Untitled Document
Sign Up | Login    
Dynamic website and Portals
  
June 28, 2015

ಯೋಗ ದಿನ ವಿಶ್ವವನ್ನು ಒಂದುಗೂಡಿಸಿದೆ: ಪ್ರಧಾನಿ ಮೋದಿ

Narendra Modi (File Pic) Narendra Modi (File Pic)

ನವದೆಹಲಿ : ನಮ್ಮ ಪರಂಪರೆಯನ್ನು ವಿಶ್ವಕ್ಕೆ ತಿಳಿಯಪಡಿಸಲು ನಾವು ಉತ್ತಮ ಯೋಗ ಶಿಕ್ಷಕರನ್ನು ನೀಡಬೇಕು. ಎಲ್ಲರೂ ಯೋಗ ಮಾಡಿ ಇದು ನಿಮ್ಮ ಉನ್ನತಿಗೆ ಸಹಕಾರಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಆಕಾಶವಾಣಿಯಲ್ಲಿ ಪ್ರಸಾರವಾದ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಯಶಸ್ವಿಗೆ ಅಪಾರ ಸಂತಸ ವ್ಯಕ್ತ ಪಡಿಸಿದರು.

ಜೂನ್‌ 21 ರಂದು ವಿಶ್ವಾದ್ಯಂತ ಯೋಗದ ಮೂಲಕ ಸೂರ್ಯನನ್ನು ಸ್ವಾಗತಿಸಲಾಯಿತು. ಇಡಿ ಜಗತ್ತು ಭಾರತದ ಯೋಗಕ್ಕೆ ಬೆಲೆ ನೀಡಿರುವುದು ಭಾರತೀಯರು ಹೆಮ್ಮೆ ಪಡುವ ವಿಚಾರ, ವಿಶ್ವದ ಪ್ರಮುಖ ಸ್ಥಳಗಳಾದ ಫ್ರಾನ್ಸ್‌ನ ಐಫೆಲ್‌ ಟವರ್‌,ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವಾರ್‌ ನಲ್ಲೂ ಯೋಗ ಮಾಡಲಾಗಿದೆ. ವಿಶೇಷವಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್‌ ಕೀ ಮೂನ್‌ ಅವರೂ ಯೋಗ ಮಾಡಿದ್ದಾರೆ ಎಂದರು.

ನಮ್ಮ ದೇಶದ ಸೈನಿಕರು ಸಿಯಾಚಿನ್‌ನಲ್ಲಿ, ನ್ಯಾವಿ ಶಿಪ್‌ಗಳಲ್ಲಿ, ಯೋಗ ಮಾಡಿದ್ದಾರೆ. ಅಂದು ರಾಜ್‌ ಪಥ್‌ ಯೋಗ ಪಥ್‌ ಆಗಿ ಬದಲಾಗಿತ್ತು ಎಂದರು.

ಕಳೆದ ಬಾರಿ ನಾನು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಜನರ ಬಳಿ ಪ್ರವಾಸದ ಫೋಟೊಗಳನ್ನು #Incredible India ದಲ್ಲಿ ಹಂಚಿಕೊಳ್ಳಲು ಹೇಳಿದ್ದೆ , ಜನರು ಇದಕ್ಕೆ ಅಭೂತಪೂರ್ವ ಸ್ಪಂದನೆ ನೀಡಿದ್ದು, ಲಕ್ಷಾಂತರ ಜನರು ಫೋಟೊಗಳನ್ನು ಕಳುಹಿಸುತ್ತಿದ್ದಾರೆ, ಇದನ್ನು ಮುಂದುವರಿಸಬೇಕು ಎಂದರು.

ಮಳೆ ನೀರಿನ ಕೊಯ್ಲಿನ ಮೂಲಕ ಹಳ್ಳಿ ಮತ್ತು ಪಟ್ಟಣದ ಜನರು ಜಲ ಸಂರಕ್ಷಣೆ ಮಾಡಲು ಕರೆ ನೀಡಿದರು. ಮಳೆ ಗಾಲದಲ್ಲಿ ಹೆಚ್ಚು ಹೆಚ್ಚು ಗಿಡ ನೆಡುವ ಮೂಲಕ ಪರಿಸರ ಬೆಳೆಸಲು ಕರೆ ನೀಡಿದರು. ಮಳೆಗಾಲದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ ಕಾಯಿಲೆಗಳಿಂದ ದೂರವಿರಲು ಕರೆ ನೀಡಿದರು.

ಹರಿಯಾಣದ ಗ್ರಾಮವೊಂದರಲ್ಲಿ ಗ್ರಾಮದ ಸರಪಂಚ್ ಒರ್ವರು, 'ಸೆಲ್ಫಿ ವಿತ್ ಡಾಟರ್ಸ್' ಅಭಿಯಾನವನ್ನು ಆರಂಭಿಸಿದ್ದಾರೆ. ಇದು ಬಹಳ ಒಳ್ಳೆಯ ಕೆಲಸ. ಹೆಣ್ಣು ಮಕ್ಕಳ ಪೋಷಕರು ತಮ್ಮ ಮಗಳ ಜೊತೆಗೆ ಸೆಲ್ಫಿ ತೆಗೆದು #SelfieWithDaughter ಮೂಲಕ ಫೋಟೋವನ್ನು ಹಂಚುವ ಸರ್ಕಾರದ 'ಬೇಟಿ ಬಚಾವೋ, ಬೇಟಿ ಪಡಾವೋ' ಅಡಿ ಬರಹ ನೀಡಿ ಅಭಿಯಾನಕ್ಕೆ ಬೆಂಬಲ ನೀಡಲು ಕೋರಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited