Untitled Document
Sign Up | Login    
Dynamic website and Portals
  
July 4, 2015

ಯುಪಿಎಸ್​ಸಿ ಫಲಿತಾಂಶ ಪ್ರಕಟ : ಮೊದಲ ನಾಲ್ಕು ಸ್ಥಾನ ಮಹಿಳೆಯರ ಪಾಲು

ದೆಹಲಿ : ದೇಶದ ನಾಗರಿಕ ಸೇವೆಗಳ 2014ನೇ ಸಾಲಿನ ಪರೀಕ್ಷಾ ಫಲಿತಾಂಶವನ್ನು ಯುಪಿಎಸ್​ಸಿ ಶನಿವಾರ ಪ್ರಕಟಿಸಿದೆ. ಮೊದಲ 4 ಸ್ಥಾನಗಳನ್ನು ಮಹಿಳೆಯರೇ ಪಡೆದಿದ್ದು, ಹೀರಾ ಸಿಂಘಾಲ್ ಪ್ರಥಮ, ದ್ವೀತಿಯ ಸ್ಥಾನ ರೇಣುರಾಜ್, ತೃತೀಯ ಸ್ಥಾನ ನಿಧಿಗುಪ್ತಾ ಮತ್ತು ವಂದನಾ ರಾವ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಮೊದಲ ಸ್ಥಾನಗಳಿಸಿರುವ ಹೀರಾ, ಭಾರತೀಯ ಕಂದಾಯ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಅಂಗವಿಕಲೆಯಾಗಿರುವ ಹೀರಾ, ಸಾಮಾನ್ಯ ವರ್ಗದಲ್ಲಿ ತೇರ್ಗಡೆಯಾಗಿದ್ದಾರೆ. ಐಎಎಸ್ ಅಧಿಕಾರಿಯಾಗಿ ಅಂಗವಿಕಲರಿಗೆ ಸಹಾಯ ಮಾಡುವುದು ತನ್ನ ಗುರಿ ಎಂದು ಹೀರಾ ತಿಳಿಸಿದ್ದಾರೆ. 2ನೇ ಸ್ಥಾನಗಳಿಸಿರುವ ರೇಣುರಾಜ್, ಕೇರಳಾ ನಿವಾಸಿಯಾಗಿದ್ದು ವೃತ್ತಿಯಲ್ಲಿ ವೈದ್ಯೆ.

ಕರ್ನಾಟಕದ 52 ಅಭ್ಯರ್ಥಿಗಳು ಸೇರಿ, ಒಟ್ಟು 1,236 ಅಭ್ಯರ್ಥಿಗಳು ಐಎಎಸ್, ಐಎಫ್ಎಸ್, ಐಪಿಎಸ್ ಮತ್ತು ಕೇಂದ್ರ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಎಂಬ 3 ಹಂತದಲ್ಲಿ ಪ್ರತಿ ವರ್ಷ ಯುಪಿಎಸ್​ಸಿ ಪರೀಕ್ಷೆ ನಡೆಸಲಾಗುತ್ತದೆ. ಕಳೆದ ವರ್ಷ ಆಗಸ್ಟ್ 24 ರಂದು ನಡೆದ ಪ್ರಾಥಮಿಕ ಪರೀಕ್ಷೆಯನ್ನು ಸುಮಾರು 4.51 ಲಕ್ಷ ಮಂದಿ ಬರೆದಿದ್ದರು. ಆ ಪೈಕಿ 16,993 ಮಂದಿ ಡಿಸೆಂಬರ್ ನಲ್ಲಿ ನಡೆದ ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದರು. ಅವರಲ್ಲಿ 3,308 ಮಂದಿ ಸಂದರ್ಶನಕ್ಕೆ ಅರ್ಹತೆ ಪಡೆದಿದ್ದರು.

ಇದೇ ಮೊದಲ ಬಾರಿಗೆ ಸಂದರ್ಶನ ಸುತ್ತು ಮುಗಿದ ನಾಲ್ಕೇ ದಿನಕ್ಕೆ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶವನ್ನು ಯುಪಿಎಸ್​ಸಿ ವೆಬ್ ಸೈಟ್​ ( www.upsc.gov.in) ನಲ್ಲಿ ನೋಡಬಹುದು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited