ಜೊತೆಗೆ ರಕ್ಷಣೆ, ವ್ಯಾಪಾರ ವಹಿವಾಟು ಮತ್ತು ಆಣು ಶಕ್ತಿ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ನಿರ್ಧರಿಸಿದರು.

ಚರ್ಚೆಯ ನಂತರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ, ಏಷ್ಯಾದಲ್ಲೇ ಉಜ್ಬೇಕಿಸ್ತಾನವು ತನ್ನದೇ ಆದ ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಭಾರತವು ಉಜ್ಬೇಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ. ಈ ಸಂಬಂಧ ಅಧ್ಯಕ್ಷ ಕರಿಮೋವ್ ಜೊತೆ ಸಾಕಷ್ಟು ವಿಷಯಗಳ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದರು.

ನೆರೆ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿರುವ ಭಯೋತ್ಪಾದನೆಯ ಕುರಿತೂ ಸಹ ಪರಸ್ಪರ ಚರ್ಚೆ ನಡೆಸಲಾಯಿತು ಎಂದು ಪ್ರಧಾನಿ ಮೋದಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಗಳವಾರ ಭಾರತದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮಾರಕಕ್ಕೆ ಭೇಟಿ ನೀಡುವುದಾಗಿ ಹೇಳಿದ ಪ್ರಧಾನಿ ಮೋದಿ, ಭಾರತದ ಮಾಜಿ ಪ್ರಧಾನಿಯ ಸ್ಮಾರಕ ಸಂರಕ್ಷಣೆ ಮಾಡಿದ ತಾಷ್ಕೆಂಟ್ ಮತ್ತು ಉಜ್ಬೇಕಿಸ್ತಾನದ ಜನತೆಗೆ ನಾವೆಲ್ಲ ಕೃತಜ್ಞರಾಗಿದ್ದೇವೆ ಎಂದರು.

ಇದೊಂದು ಆಶಾದಾಯಕ ಭೇಟಿ, ಇದು ಮುಂದಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ದಿಗೆ ಅಡಿಪಾಯವಿದ್ದಂತೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಉಜ್ಬೇಕಿಸ್ತಾನದಿಂದ ಮಂಗಳವಾರ ಕಜಖಿಸ್ತಾನ್ ಕ್ಕೆ ಪ್ರಯಾಣ ಬೆಳಸಲಿದ್ದಾರೆ. ನಂತರ ಜುಲೈ 8 ರಂದು ರಷ್ಯಾ, ರಷ್ಯಾದಿಂದ 10 ರಂದು ತುರ್ಕ್ ಮೇನಿಸ್ತಾನ್, 11 ರಂದು ಕಿರ್ಗಿಸ್ತಾನ್ ಮತ್ತು 12 ರಂದು ತಜಿಕಿಸ್ತಾನ್ ಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ಚಿತ್ರ ಕೃಪೆ : http://pmindia.gov.in/

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited