ಕಜಖಿಸ್ತಾನ : ಉಜ್ಬೇಕಿಸ್ತಾನ ಮತ್ತು ಕಜಖಿಸ್ತಾನ್ ದ ಪ್ರವಾಸ ಮುಗಿಸಿದ ಪ್ರಧಾನಿ ಮೋದಿ ಬುಧವಾರ ಜು.10ರಂದು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊೞಲು ರಷ್ಯಾಗೆ ತೆರಳಲಿದ್ದಾರೆ.
ಶೃಂಗಸಭೆಯ ಜೊತೆಗೆ, ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಜು.8 ರಂದು ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರನ್ನು ಜು.10 ರಂದು ಭೇಟಿ ಮಾಡುವ ನಿರೀಕ್ಷೆ ಇದೆ.
ಇಂದು, ಬ್ರಿಕ್ಸ್ (BRICS) ನ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ ದೇಶಗಳು ಸೇರಿ ಒಪ್ಪಿಗೆ ಸೂಚಿಸಿದ ಹೊಸ ಬ್ರಿಕ್ಸ್ ಅಭಿವೃದ್ದಿ ಬ್ಯಾಂಕ್ ನ ಉದ್ಘಾಟನೆ ಆಗಲಿದೆ. ಈ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗಿ ಮೊದಲ್ ಆರು ವರ್ಷಗಳ ಅವಧಿಗೆ ಕನ್ನಡಿಗರಾದ ಕೆ.ವಿ.ಕಾಮತ್ ಆಯ್ಕೆಯಾಗಿದ್ದಾರೆ.
ಚೀನಾ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ, ಪಾಕ್ ಅಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಆರ್ಥಿಕ ಕಾರಿಡಾರ್, ಮುಂಬಯಿ ದಾಳಿಯ ರುವಾರಿ ಲಖ್ವಿಯ ಬಿಡುಗಡೆ ಬಗ್ಗೆ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಚೀನಾದ ನಡೆಯ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.